ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 | ಸೂರ್ಯ ಅಭ್ಯಾಸ; ಮುಂಬೈಗೆ ಸಂತಸ

Published 5 ಏಪ್ರಿಲ್ 2024, 15:50 IST
Last Updated 5 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಂತಸದ ಸುದ್ದಿಯೊಂದು ಲಭಿಸಿದೆ. 

ಟಿ20 ಪರಿಣತ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರು ತಂಡಕ್ಕೆ ಮರಳಿದ್ಧಾರೆ. ಭಾನುವಾರ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 

ಗಾಯದಿಂದಾಗಿ ಅವರು ದೀರ್ಘಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಶುಕ್ರವಾರ ಅವರು ಅಭ್ಯಾಸದ ಸಂದರ್ಭದಲ್ಲಿ ತಮ್ಮ ಟ್ರೇಡ್‌ಮಾರ್ಕ್‌ ಹೊಡೆತಗಳನ್ನು ಪ್ರದರ್ಶಿಸಿದರು. ಅವರಲ್ಲಿ ಯಾವುದೇ ಆಯಾಸವಾಗಲಿ, ಫಿಟ್‌ನೆಸ್‌ ಸಂಬಂಧಿತ ಸಮಸ್ಯೆಗಳು ಕಾಣಲಿಲ್ಲ. ಉಲ್ಲಾಸದಿಂದ ಭಾಗವಹಿಸಿದ್ದರು. 

ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ತಂಡವು ಈ ಟೂರ್ನಿಯಲ್ಲಿ ಆಡಿರುವ ಮೊದಲ ಮೂರು ಪಂದ್ಯಗಳಲ್ಲಿಯೂ ಸೋತಿದೆ. 

ಇದೇ ಕ್ರೀಡಾಂಗಣದ ಇನ್ನೊಂದು ನೆಟ್ಸ್‌ನಲ್ಲಿ ಡೆಲ್ಲಿ ತಂಡದ ಡೇವಿಡ್ ವಾರ್ನರ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಮುಂಬೈ ರಣಜಿ ಟ್ರೋಫಿ ತಂಡದ ಬೌಲರ್ ಮೋಹಿತ್ ಅವಸ್ತಿ ವಾರ್ನರ್ ಅವರಿಗೆ ಬೌಲಿಂಗ್ ಮಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT