ಧರ್ಮಶಾಲಾ: ಧರ್ಮಶಾಲಾದಲ್ಲಿ ಇಂದು (ಗುರುವಾರ) ನಡೆದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಪಂದ್ಯವನ್ನು ಭದ್ರತಾ ಕಾರಣದಿಂದಾಗಿ ಅರ್ಧದಲ್ಲೇ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಪಿಟಿಐ ವರದಿ ಮಾಡಿದೆ.

ಗಡಿಯಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವೆ ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಧರ್ಮಶಾಲಾದಲ್ಲಿ ಸಂಪೂರ್ಣ ಬ್ಲಾಕ್ ಔಟ್ ಕ್ರಮ ಅನುಸರಿಸಿದ್ದರ ಹಿನ್ನೆಲೆಯಲ್ಲಿ ಪಂದ್ಯವನ್ನು ಅರ್ಧದಲ್ಲೇ ರದ್ದುಗೊಳಿಸಿದೆ. ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಈ ಮೊದಲು ಮಳೆಯಿಂದಾಗಿ ಪಂದ್ಯ ಒಂದು ತಾಸು ವಿಳಂಬವಾಗಿ ಆರಂಭವಾಗಿತ್ತು. ಬಳಿಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 10.1 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು.

ಪ್ರಿಯಾಂಶ್ ಆರ್ಯ 70 ಹಾಗೂ ಪ್ರಭಸಿಮ್ರನ್ ಸಿಂಗ್ ಅಜೇಯ 50 ರನ್ ಗಳಿಸಿದ್ದರು.

ಪಂಜಾಬ್ ಬ್ಯಾಟಿಂಗ್..

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ದುಕೊಡಿದ್ದಾರೆ.

ಮಳೆಯಿಂದಾಗಿ ಪಂದ್ಯ ವಿಳಂಬ...

2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಇಂದು (ಗುರುವಾರ) ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸವಾಲನ್ನು ಎದುರಿಸುತ್ತಿದೆ.

ಈ ಪಂದ್ಯವು ಧರ್ಮಶಾಲಾದಲ್ಲಿ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಟಾಸ್ ಒಂದು ತಾಸಿನಷ್ಟು ವಿಳಂಬವಾಗಿತ್ತು. ಆದರೂ ಓವರ್ಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಸ್ಟೇಡಿಯಂನಲ್ಲಿ ಕಾದು ಕುಳಿತಿರುವ ಪ್ರೇಕ್ಷಕರಿಗೆ ಸಂಪೂರ್ಣ ಪಂದ್ಯದ ರಸದೌತಣ ಸಿಗಲಿದೆ.

ಪ್ಲೇ-ಆಫ್ ರೇಸ್...

ಆತಿಥೇಯ ಪಂಜಾಬ್ ಕಿಂಗ್ಸ್ ತಂಡವು ಎಲ್ಲ ವಿಭಾಗಗಳಲ್ಲಿಯೂ ಬಲಾಢ್ಯವಾಗಿದೆ. 11 ಪಂದ್ಯಗಳಲ್ಲಿ 7 ಗೆದ್ದು, 3 ಸೋತಿದೆ. 1 ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ತಂಡವು ಮೂರನೇ ಸ್ಥಾನದಲ್ಲಿದೆ.

ಮತ್ತೊಂದೆಡೆ ಪ್ಲೇಆಫ್ ಪ್ರವೇಶದ ಅವಕಾಶವನ್ಲು ಜೀವಂತವಾಗಿಟ್ಟುಕೊಳ್ಳಲು ಡೆಲ್ಲಿ ತಂಡಕ್ಕೆ ಈ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ. ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ 11 ಪಂದ್ಯಗಳಿಂದ 13 ಅಂಕಗಳನ್ನು ಗಳಿಸಿದೆ. ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
.IPL-2025: ಡೆಲ್ಲಿ ಕ್ಯಾಪಿಟಲ್ಸ್ಗೆ ಮಹತ್ವದ ಪಂದ್ಯ .IPL 2025 | KKR vs CSK: ಕೆಕೆಆರ್ ಪ್ಲೇಆಫ್ ಕನಸಿಗೆ ಚೆನ್ನೈ ಅಡ್ಡಿ!.Operation Sindoor | ಐಪಿಎಲ್ ಮೇಲೂ ಪರಿಣಾಮ; ಧರ್ಮಶಾಲಾದ ಪಂದ್ಯ ಸ್ಥಳಾಂತರ.IPL 2025 | ಕೋಲ್ಕತ್ತದ ಬಳಿಕ ಜೈಪುರ ಮೈದಾನಕ್ಕೂ ಬಾಂಬ್ ಬೆದರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.