ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಸತತ 13ನೇ ವರ್ಷ ವಿರಾಟ್ ಕೊಹ್ಲಿ 300 ರನ್ ಸಾಧನೆ

ಅಕ್ಷರ ಗಾತ್ರ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಸತತ 13ನೇ ಆವೃತ್ತಿಯಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಕೀರ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.

2010ರಿಂದ ಪ್ರಾರಂಭವಾಗಿ ಐಪಿಎಲ್ 2022ನೇ ಟೂರ್ನಿಯ ವರೆಗೂ ಎಲ್ಲ 13 ಆವೃತ್ತಿಗಳಲ್ಲೂ ಕಿಂಗ್ ಕೊಹ್ಲಿ 300ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

2010ನೇ ಐಪಿಎಲ್ ವರ್ಷ ಕೊಹ್ಲಿ ಪಾಲಿಗೆ ಉತ್ತಮವಾಗಿರಲಿಲ್ಲ. 16 ಪಂದ್ಯಗಳಲ್ಲಿ 27.90ರ ಸರಾಸರಿಯಲ್ಲಿ 307 ರನ್ ಗಳಿಸಿದ್ದರು. ಒಂದು ಅರ್ಧಶತಕ (58) ಮಾತ್ರ ಗಳಿಸಿದ್ದರು.

2016ನೇ ಸಾಲಿನಲ್ಲಿ ಕೊಹ್ಲಿ ದಾಖಲೆಯ 973 ರನ್ ಗಳಿಸಿದ್ದರು. ಅಲ್ಲದೆ 81.08ರ ಸರಾಸರಿ ಕಾಪಾಡಿಕೊಂಡಿದ್ದರಲ್ಲದೆ ನಾಲ್ಕು ಶತಕಗಳನ್ನು ಗಳಿಸಿದ್ದರು.

ಪ್ರಸಕ್ತ ಸಾಲಿನಲ್ಲಿ ಕೊಹ್ಲಿ ಇದುವರೆಗೆ ಆಡಿರುವ 14 ಪಂದ್ಯಗಳಲ್ಲಿ 23.77ರ ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಇದು ಎರಡು ಅರ್ಧಶತಕಗಳನ್ನು ಒಳಗೊಂಡಿದೆ. ಮೂರು ಬಾರಿ ಗೋಲ್ಡನ್ ಡಕ್‌ ಔಟ್ ಆಗಿದ್ದಾರೆ. ಗರಿಷ್ಠ ಸ್ಕೋರ್ 73 ಆಗಿದೆ.

2010ರಿಂದ ಐಪಿಎಲ್‌ನಲ್ಲಿ ಕೊಹ್ಲಿ ಗಳಿಸಿದ ರನ್‌‌ಗಳ ಪಟ್ಟಿ:
2010: 307
2011: 557
2012: 364
2013: 634
2014: 359
2015: 505
2016: 973
2017: 308
2018: 530
2019: 464
2020: 466
2021: 405

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT