ನವದೆಹಲಿ: ಇಂಗ್ಲೆಂಡ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಜೇಕಬ್ ಬೆಥಲ್ ಬದಲಿಗೆ ನ್ಯೂಜಿಲೆಂಡ್ ವಿಕೆಟ್ ಕೀಪರ್ ಟಿಮ್ ಸೀಫರ್ಟ್ ಅವರು ಆರ್ಸಿಬಿ ಸೇರಿಕೊಂಡಿದ್ದಾರೆ.

ಜೇಕಬ್ ಬೆಥಲ್ ಅವರು ವೆಸ್ಟ್ ಇಂಡೀಸ್ ವಿರುದ್ಧ ರಾಷ್ಟ್ರೀಯ ತಂಡದ ಪರವಾಗಿ ಆಡಲು ಮೇ 24ರಂದು ಇಂಗ್ಲೆಂಡ್ಗೆ ತೆರಳುತ್ತಿರುವ ಕಾರಣ, ಬದಲಿ ಆಟಗಾರನಾಗಿ ಟಿಮ್ ಸೀಫರ್ಟ್ ಅವರನ್ನು ಮೂಲಬೆಲೆ ₹2 ಕೋಟಿಗೆ ಆರ್ಸಿಬಿ ಖರೀದಿಸಿದೆ.

ಕಿವೀಸ್ ಪರ 66 ಟಿ–20 ಪಂದ್ಯಗಳನ್ನು ಆಡಿರುವ ಟಿಮ್ ಸೀಫರ್ಟ್ ಅವರು 1,540 ರನ್ ಗಳಿಸಿದ್ದಾರೆ.

2021ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಟಿಮ್ ಸೀಫರ್ಟ್, ಇದುವರೆಗೂ ಕೆಕೆಆರ್ ಹಾಗೂ ದೆಹಲಿ ಕ್ಯಾಪಿಟಲ್ಸ್ ಪರವಾಗಿ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 26 ರನ್ ಮಾತ್ರ ಗಳಿಸಿದ್ದಾರೆ. ಕೊನೆಯ ಬಾರಿ 2022ರಲ್ಲಿ ಅವರು ಐಪಿಎಲ್ ಆಡಿದ್ದರು.

ಐಪಿಎಲ್ 18ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಈಗಾಗಲೇ ಪ್ಲೇ ಆಫ್ ಖಚಿತ ಪಡಿಸಿಕೊಂಡಿರುವ ಆರ್ಸಿಬಿ, ಮೇ 23ರಂದು ಎಸ್ಆರ್ಎಚ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯಕ್ಕೆ ಜೇಕಬ್ ಬೆಥಲ್ ಲಭ್ಯವಿದ್ದಾರೆ.

ಮೇ.27ರಂದು ಜರುಗುವ ಎಲ್ಎಸ್ಜಿ ವಿರುದ್ಧದ ಕೊನೆಯ ಲೀಗ್ ಪಂದ್ಯ ಹಾಗೂ ಪ್ಲೇ ಆಫ್ ಪಂದ್ಯಗಳಲ್ಲಿ ಟಿಮ್ ಸೀಫರ್ಟ್ ಆರ್ಸಿಬಿ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.