ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

9 ವರ್ಷಗಳಿಂದ ಮನೆಗೆ ತೆರಳಿಲ್ಲ: ಮುಂಬೈನ ಯುವ ಸ್ಪಿನ್ನರ್ ಕಾರ್ತಿಕೇಯ

ಅಕ್ಷರ ಗಾತ್ರ

ಮುಂಬೈ:'ನಾನು ಒಂಬತ್ತು ವರ್ಷಗಳಿಂದ ಮನೆಗೆ ತೆರಳಿಲ್ಲ. ಜೀವನದಲ್ಲಿ ಏನನ್ನಾದರೂ ಸಾಧಿಸಿದಾಗ ಮಾತ್ರ ಮನೆಗೆ ಹಿಂತಿರುಗಲು ನಿರ್ಧರಿಸಿದ್ದೆ' ಎಂದು ಮುಂಬೈ ಇಂಡಿಯನ್ಸ್‌ನ ಯುವ ಪ್ರತಿಭಾವಂತ 'ಮಿಸ್ಟರಿ' ಸ್ಪಿನ್ನರ್ ಕುಮಾರ್ ಕಾರ್ತಿಕೇಯ ಬಹಿರಂಗಪಡಿಸಿದ್ದಾರೆ.

ಗಾಯಾಳು ಅರ್ಷದ್ ಖಾನ್ ಪ್ರಸಕ್ತ ಸಾಲಿನ ಐಪಿಎಲ್‌ನಿಂದಲೇ ನಿರ್ಗಮಿಸಿದ್ದರಿಂದಉತ್ತರ ಪ್ರದೇಶದ 24 ವರ್ಷದ ಎಡಗೈ ಸ್ಪಿನ್ನರ್ ಕಾರ್ತಿಕೇಯ, ಮುಂಬೈ ಪರ ಆಡುವ ಅವಕಾಶವನ್ನು ಗಿಟ್ಟಿಸಿದ್ದರು.

ಅಲ್ಲದೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶನಿವಾರ ನಡೆದ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಕೇವಲ 19 ರನ್ ನೀಡಿ ನಾಯಕ ಸಂಜು ಸ್ಯಾಮ್ಸನ್ ವಿಕೆಟ್ ಗಳಿಸುವ ಮೂಲಕ ಪ್ರಭಾವಿ ಎನಿಸಿಕೊಂಡಿದ್ದರು.

ಜೀವನದಲ್ಲಿ ಸಾಧಿಸಬೇಕೆಂಬ ಛಲ ಅಚಲವಾಗಿದ್ದರಿಂದ ಕುಮಾರ್ ಕಾರ್ತಿಕೇಯ ಕೊನೆಗೂ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮನೆಗೆ ಬರುವಂತೆ ತಂದೆ-ತಾಯಿ ಒತ್ತಾಯಿಸುತ್ತಿದ್ದರು. ಆದರೆ ನನ್ನ ಗುರಿಯಲ್ಲಿ ಬದ್ಧನಾಗಿದ್ದೆ. ಈಗ ಐಪಿಎಲ್ ನಂತರ ಮನೆಗೆ ಮರಳುವುದಾಗಿ ತಿಳಿಸಿದ್ದಾರೆ.

ದಿಗ್ಗಜ ಸಚಿನ್ ತೆಂಡೂಲ್ಕರ್ನೀಡಿದ ಸಲಹೆಯಿಂದಆತ್ಮವಿಶ್ವಾಸ ವೃದ್ಧಿಸಿತು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT