ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL | ಸನ್‌ರೈಸರ್ಸ್ ಮುಖ್ಯ ಕೋಚ್ ಆಗಿ ವಿಂಡೀಸ್ ಬ್ಯಾಟಿಂಗ್ ದಿಗ್ಗಜ ಲಾರಾ ನೇಮಕ

Last Updated 3 ಸೆಪ್ಟೆಂಬರ್ 2022, 7:20 IST
ಅಕ್ಷರ ಗಾತ್ರ

ನವದಹಲಿ: ವೆಸ್ಟ್‌ ಇಂಡೀಸ್‌ ಕ್ರಿಕೆಟ್ ತಂಡದ ಬ್ಯಾಟಿಂಗ್‌ ದಿಗ್ಗಜ ಬ್ರಿಯಾನ್‌ ಲಾರಾ ಅವರನ್ನು ತಂಡದ ಮುಖ್ಯ ಕೋಚ್‌ ಆಗಿ ನೇಮಕ ಮಾಡಲಾಗಿದೆ ಎಂದು ಐಪಿಎಲ್‌ನಲ್ಲಿ ಆಡುವ ಸನ್‌ರೈಸರ್ಸ್‌ ಹೈದರಾಬಾದ್‌ (ಎಸ್‌ಆರ್‌ಎಚ್‌) ಪ್ರಾಂಚೈಸ್‌ ಶನಿವಾರ ಘೋಷಿಸಿದೆ.

ಆಸ್ಟ್ರೇಲಿಯಾ ಕ್ರಿಕೆಟಿಗ ಟಾಮ್‌ ಮೂಡಿ ಅವರು ಎಸ್‌ಆರ್‌ಎಚ್‌ ಮುಖ್ಯ ಕೋಚ್‌ ಆಗಿ 2013 ರಿಂದಲೂ ಕಾರ್ಯನಿರ್ವಹಿಸಿದ್ದರು.

53 ವರ್ಷದ ಲಾರಾ ಅವರು ಇದೇ ಮೊದಲ ಬಾರಿಗೆ ಟಿ20 ಮಾದರಿಯ ತಂಡವೊಂದಕ್ಕೆ ಮುಖ್ಯ ಕೋಚ್‌ ಆಗಿ ನೇಮಕವಾಗಿದ್ದಾರೆ. ಅವರು, ತಂಡದ ತಾಂತ್ರಿಕ ಸಲಹೆಗಾರ ಮತ್ತು ಬ್ಯಾಟಿಂಗ್‌ ಕೋಚ್‌ ಆಗಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಸ್‌ಆರ್‌ಎಚ್‌ ಬಳಗ ಸೇರಿಕೊಂಡಿದ್ದರು.

ಲಾರಾ ನೇಮಕದ ಮಾಹಿತಿಯನ್ನು ಟ್ವಿಟರ್‌ನಲ್ಲಿಹಂಚಿಕೊಂಡಿರುವ ಪ್ರಾಂಚೈಸ್‌, 'ಕ್ರಿಕೆಟ್‌ ದಂತಕತೆ ಬ್ರಿಯಾನ್‌ ಲಾರಾ ಅವರು ಐಪಿಎಲ್‌ನಮುಂಬರುವ ಟೂರ್ನಿಗಳಿಗೆ ನಮ್ಮ ತಂಡದ ಮುಖ್ಯ ಕೋಚ್‌ ಆಗಿರಲಿದ್ದಾರೆ' ಎಂದು ತಿಳಿಸಿದೆ.

2013ರಿಂದ 19ರ ಅವಧಿಯಲ್ಲಿಟಾಮ್‌ ಮೂಡಿ ಮಾರ್ಗದರ್ಶನದಲ್ಲಿ ಐದು ಬಾರಿ ಪ್ಲೇ ಆಫ್‌ ಪ್ರವೇಶಿಸಿದ್ದ ಎಸ್‌ಆರ್‌ಎಚ್‌, 2016ರಲ್ಲಿ ಚಾಂಪಿಯನ್‌ ಆಗಿತ್ತು. 2020ರಲ್ಲಿ ಆಸ್ಟ್ರೇಲಿಯಾದವರೇ ಆದ ಟ್ರೆವೊರ್‌ ಬೇಲಿಸ್‌ ಅವರು ಮುಖ್ಯ ಕೋಚ್‌ ಆಗಿದ್ದರು. ಕಳೆದ ವರ್ಷ (2021ರಲ್ಲಿ) ಪ್ರಾಂಚೈಸ್‌ನ ಕ್ರಿಕೆಟ್‌ ನಿರ್ದೇಶಕರಾಗಿ ನೇಮಕಗೊಳ್ಳುವ ಮೂಲಕ ಮೂಡಿ ಮತ್ತೆ ಎಸ್‌ಆರ್‌ಎಚ್‌ ತಂಡಕ್ಕೆ ಮರಳಿದ್ದರು.

ಎಸ್‌ಆರ್‌ಎಚ್‌ ತಂಡಬೇಲಿಸ್‌ ಮಾರ್ಗದರ್ಶನದಲ್ಲಿ ಕಳೆದ ವರ್ಷ ಹೀನಾಯ ಪ್ರದರ್ಶನ ನೀಡಿತ್ತು. ಆಡಿದ್ದ 14 ಪಂದ್ಯಗಳಲ್ಲಿ ಕೇವಲ 3 ಜಯ ಸಾಧಿಸಿ, 11 ಸೋಲುಗಳನ್ನು ಕಂಡಿತ್ತು. ಹೀಗಾಗಿ 2022ರ ಟೂರ್ನಿ ವೇಳೆ ಮೂಡಿ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗಿತ್ತು.

ಅದೇ ಮೊದಲ ಬಾರಿಗೆ 10 ತಂಡಗಳು ಪಾಲ್ಗೊಂಡ 2022ರ ಆವೃತ್ತಿಯಲ್ಲಿ 6 ಜಯ, 8 ಸೋಲು ಕಂಡಿದ್ದ ಎಸ್‌ಆರ್‌ಎಚ್‌, ಲೀಗ್ ಹಂತದಲ್ಲಿ 8ನೇ ಸ್ಥಾನ ಪಡೆದುಕೊಂಡಿತ್ತು.

ಐಪಿಎಲ್‌ನಮುಂದಿನ ಆವೃತ್ತಿಯು ಯುಎಇಯಲ್ಲಿ 2023ರ ಜನವರಿಯಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT