ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | SRH vs MI: ಮುಂಬೈ ಇಂಡಿಯನ್ಸ್‌ಗೆ ಮೂರನೇ ಜಯ

Last Updated 4 ಅಕ್ಟೋಬರ್ 2020, 14:10 IST
ಅಕ್ಷರ ಗಾತ್ರ

ಶಾರ್ಜಾ: ಮುಂಬೈ ಇಂಡಿಯನ್ಸ್ ನೀಡಿದ 209 ರನ್‌ಗಳ ಗುರಿ, ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಲು ವಿಫಲವಾದಸನ್‌ರೈಸರ್ಸ್ ಹೈದರಾಬಾದ್‌ತಂಡ 34 ರನ್‌ ಅಂತರದ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮುಂಬೈ ತಂಡ ಟೂರ್ನಿಯಲ್ಲಿ ಮೂರನೇ ಗೆಲುವು ಸಾಧಿಸಿದರೆ ಮತ್ತು ಹೈದರಾಬಾದ್‌ 3ನೇ ಸೋಲು ಅನುಭವಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಕ್ವಿಂಟನ್‌ ಡಿ ಕಾಕ್‌ ಗಳಿಸಿದ ಅರ್ಧಶತಕದ ನೆರವಿನಿಂದ ಬೃಹತ್‌ ಮೊತ್ತ ಪೇರಿಸಿತ್ತು. 39 ಎಸೆತಗಳನ್ನು ಎದುರಿಸಿದ ಡಿ ಕಾಕ್‌ 4 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 67 ರನ್ ಗಳಿಸಿದರು.

ಕೊನೆಯ ಹಂತದಲ್ಲಿಸೂರ್ಯಕುಮಾರ್‌ ಯಾದವ್‌ (27), ಇಶಾನ್‌ ಕಿಶನ್‌ (31), ಹಾರ್ದಿಕ್‌ ಪಾಂಡ್ಯ (28), ಕೀರನ್‌ ಪೊಲಾರ್ಡ್‌ (ಅಜೇಯ 25ರನ್‌) ಮತ್ತು ಕೃಣಾಲ್‌ ಪಾಂಡ್ಯ (ಅಜೇಯ 20) ಬಿರುಸಿನ ಬ್ಯಾಟಿಂಗ್‌ ನಡೆಸಿ ತಂಡದ ಮೊತ್ತವನ್ನು 208ಕ್ಕೆ ಏರಿಸಿದ್ದರು.

ಈ ಗುರಿ ಎದುರು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಪರ ಅಗ್ರ ಕ್ರಮಾಂಕದ ಮೂವರು ಚೆನ್ನಾಗಿ ಆಡಿದರು.‌ ನಾಯಕ ವಾರ್ನರ್(60) ಈ ಟೂರ್ನಿಯಲ್ಲಿ ಮೊದಲ ಅರ್ಧಶತಕ ಸಿಡಿಸಿ ಹೋರಾಟ ನಡೆಸಿದರು. ಜಾನಿ ಬೈರ್ಸ್ಟ್ರೋವ್‌25 ರನ್‌ಮತ್ತು ಮನೀಷ್‌ ಪಾಂಡೆ 30 ರನ್ ಗಳಿಸಿದರು.ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ.ಭರವಸೆಯ ಬ್ಯಾಟ್ಸ್‌ಮನ್‌ ಕೇನ್‌ ವಿಲಿಯಮ್ಸನ್ (3)‌ ಹಾಗೂ ಕಳೆದ ಪಂದ್ಯದ ಹೀರೋ ಪ್ರಿಯಂ ಗರ್ಗ್‌ (8) ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ಅಂತಿಮವಾಗಿ ರೈಸರ್ಸ್‌174 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮುಂಬೈ ಪರ ಟ್ರೆಂಟ್‌ ಬೌಲ್ಟ್, ಜೇಮ್ಸ್‌ ಪ್ಯಾಟಿನ್ಸನ್‌‌ ಮತ್ತು ಜಸ್‌ಪ್ರೀತ್‌ ಬೂಮ್ರಾ ತಲಾ ಎರಡು ವಿಕೆಟ್ ಪಡೆದರು. ಕೃಣಾಲ್‌ ಪಾಂಡ್ಯ 1 ವಿಕೆಟ್‌ ಪಡೆದರು.

ವಾರ್ನರ್‌ಗೆ‌ 45ನೇ ಅರ್ಧಶತಕ
ರೈಸರ್ಸ್‌ ನಾಯಕ ವಾರ್ನರ್‌ ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಸಲ ಅರ್ಧಶತಕ ಬಾರಿಸಿದರು.

34ನೇ ಎಸೆತದಲ್ಲಿ 50 ರನ್‌ ಗಳಿಸಿದ ವಾರ್ನರ್‌ಗೆ ಇದು ಐಪಿಎಲ್‌ನಲ್ಲಿ 45ನೇ ಅರ್ಧಶತಕ. ಐಪಿಎಲ್‌ನಲ್ಲಿ 40ಕ್ಕಿಂತ ಹೆಚ್ಚು ಅರ್ಧಶತಕಸಿಡಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆ ಅವರದು.

ಸುರೇಶ್ ರೈನಾ ಮತ್ತು ರೋಹಿತ್‌ ಶರ್ಮಾ ತಲಾ 38 ಅರ್ಧಶತಕಗಳಿಸಿದ್ದು, ವಿರಾಟ್‌ಕೊಹ್ಲಿ ಖಾತೆಯಲ್ಲಿ 37 ಅರ್ಧಶತಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT