ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL Auction 2022 LIVE: ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯ; ಫ್ರಾಂಚೈಸ್‌ಗಳ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?
LIVE

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 15ನೇ ಆವೃತ್ತಿಯ ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಯಾವ ತಂಡದಲ್ಲಿ ಎಷ್ಟು ಆಟಗಾರರು ಇದ್ದಾರೆ, ಯಾವ ಫ್ರಾಂಚೈಸ್ ಎಷ್ಟು ಹಣ ಉಳಿಸಿಕೊಂಡಿದೆ ಎಂಬ ವಿವರ ಇಲ್ಲಿದೆ.
Last Updated 13 ಫೆಬ್ರುವರಿ 2022, 15:52 IST
ಅಕ್ಷರ ಗಾತ್ರ
15:4813 Feb 2022

ಯಾವ ಫ್ರಾಂಚೈಸ್‌ನಲ್ಲಿ ಎಷ್ಟು ಆಟಗಾರರು?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) 15ನೇ ಆವೃತ್ತಿಯ ಟೂರ್ನಿಗಾಗಿ ಬೆಂಗಳೂರಿನಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿದಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್ ಕಿಂಗ್ಸ್‌ ಫ್ರಾಂಚೈಸ್‌ಗಳು ತಲಾ 21 ಆಟಗಾರರನ್ನು ಹೊಂದಿವೆ. ಸನ್‌ರೈಸರ್ಸ್‌ ಹೈದರಾಬಾದ್ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ಫ್ರಾಂಚೈಸ್‌ಗಳು ಕ್ರಮವಾಗಿ 20, 19 ಆಟಗಾರರನ್ನು ಹೊಂದಿವೆ. ಮುಂಬೈ ಇಂಡಿಯನ್ಸ್‌, ಕೋಲ್ಕತ್ತ ನೈಟ್‌ ರೈಡರ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಲಾ 18 ಆಟಗಾರರನ್ನು ಖರೀದಿಸಿವೆ. ಉಳಿದಂತೆ, ಗುಜರಾತ್ ಟೈಟಾನ್ಸ್‌ ಬಳಿ 17, ರಾಜಸ್ಥಾನ ರಾಯಲ್ಸ್‌ ಬಳಿ 14 ಆಟಗಾರರು ಇದ್ದಾರೆ.

13:1613 Feb 2022

ಫ್ರಾಂಚೈಸ್‌ಗಳ ಪರ್ಸ್‌ನಲ್ಲಿ ಇನ್ನೆಷ್ಟು ಹಣವಿದೆ?

ಸದ್ಯ 2022ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಕೋಟಿಕೋಟಿ ಹಣ ಸುರಿದು ಆಟಗಾರರನ್ನು ಖರೀದಿಸಿರುವ  ಫ್ರಾಂಚೈಸ್‌ಗಳು, ಪರ್ಸ್‌ಗಳಲ್ಲಿಯೂ ಹಣ ಉಳಿಸಿಕೊಂಡಿವೆ.

ಯಾವ ಫ್ರಾಂಚೈಸ್‌ ಬಳಿ ಎಷ್ಟು ಹಣ?

 ಫ್ರಾಂಚೈಸ್‌ ಹರಾಜಿಗೂ ಮುನ್ನ ಹರಾಜಿನ ಬಳಿಕ
ಕೋಲ್ಕತ್ತ ನೈಟ್‌ ರೈಡರ್ಸ್‌ ₹ 48 ಕೋಟಿ ₹ 8.85 ಕೋಟಿ
ಗುಜರಾತ್ ಟೈಟಾನ್ಸ್‌ ₹ 52 ಕೋಟಿ ₹ 8.65 ಕೋಟಿ
ರಾಜಸ್ಥಾನ ರಾಯಲ್ಸ್‌ ₹ 62 ಕೋಟಿ ₹ 8.60 ಕೋಟಿ
ಚೆನ್ನೈ ಸೂಪರ್‌ಕಿಂಗ್ಸ್‌ ₹ 48 ಕೋಟಿ ₹ 7.15 ಕೋಟಿ
ಪಂಜಾಬ್ ಕಿಂಗ್ಸ್‌ ₹ 72 ಕೋಟಿ ₹ 5.30 ಕೋಟಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ₹ 57 ಕೋಟಿ ₹ 5 ಕೋಟಿ
ಸನ್‌ರೈಸರ್ಸ್‌ ಹೈದರಾಬಾದ್ ₹ 68 ಕೋಟಿ ₹ 2.60 ಕೋಟಿ
ಲಖನೌ ಸೂಪರ್‌ ಜೈಂಟ್ಸ್‌ ₹ 59 ಕೋಟಿ ₹ 2.20 ಕೋಟಿ
ಮುಂಬೈ ಇಂಡಿಯನ್ಸ್‌ ₹ 48 ಕೋಟಿ ₹ 2.15 ಕೋಟಿ
ಡೆಲ್ಲಿ ಕ್ಯಾಪಿಟಲ್ಸ್‌ ₹ 47.5 ಕೋಟಿ ₹ 1.30 ಕೋಟಿ
13:1013 Feb 2022

ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯ

ಅರುಣೈ ಸಿಂಗ್‌ ಅವರು ಐಪಿಎಲ್‌ ಮೆಗಾ ಹರಾಜು ಪ್ರಕ್ರಿಯೆಯ ಕೊನೆಯ ಆಟಗಾರನಾಗಿ ಮಾರಾಟಗೊಂಡರು. ರಾಜಸ್ಥಾನ ರಾಯಲ್ಸ್  ಫ್ರಾಂಚೈಸ್‌, ಸಿಂಗ್ ಅವರನ್ನು ₹ 20 ಲಕ್ಷ ನೀಡಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ.

ಇದರೊಂದಿಗೆ ಬಿಡ್ಡಿಂಗ್ ಪ್ರಕ್ರಿಯೆ ಮುಕ್ತಾಯವಾಗಿದೆ.

13:0313 Feb 2022

ಕೆಕೆಆರ್ ಪಾಲಾದ ರವಿಕುಮಾರ್ ಸಮರ್ಥ್, ಅಭಿಜಿತ್, ಅಶೋಕ್ ಶರ್ಮಾ

ರವಿಕುಮಾರ್ ಸಮರ್ಥ್‌ಗೆ ₹20 ಲಕ್ಷ, ಅಭಿಜಿತ್ ತೋಮರ್‌ಗೆ ₹40 ಲಕ್ಷ, ಹಾಗೂ ಅಶೋಕ್ ಶರ್ಮಾಗೆ ₹55 ಲಕ್ಷ ನೀಡಿ ಕೆಕೆಆರ್‌ ತಂಡ ಖರೀದಿಸಿದೆ. 

12:3113 Feb 2022

ಕೆಕೆಆರ್‌ ಪಾಲಾದ ಚಾಮಿಕಾ ಕರುಣಾರತ್ನೆ, ಬಾಬಾ ಇಂದ್ರಜಿತ್‌

ಶ್ರೀಲಂಕಾ ಕ್ರಿಕೆಟಿಗ ಚಾಮಿಕಾ ಕರುಣಾರತ್ನೆಗೆ ₹50 ಲಕ್ಷ ಮತ್ತು ಭಾರತದ ಬಾಬಾ ಇಂದ್ರಜಿತ್‌ಗೆ ₹20 ಲಕ್ಷ ನೀಡಿ ಕೆಕೆಆರ್ ತಂಡ ಖರೀದಿ ಮಾಡಿದೆ. 

12:2813 Feb 2022

ಬಿಕರಿಯಾಗದ ಮಾರ್ಟಿನ್ ಗಪ್ಟಿಲ್

ನ್ಯೂಜಿಲೆಂಡ್‌ನ ಸ್ಫೋಟಕ ಆರಂಭಿಕ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಅವರು ಐಪಿಎಲ್‌ ಹರಾಜು ಪ್ರಕ್ರಿಯೆಯಲ್ಲಿ ಬಿಕರಿಯಾಗದೆ ಉಳಿದಿದ್ದಾರೆ. ಅವರು ಕೆಲ ದಿನಗಳಿಂದ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. 

12:2413 Feb 2022

ರಿಲೆ ಮೆರೆಡಿತ್‌ಗಾಗಿ ₹1 ಕೋಟಿ ಹೂಡಿದ ಮುಂಬೈ

ಆಸ್ಟ್ರೇಲಿಯಾ ಆಟಗಾರ ರಿಲೆ ಮೆರೆಡಿತ್‌ ಅವರಿಗೆ ₹1 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ. 

12:2013 Feb 2022

ಗುಜರಾತ್ ಟೈಟಾನ್ಸ್ ಪಾಲಾದ ಅಲ್ಜಾರಿ ಜೋಸೆಫ್

ವೆಸ್ಟ್ ಇಂಡೀಸ್ ಆಟಗಾರ ಅಲ್ಜಾರಿ ಜೋಸೆಫ್‌ಗೆ ₹2.4 ಕೋಟಿ ನೀಡಿ ಗುಜರಾತ್ ಟೈಟಾನ್ಸ್ ಖರೀದಿಸಿದೆ. 

12:1513 Feb 2022

ಹೈದರಾಬಾದ್ ತೆಕ್ಕೆಗೆ ಸೀನ್ ಅಬಾಟ್‌

ಆಸ್ಟ್ರೇಲಿಯಾದ ಆಲೌರೌಂಡರ್‌ ಸೀನ್ ಅಬಾಟ್‌ಗೆ ₹2.4 ಕೋಟಿ ನೀಡಿ ಸನ್‌ರೈಸರ್ಸ್‌ ಹೈದರಾಬಾದ್‌ ಖರೀದಿ ಮಾಡಿದೆ.

12:0513 Feb 2022

ವೈಭವ್ ಅರೋರಾಗೆ ಪಂಜಾಬ್ ಕಿಂಗ್ಸ್‌ ₹2 ಕೋಟಿ ನೀಡಿ ಖರೀದಿಸಿದೆ.