ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ಐಪಿಎಲ್ ಆಟಗಾರರ ಮಿನಿ ಬಿಡ್: ಕಮಿನ್ಸ್, ಶಾರ್ದೂಲ್ ಮೇಲೆ ಕಣ್ಣು

ದುಬೈನಲ್ಲಿ ಐಪಿಎಲ್ ಆಟಗಾರರ ಮಿನಿ ಬಿಡ್ ಇಂದು; ರೇಸ್‌ನಲ್ಲಿ ಮನೀಷ್ ಪಾಂಡೆ
Published 18 ಡಿಸೆಂಬರ್ 2023, 16:01 IST
Last Updated 18 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ದುಬೈ: ಮುಂದಿನ ವರ್ಷ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಗಾಗಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಮಂಗಳವಾರ ನಡೆಯಲಿದೆ.

ಹೋದ ತಿಂಗಳು ನಡೆದಿದ್ದ ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು ವಿವಿಧ ಟಿ20 ಸರಣಿಗಳಲ್ಲಿ ಮಿಂಚಿರುವ ಆಟಗಾರರು ಕೂಡ ಬಿಡ್‌ನಲ್ಲಿ ಲಭ್ಯವಿದ್ದು ಒಳ್ಳೆಯ ಮೌಲ್ಯ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ಮಿನಿ ಹರಾಜು ಉದ್ದೇಶ: ವರ್ಷದಿಂದ ವರ್ಷಕ್ಕೆ ತಮ್ಮ ತಂಡಗಳನ್ನು ಬಲಪಡಿಸುವ ಫ್ರ್ಯಾಂಚೈಸಿಗಳ ಉದ್ದೇಶ ಈಡೇರುತ್ತದೆ. ಮೆಗಾ ಮತ್ತು ಮಿನಿ ಹರಾಜಿಗೂ ಇರುವ ವ್ಯತ್ಯಾಸವೆಂದರೆ, ಆಟಗಾರರ ಸಂಖ್ಯೆ ಹಾಗೂ ಪರ್ಸ್‌ ಮೌಲ್ಯ. ಉಳಿದೆಲ್ಲ ಉದ್ದೇಶಗಳೂ ಒಂದೇ. 2025ರಲ್ಲಿ ಮೆಗಾ ಹರಾಜು ನಡೆಯಲಿದೆ.

ವಿದೇಶದಲ್ಲಿ ಮೊದಲ ಸಲ: ಟೂರ್ನಿಯ ಹದಿನೈದು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಡ್ ಪ್ರಕ್ರಿಯೆಯು ವಿದೇಶದಲ್ಲಿ ನಡೆಯುತ್ತಿದೆ. ದುಬೈನ ಕೊಕಾ ಕೋಲಾ ಅರೇನಾದಲ್ಲಿ ಜರುಗಲಿದೆ.

ಹರಾಜಿನಲ್ಲಿರುವ ಆಟಗಾರರು: ಐಪಿಎಲ್ ಆಡಳಿತ ಸಮಿತಿಯು 1166 ನೋಂದಾಯಿತ ಆಟಗಾರರ ಪಟ್ಟಿಯನ್ನು ಫ್ರ್ಯಾಂಚೈಸಿಗಳಿಗೆ ನೀಡಿತ್ತು. ಅದನ್ನು ಪರಿಷ್ಕರಿಸಿ 333 ಆಟಗಾರರನ್ನು ಅಂತಿಮಗೊಳಿಸಲಾಗಿದೆ. ಅದರಲ್ಲಿ  ಭಾರತದ 214 ಮತ್ತು ವಿದೇಶದ 119 ಆಟಗಾರರಿದ್ದಾರೆ.

ಹತ್ತು ಫ್ರ್ಯಾಂಚೈಸಿಗಳಲ್ಲಿ ಸೇರಿ ಒಟ್ಟು 77 ಆಟಗಾರರನ್ನು ಖರೀದಿಸಲು ಆವಕಾಶವಿದೆ. ಅದರಲ್ಲಿ 30 ವಿದೇಶಿ ಆಟಗಾರರೂ ಸೇರಿದ್ದಾರೆ.

₹ 2 ಕೋಟಿ ಮೂಲಬೆಲೆ

₹ 20 ಲಕ್ಷದಿಂದ ₹ 2 ಕೋಟಿಯವರೆಗೆ ಮೂಲಬೆಲೆಗಳನ್ನು ಆಟಗಾರರಿಗೆ ನಿಗದಿ ಪಡಿಸಲಾಗಿದೆ.

ಏಕದಿನ ವಿಶ್ವಕಪ್ ವಿಜೇತ  ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಿಚೆಲ್ ಸ್ಟಾರ್ಕ್ ಸೇರಿದಂತೆ 23 ಆಟಗಾರರು ₹ 2 ಕೋಟಿ ಮೂಲಬೆಲೆ ಹೊಂದಿದ್ದಾರೆ. ₹ 1.5 ಕೋಟಿ ಮೂಲಬೆಲೆಯಲ್ಲಿ 13 ಆಟಗಾರರು ನೋಂದಾಯಿತರಾಗಿದ್ದಾರೆ.

ನ್ಯೂಜಿಲೆಂಡ್ ತಂಡದಲ್ಲಿ ಆಡುವ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಯಾಗಿದೆ.

ಹರಾಜು ಪ್ರಕ್ರಿಯೆ ಹೇಗೆ?

ಆಟಗಾರರನ್ನು 19 ವಿವಿಧ ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಪರಿಣತಿ, ಕ್ಯಾಪ್ ಮತ್ತು ಅನ್‌ಕ್ಯಾಪ್ ಆಧಾರದಲ್ಲಿ ವಿಂಗಡಿಸಲಾಗಿದೆ.

ಪ್ರಮುಖ ಆಟಗಾರರು: ಭಾರತದ ಆಲ್‌ರೌಂಡರ್ ಶಾರ್ದೂಲ್ ಠಾಕೂರ್,  ಹರ್ಷಲ್ ಪಟೇಲ್, ಆಶುತೋಷ್ ಶರ್ಮಾ, ಉಮೇಶ್‌ ಯಾದವ್, ಸರ್ಫರಾಜ್ ಖಾನ್ ಮತ್ತು ವಿದೇಶಿ ತಂಡಗಳ ಮಿಚೆಲ್ ಸ್ಟಾರ್ಕ್, ಜೋಷ್ ಹ್ಯಾಜಲ್‌ವುಡ್, ಡ್ಯಾರಿಲ್ ಮಿಚೆಲ್, ಅಫ್ಗಾನಿಸ್ತಾನದ ಅಜ್ಮತ್‌ಉಲ್ಲಾ ಒಮರ್‌ಝೈ, ದಿಲ್ಶಾನ್ ಮಧುಶಂಕಾ, ಫಿಲಿಪ್ ಸಾಲ್ಟ್ ಅವರು ಹರಾಜಿನಲ್ಲಿರುವ ಪ್ರಮುಖ ಆಟಗಾರರು.

ಕರ್ನಾಟಕದ ಆಟಗಾರರು: ಕರ್ನಾಟಕದ ಮನೀಷ್ ಪಾಂಡೆ, ಕರುಣ್ ನಾಯರ್, ಬೌಲರ್ ಶುಭಾಂಗ್ ಹೆಗಡೆ, ಬಿ.ಆರ್. ಶರತ್, ಕೆ.ಎಲ್. ಶ್ರೀಜಿತ್, ನಿಹಾಲ್ ಉಲ್ಲಾಳ, ಕೆ.ಸಿ. ಕಾರ್ಯಪ್ಪ ಮತ್ತು ಶ್ರೇಯಸ್ ಗೋಪಾಲ್ ಅವರು ಈ ಪಟ್ಟಿಯಲ್ಲಿದ್ದಾರೆ.

ಮಲ್ಲಿಕಾ ಸಾಗರ್ ನಿರೂಪಣೆ

ಐಪಿಎಲ್ ಇತಿಹಾಸದಲ್ಲಿಯೇ ಇದೇ ಮೊದಲ ಸಲ ಮಹಿಳಾ ನಿರೂಪಕಿಯೊಬ್ಬರು ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಮಲ್ಲಿಕಾ ಸಾಗರ್ ಅವರೇ ಆ ನಿರೂಪಕಿ. ಅವರು ಈಗಾಗಲೇ ಮಹಿಳಾ ಪ್ರೀಮಿಯರ್ ಲೀಗ್ ಬಿಡ್‌ಗಳನ್ನು ನಡೆಸಿಕೊಟ್ಟಿದ್ದಾರೆ.

ಆರಂಭ: ಮಧ್ಯಾಹ್ನ 1

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಶಾರ್ದೂಲ್

ಶಾರ್ದೂಲ್

ಮನೀಶ್ ಪಾಂಡೆ

ಮನೀಶ್ ಪಾಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT