ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಪ್ರಭ್‌ಸಿಮ್ರನ್‌ ಶತಕ, ಪಂಜಾಬ್ ಗೆಲುವು

Published 13 ಮೇ 2023, 19:32 IST
Last Updated 13 ಮೇ 2023, 19:32 IST
ಅಕ್ಷರ ಗಾತ್ರ

ದೆಹಲಿ: ಪ್ರಭ್‌ಸಿಮ್ರನ್‌ ಸಿಂಗ್‌ ಅವರ ಶತಕದ ನೆರವಿನಿಂದ ಪಂಜಾಬ್‌ ಕಿಂಗ್ಸ್ ತಂಡದವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೋಲುಣಿಸಿ, ಪ್ಲೇ ಆಫ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡರು.

ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಪಂಜಾಬ್‌ 31 ರನ್‌ಗಳಿಂದ ಗೆದ್ದಿತು. ಈ ಸೋಲಿನೊಂದಿಗೆ ಡೆಲ್ಲಿ ಟೂರ್ನಿಯಿಂದ ಹೊರಬಿದ್ದಿತು.

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 ರನ್‌ ಗಳಿಸಿತು. ಹರ್‌ಪ್ರೀತ್ ಬ್ರಾರ್ (30ಕ್ಕೆ 4) ಅವರ ಬೌಲಿಂಗ್‌ಗೆ ನಲುಗಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ ಕೇವಲ 136 ರನ್ ಗಳಿಸಿತು.

ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಡೇವಿಡ್‌ ವಾರ್ನರ್‌ ಅವರು ಫೀಲ್ಡಿಂಗ್‌ ಮಾಡಲು ನಿರ್ಧರಿಸಿದರು.ಇತರ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರೂ ಪ್ರಭ್‌ಸಿಮ್ರನ್‌ (103 ರನ್‌, 65 ಎ., 4X10, 6X6) ಶತಕದ ಮೂಲಕ ಪಂಜಾಬ್‌ ತಂಡಕ್ಕೆ ಆಸರೆಯಾದರು.

ನಾಯಕ ಶಿಖರ್‌ ಧವನ್‌ (7), ಲಿಯಾಮ್‌ ಲಿವಿಂಗ್‌ಸ್ಟೋನ್‌ (4) ಮತ್ತು ಜಿತೇಶ್‌ ಶರ್ಮಾ (5) ಅವರು ಬೇಗನೇ ಔಟಾದರು.  45 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಪ್ರಭ್‌ಸಿಮ್ರನ್‌ ಮತ್ತು ಸ್ಯಾಮ್‌ ಕರನ್‌ (20) ಆಸರೆಯಾದರು. ನಾಲ್ಕನೇ ವಿಕೆಟ್‌ಗೆ 54 ಎಸೆತಗಳಲ್ಲಿ 72 ರನ್‌ ಸೇರಿಸಿದರು. ಪ್ರಭ್‌ಸಿಮ್ರನ್‌ ಅವರಿಗೆ ಇದು ಐಪಿಎಲ್‌ನಲ್ಲಿ ಚೊಚ್ಚಲ ಶತಕವಾಗಿದೆ.

ಡೆಲ್ಲಿ ಬ್ಯಾಟಿಂಗ್ ವೈಫಲ್ಯ: ಡೆಲ್ಲಿ ತಂಡದ ಪರ ವಾರ್ನರ್ (54) ಹಾಗೂ ಫಿಲ್ ಸಾಲ್ಟ್‌ (21) ಅವರು ಮೊದಲ ವಿಕೆಟ್‌ ಜೊತೆಯಾಟದಲ್ಲಿ 6.2 ಓವರ್‌ಗಳಲ್ಲಿ 69 ರನ್ ಸೇರಿಸಿದರು. ಆದರೆ ನಂತರ ಬಂದ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು.

ಸಂಕ್ಷಿಪ್ತ ಸ್ಕೋರ್‌: ಪಂಜಾಬ್‌ ಕಿಂಗ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 (ಪ್ರಭ್‌ಸಿಮ್ರನ್‌ ಸಿಂಗ್‌ 103, ಸ್ಯಾಮ್‌ ಕರನ್‌ 20, ಸಿಕಂದರ್‌ ರಝಾ ಔಟಾಗದೆ 11, ಇಶಾಂತ್‌ ಶರ್ಮಾ 27ಕ್ಕೆ 2, ಅಕ್ಷರ್‌ ಪಟೇಲ್‌ 27ಕ್ಕೆ 1, ಪ್ರವೀಣ್‌ ದುಬೆ 19ಕ್ಕೆ 1, ಕುಲದೀಪ್‌ ಯಾದವ್‌ 32ಕ್ಕೆ 1, ಮುಕೇಶ್‌ ಕುಮಾರ್‌ 3ಕ್ಕೆ 1). ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 136 (ಡೇವಿಡ್‌ ವಾರ್ನರ್‌ 54, ಫಿಲ್ ಸಾಲ್ಟ್‌ 21, ಅಮನ್ ಹಕೀಂ 16, ಕುಲದೀಪ್ ಯಾದವ್‌ 16; ಹರ್‌ಪ್ರೀತ್ ಬ್ರಾರ್ 30ಕ್ಕೆ 4, ನೇಥನ್ ಎಲಿಸ್‌ 26ಕ್ಕೆ 2‌, ರಾಹುಲ್ ಚಾಹರ್ 16ಕ್ಕೆ 2). ಫಲಿತಾಂಶ: ಪಂಜಾಬ್ ಕಿಂಗ್ಸ್‌ಗೆ 31 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT