ಶನಿವಾರ, ಜೂನ್ 6, 2020
27 °C

ಐಪಿಎಲ್‌ಗಿಂತ ಟಿ20 ವಿಶ್ವಕಪ್‌ ಮುಖ್ಯ: ಅಲನ್ ಬಾರ್ಡರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್ : ಹಣದ ಆಕರ್ಷಣೆ ಮಾತ್ರ ಇರುವ ಇಂಡಿಯನ್ ಪ್ರೀಮಿಯರ್‌ ಲೀಗ್ ಟೂರ್ನಿಗಿಂತಲೂ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆಯೋಜನೆಗೆ ಆದ್ಯತೆ ಕೊಡಬೇಕು ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಅಲನ್ ಬಾರ್ಡರ್ ಹೇಳಿದ್ದಾರೆ.

‘ಸ್ಥಳೀಯ ಟೂರ್ನಿಗಿಂತ ಜಾಗತಿಕಮಟ್ಟದ ಸ್ಪರ್ಧೆಯಿರುವ ಟೂರ್ನಿ ಮುಖ್ಯ.  ಆದರೆ ಈಗ ವಿಶ್ವಕಪ್ ಮುಂದೂಡಿ ಐಪಿಎಲ್‌ಗೆ ಅವಕಾಶ ಮಾಡಿಕೊಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ನನಗಂತೂ ಇದರಿಂದ ಖುಷಿಯಾಗಿಲ್ಲ. ಆ ರೀತಿಯಾದರೆ ನಾನು ಪ್ರಶ್ನಿಸುತ್ತೇನೆ. ದುಡ್ಡೇ ದೊಡ್ಡಪ್ಪನಾಗಬಾರದು’ ಎಂದು ಅವರು ಎಬಿಸಿ ಗ್ರ್ಯಾಂಡ್‌ಸ್ಟ್ಯಾಂಡ್ ಕೆಫೆ ರೇಡಿಯೊಗೆ ಹೇಳಿಕೆ ನೀಡಿದ್ದಾರೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು