ಮಂಗಳವಾರ, ಮಾರ್ಚ್ 21, 2023
23 °C

IPL 2022: ಆರ್‌ಸಿಬಿ ಬಳಿಯಿದೆ ಇನ್ನೆರಡು ಪಂದ್ಯ; ಪ್ಲೇ-ಆಫ್ ಪ್ರವೇಶ ಸಾಧ್ಯವೇ?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್‌ನತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ.

ಐಪಿಎಲ್‌ನಲ್ಲಿ ಚೊಚ್ಚಲ ಟ್ರೋಫಿ ಎದುರು ನೋಡುತ್ತಿರುವ ಆರ್‌ಸಿಬಿ, ಇದುವರೆಗೆ ಆಡಿರುವ 12 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದು ಐದರಲ್ಲಿ ಸೋಲು ಅನುಭವಿಸಿದ್ದು, ಒಟ್ಟು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

ಇದನ್ನೂ ಓದಿ: 

ಆರ್‌ಸಿಬಿ ಬಳಿ ಇನ್ನೆರಡು ಪಂದ್ಯಗಳಿದ್ದು, ಎರಡರಲ್ಲೂ ಗೆದ್ದರೆ ಒಟ್ಟು 18 ಅಂಕಗಳೊಂದಿಗೆ ಸುಗಮವಾಗಿ ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಡಲಿದೆ.

ಹಾಗೊಂದು ವೇಳೆ ಒಂದು ಪಂದ್ಯದಲ್ಲಿ ಗೆದ್ದು ಮತ್ತೊಂದರಲ್ಲಿ ಸೋತರೂ 16 ಅಂಕಗಳೊಂದಿಗೆ ಪ್ಲೇ-ಆಫ್‌ಗೆ ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಆದರೆ ನೆಗೆಟಿವ್ ರನ್‌ರೇಟ್ ಇರುವುದರಿಂದ ಎರಡರಲ್ಲೂ ಸೋತರೆ ಪ್ಲೇ-ಆಫ್ ಕನಸು ಭಗ್ನಗೊಳ್ಳಲಿದೆ.

ಫಫ್ ಡುಪ್ಲೆಸಿ ಬಳಗವು ಮೇ 13ರಂದು ಪಂಜಾಬ್ ಕಿಂಗ್ಸ್ ಮತ್ತು ಮೇ 19ರಂದು ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿವೆ.

ಇದೇ ಟೂರ್ನಿಯಲ್ಲಿ ಈ ತಂಡಗಳ ವಿರುದ್ಧದ ಮೊದಲ ಮುಖಾಮುಖಿಯಲ್ಲಿ ಆರ್‌ಸಿಬಿಗೆ ಸೋಲು ಎದುರಾಗಿತ್ತು ಎಂಬುದು ಗಮನಾರ್ಹ. ಮಾರ್ಚ್ 27ರಂದು ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಬಳಿಕ ಏಪ್ರಿಲ್ 30ರಂದು ಗುಜರಾತ್ ಟೈಟನ್ಸ್ ವಿರುದ್ಧವೂ ಆರು ವಿಕೆಟ್ ಅಂತರದ ಸೋಲಿಗೆ ಒಳಗಾಗಿತ್ತು.

ಈವರೆಗಿನ ಆರ್‌ಸಿಬಿ ಪಂದ್ಯಗಳ ಫಲಿತಾಂಶ ಇಂತಿದೆ:
ಪಂಜಾಬ್ ವಿರುದ್ಧ 5 ವಿಕೆಟ್ ಅಂತರದ ಸೋಲು
ಕೆಕೆಆರ್ ವಿರುದ್ಧ ಮೂರು ವಿಕೆಟ್ ಅಂತರದ ಗೆಲುವು
ರಾಜಸ್ಥಾನ್ ವಿರುದ್ಧ ನಾಲ್ಕು ವಿಕೆಟ್ ಅಂತರದ ಗೆಲುವು
ಮುಂಬೈ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು
ಚೆನ್ನೈ ವಿರುದ್ಧ 23 ರನ್ ಅಂತರದ ಸೋಲು
ಡೆಲ್ಲಿ ವಿರುದ್ಧ 16 ರನ್ ಅಂತರದ ಗೆಲುವು
ಲಖನೌ ವಿರುದ್ಧ 18 ರನ್ ಅಂತರದ ಗೆಲುವು
ಹೈದರಾಬಾದ್ ವಿರುದ್ಧ 9 ವಿಕೆಟ್ ಅಂತರದ ಸೋಲು
ರಾಜಸ್ಥಾನ್ ವಿರುದ್ಧ 29 ರನ್ ಅಂತರದ ಸೋಲು
ಗುಜರಾತ್ ವಿರುದ್ಧ 6 ವಿಕೆಟ್ ಅಂತರದ ಸೋಲು
ಚೆನ್ನೈ ವಿರುದ್ಧ 13 ರನ್ ಅಂತರದ ಗೆಲುವು
ಹೈದರಾಬಾದ್ ವಿರುದ್ಧ 67 ರನ್ ಅಂತರದ ಗೆಲುವು

ಐಪಿಎಲ್ 2022 ಅಂಕಪಟ್ಟಿ (55ನೇ ಪಂದ್ಯ ಅಂತ್ಯಕ್ಕೆ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು