ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL-2020 | ಸೂಪರ್‌ ಓವರ್‌ನಲ್ಲಿ ಜಯದ ನಗೆ ಬೀರಿದ ಆರ್‌ಸಿಬಿ
LIVE

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಸೋಮವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.
Last Updated 28 ಸೆಪ್ಟೆಂಬರ್ 2020, 19:07 IST
ಅಕ್ಷರ ಗಾತ್ರ
18:1028 Sep 2020

ಹೀಗಿತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೂಪರ್‌ ಓವರ್‌

8 ರನ್‌ಗಳ ಗುರಿ ಎದುರು ಸೂಪರ್‌ ಓವರ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಎಬಿ ಡಿ ವಿಲಿಯರ್ಸ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡಿದರು. ಮುಂಬೈ ಪರ ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್ ಮಾಡಿದರು.

ಕೊಹ್ಲಿ ಪಡೆ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿ ಜಯದ ನಗೆ ಬೀರಿತು.

ಮೊದಲ ಎಸೆತ: ಎಬಿ ಡಿ ವಿಲಿಯರ್ಸ್‌ 1 ರನ್‌
ಎರಡನೇ ಎಸೆತ: ಕೊಹ್ಲಿ 1 ರನ್‌
ಮೂರನೇ ಎಸೆತ: ವಿಲಿಯರ್ಸ್‌ 0
ನಾಲ್ಕನೇ ಎಸೆತ: ವಿಲಿಯರ್ಸ್‌ 4 ರನ್
ಐದನೇ ಎಸೆತ: ವಿಲಿಯರ್ಸ್‌ 1 ರನ್
ಆರನೇ ಎಸೆತ: ಕೊಹ್ಲಿ 4 ರನ್‌

17:5728 Sep 2020

ಹೀಗಿತ್ತು ಮುಂಬೈ ಇಂಡಿಯನ್ಸ್‌ ಸೂಪರ್‌ ಓವರ್‌

ಸೂಪರ್‌ ಓವರ್‌ನಲ್ಲಿ ಮುಂಬೈ ಪರ ಕೀರನ್‌ ಪೊಲಾರ್ಡ್‌ ಮತ್ತು ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್ ಮಾಡಿದರು. ಆರ್‌ಸಿಬಿ ಪರ ನವದೀಪ್‌ ಶೈನಿ ಬೌಲಿಂಗ್ ಮಾಡಿದರು.

ಮೊದಲ ಎಸೆತ: ಪೊಲಾರ್ಡ್‌ 1 ರನ್‌
ಎರಡನೇ ಎಸೆತ: ಹಾರ್ದಿಕ್‌ 1 ರನ್‌
ಮೂರನೇ ಎಸೆತ: ಪೊಲಾರ್ಡ್‌ 0
ನಾಲ್ಕನೇ ಎಸೆತ: ಪೊಲಾರ್ಡ್‌ 4 ರನ್
ಐದನೇ ಎಸೆತ: ಪೊಲಾರ್ಡ್‌ ಔಟ್‌
ಆರನೇ ಎಸೆತ: 1 ಬೈಸ್‌

17:5328 Sep 2020

ಸ್ಕೋರ್‌ ಲೆವಲ್‌: ಸೂಪರ್‌ ಓವರ್‌ಗೆ ಸಾಗಿದ ಪಂದ್ಯ

ಮುಂಬೈ ಗೆಲುವಿಗೆ ಕೊನೆಯ ಓವರ್‌ನಲ್ಲಿ 19 ರನ್‌ ಅಗತ್ಯವಿತ್ತು. ಆದರೆ, ಪೊಲಾರ್ಡ್‌ ಮತ್ತು ಕಿಶನ್‌ 18 ರನ್‌ ಗಳಿಸಿಕೊಂಡರು.

ಹೀಗಾಗಿ ಎರಡೂ ತಂಡದ ಮೊತ್ತ ಸಮವಾಗಿದ್ದು, ಪಂದ್ಯ ಸೂಪರ್‌ ಓವರ್‌ಗೆ ಸಾಗಿದೆ.

17:3728 Sep 2020

ಕೀಶನ್–ಪೊಲಾರ್ಡ್‌ ಶತಕದ ಜೊತೆಯಾಟ

11.2 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಮುಂಬೈಗೆ ಕೀರನ್‌ ಪೊಲಾರ್ಡ್‌ ಮತ್ತು ಇಶಾನ್‌ ಕಿಶನ್‌ ಆಧಾರವಾದರು.

ಈ ಜೋಡಿ ಐದನೇ ವಿಕೆಟ್‌ಗೆ ಕೇವಲ 46 ಎಸೆತಗಳಲ್ಲಿ 105 ರನ್‌ ಕಲೆಹಾಕಿ ಆಡುತ್ತಿದೆ.

ಸದ್ಯ 19 ಓವರ್‌ಗಳ ಆಟ ಅಂತ್ಯವಾಗಿದ್ದು, ಪೊಲಾರ್ಡ್‌ 55 ಮತ್ತು ಕಿಶನ್‌ 86 ರನ್‌ ಗಳಿಸಿದ್ದಾರೆ.

ಗೆಲ್ಲಲು ಕೊನೆಯ ಓವರ್‌ನಲ್ಲಿ 19 ರನ್‌ ಗಳಿಸಬೇಕಿದೆ.

17:3228 Sep 2020

18ನೇ ಓವರ್ ಮುಕ್ತಾಯ: 31 ರನ್‌ ಅಗತ್ಯ

ಕೀರನ್‌ ಪೊಲಾರ್ಡ್‌ ಮತ್ತು ಇಶನ್‌ ಕಿಶನ್‌ 17 ಮತ್ತು 18ನೇ ಓವರ್‌ಗಳಲ್ಲಿ ಬರೋಬ್ಬರಿ 49 ರನ್‌ ಚಚ್ಚಿರು.

ಗೆಲ್ಲಲು ಇನ್ನು ಉಳಿದಿರುವ 2 ಓವರ್‌ಗಳಲ್ಲಿ 31 ರನ್‌ ಗಳಿಸಬೇಕಿದೆ.

17:2428 Sep 2020

17ನೇ ಓವರ್‌ನಲ್ಲಿ 27 ರನ್‌ ಬಾರಿಸಿದ ಪೊಲಾರ್ಡ್‌

 4, 6, 6, 2, 6, 3

ಇದು ಆಡ್ಯಂ  ಜಂಪಾ ಎಸೆದ 17ನೇ ಓವರ್‌ ವಿವರ.

10 ಎಸೆತಗಳಲ್ಲಿ 11 ರನ್‌ ಗಳಿಸಿ ಆಡುತ್ತಿದ್ದ ಪೊಲಾರ್ಡ್‌ ಈ ಓವರ್‌ ಬಳಿಕ 16 ಎಸೆತಗಳಲ್ಲಿ 38 ರನ್‌ ಗಳಿಸಿಕೊಂಡರು.

ಈ ಓವರ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ 122 ರನ್‌ ಗಳಿಸಿತ್ತು. ಉಳಿದಿರುವ 18 ಎಸೆತಗಳಲ್ಲಿ 54 ರನ್‌ ಗಳಿಸಬೇಕಿದೆ.

17:1728 Sep 2020

16ನೇ ಓವರ್ ಮುಕ್ತಾಯ; 4 ವಿಕೆಟ್‌ಗೆ 122 ರನ್

ಕಿಶನ್‌ (70) ಮತ್ತು ಕೀರನ್‌ ಪೊಲಾರ್ಡ್‌ (11) ಕ್ರೀಸ್‌ನಲ್ಲಿದ್ದಾರೆ.

17:1228 Sep 2020

15ನೇ ಓವರ್ ಮುಕ್ತಾಯ; 4 ವಿಕೆಟ್‌ಗೆ 112 ರನ್

ಕಿಶನ್‌ (61) ಮತ್ತು ಕೀರನ್‌ ಪೊಲಾರ್ಡ್‌ (10) ಕ್ರೀಸ್‌ನಲ್ಲಿದ್ದಾರೆ.

17:0528 Sep 2020

ಅರ್ಧಶತಕದ ಪೂರೈಸಿದ ಇಶಾನ್‌ ಕಿಶನ್

ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಇಶನ್‌ ಕಿಶನ್‌ ತಮ್ಮ ಐಪಿಎಲ್‌ ಕರಿಯರ್‌ನ 4ನೇ ಅರ್ಧಶತಕ ಸಿಡಿಸಿದರು.

ಸದ್ಯ 15ನೇ ಓವರ್ ಮುಕ್ತಾಯವಾಗಿದ್ದು ಮುಂಬೈ 4 ವಿಕೆಟ್‌ಗೆ 98 ರನ್ ಗಳಿಸಿದೆ.

ಕಿಶನ್‌ (51) ಮತ್ತು ಕೀರನ್‌ ಪೊಲಾರ್ಡ್‌ (5) ಕ್ರೀಸ್‌ನಲ್ಲಿದ್ದಾರೆ.

17:0128 Sep 2020

13 ಓವರ್ ಮುಕ್ತಾಯ: 4‌ ನಷ್ಟಕ್ಕೆ 89 ರನ್

13 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ 4‌ ನಷ್ಟಕ್ಕೆ 89 ರನ್ ಗಳಿಸಿದೆ.

ಇಶನ್‌ ಕಿಶನ್‌ (45) ಮತ್ತು ಕೀರನ್‌ ಪೊಲಾರ್ಡ್‌ (2) ಕ್ರೀಸ್‌ನಲ್ಲಿದ್ದಾರೆ.