ಶನಿವಾರ, ಏಪ್ರಿಲ್ 4, 2020
19 °C

ತೂಗುಯ್ಯಾಲೆಯಲ್ಲಿ ಐಪಿಎಲ್ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಶ್ವದೆಲ್ಲೆಡೆ ಉಗ್ರ ಪ್ರತಾಪ ತೋರುತ್ತಿರುವ ಕೊರೊನಾ ವೈರಸ್‌ ಸೋಂಕಿನ ಭೀತಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್‌ ಕೂಟವನ್ನು ಕೂಡ ಒಂದು ವರ್ಷ ಮುಂದೂಡಲಾಗಿದೆ.

ಭಾರತದಲ್ಲಿಯೂ ಏಪ್ರಿಲ್ 14ರವರೆಗೆ ಲಾಕ್‌ಡೌನ್‌ ಇರುವು ದರಿಂದ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಆಯೋಜನೆಯ ಕುರಿತು ತುರ್ತು ನಿರ್ಧಾರ ತೆಗೆದು ಕೊಳ್ಳುವ ಒತ್ತಡದಲ್ಲಿ ಬಿಸಿಸಿಐ ಇದೆ. ಟೂರ್ನಿಯು ರದ್ದಾಗುವ ಸಾಧ್ಯತೆಗಳೇ ಹೆಚ್ಚಾಗಿವೆ ಎಂದೂ ಹೇಳಲಾಗುತ್ತಿದೆ. ಈ ಮೊದಲು ನಿರ್ಧರಿಸಿದಂತೆ ಟೂರ್ನಿಯು ಮಾರ್ಚ್‌ 29ರಂದು ಆರಂಭವಾಗಬೇಕಿತ್ತು. ಆದರೆ, ಕೊರೊನಾ ಆತಂಕದಿಂದ ಏಪ್ರಿಲ್ 15ರವರೆಗೆ ಮುಂದೂಡಲಾಯಿತು.

‘ಸದ್ಯದ ಸ್ಥಿತಿಯಲ್ಲಿ ಏನೂ ಹೇಳಲು ಸಾಧ್ಯವಿಲ್ಲ. ಟೂರ್ನಿಯನ್ನು ಮುಂದೂಡುವ ನಿರ್ಧಾರ ಕೈಗೊಂಡ ದಿನ ಇದ್ದ ಪರಿಸ್ಥಿತಿ ಈಗಲೂ ಇದೆ. ಹೋದ ಹತ್ತು ದಿನಗಳಲ್ಲಿ ಏನೂ ಬದಲಾಗಿಲ್ಲ.  ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ನನ್ನ ಬಳಿಯೂ ಉತ್ತರವಿಲ್ಲ. ಯಥಾಸ್ಥಿತಿ ಮುಂದುವರಿಯುತ್ತಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರದ್ದಾಗುವ ವದಂತಿಗಳಿಂದಾಗ ಫ್ರ್ಯಾಂಚೈಸ್ ಮಾಲೀಕರು ಆತಂಕಕ್ಕೊಳ ಗಾಗಿದ್ದಾರೆ. ನಷ್ಟದ ಭೀತಿ ಎದುರಿಸುತ್ತಿದ್ದಾರೆ. 

‘ಟೂರ್ನಿಯನ್ನು ಮತ್ತೆ ಮುಂದೂ ಡುವುದಕ್ಕೆ ಒತ್ತು ನೀಡಬೇಕು. ನಾವೆ ಲ್ಲರೂ ಈಗ ಗುರುತರ ಹೊಣೆ ಹೊತ್ತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಈ ಪರಿಸ್ಥಿತಿಯಲ್ಲಿ ಟೂರ್ನಿಯನ್ನು ನಡೆಸಲೇಬೇಕು ಎನ್ನುವುದು ಅಮಾನ ವೀಯವಾಗುತ್ತದೆ. ಐಪಿಎಲ್‌ಗಿಂತ ಜನರ ಜೀವ ಮುಖ್ಯ ’ ಎಂದು ಕಿಂಗ್ಸ್ ಇಲೆ ವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಮಂಗಳವಾರ ನಡೆಯಬೇಕಿದ್ದ ಬಿಸಿಸಿಐ ಮತ್ತು ಫ್ರ್ಯಾಂಚೈಸ್ ಮಾಲೀಕರ ಕಾಲ್‌ ಕಾನ್ಫರೆನ್ಸ್‌ ಅನ್ನೂ  ಮುಂದೂಡಲಾಗಿತ್ತು.

‘ಒಲಿಂಪಿಕ್ಸ್‌ ಅಂತಹ ದೊಡ್ಡ ಕ್ರೀಡಾ ಕೂಟವನ್ನೇ ಒಂದು ವರ್ಷದವರೆಗೆ ಮುಂದೂಡಲಾಗಿದೆ. ಅದಕ್ಕೆ ಹೋಲಿಸಿದರೆ ಐಪಿಎಲ್ ತುಂಬಾ ಚಿಕ್ಕದು. 21 ದಿನಗಳ ಲಾಕ್‌ಡೌನ್‌ ಮುಗಿದ ಕೂಡಲೇ ಟೂರ್ನಿಯನ್ನು ನಡೆಸುವುದು ಅಸಾಧ್ಯ. ಆ ವೇಳೆಗೆ ಪರಿಸ್ಥಿತಿ ಸುಧಾರಿಸುವ ಭರವಸೆಯೇನೊ ಇದೆ. ಆದರೂ ಆಗ ಬಹಳಷ್ಟು ನಿಬಂಧನೆಗಳು ಇದ್ದೇ ಇರುತ್ತವೆ. ಆದ್ದರಿಂದ ಟೂರ್ನಿಯನ್ನು ರದ್ದು ಮಾಡುವುದು ಸೂಕ್ತ. ಆ ನಿರ್ಧಾರ ಕೈಗೊಳ್ಳದಿದ್ದರೆ ಅದು ಮೂರ್ಖತನವಾ ಗುತ್ತದೆ’ ಎಂದು ಬಿಸಿಸಿಐ ಹಿರಿಯ ಸದಸ್ಯರೊಬ್ಬರು ಹೇಳುತ್ತಾರೆ.

ಒಂದೊಮ್ಮೆ ಟೂರ್ನಿ ರದ್ದಾದರೆ ತಂಡಗಳ ಮಾಲೀಕರು ಮತ್ತು ಅಧಿಕೃತ ಪ್ರಸಾರಕರು ತಮಗಾಗುವ ನಷ್ಟದ ಅಂದಾಜು ನಡೆಸುತ್ತಿದ್ದಾರೆ. ಅಲ್ಲದೇ ಅದನ್ನು ಆದಷ್ಟು ಕನಿಷ್ಠಗೊ ಳಿಸುವ ದಾರಿ ಹುಡುಕಲು ವಿಮಾ ಸಂಸ್ಥೆಗಳೊಂದಿಗೆ ಚರ್ಚೆ ನಡೆಸುತ್ತಿವೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು