ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022: ಲಸಿತ್ ಮಾಲಿಂಗ ಸಾಧನೆ ಸರಿಗಟ್ಟಿದ ಚಾಹಲ್

ಅಕ್ಷರ ಗಾತ್ರ

ಮುಂಬೈ: ಐಪಿಎಲ್ 2022ನೇ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಇದುವರೆಗೆ 22 ವಿಕೆಟ್ ಗಳಿಸಿದ್ದಾರೆ.

ಇದರೊಂದಿಗೆ ಐಪಿಎಲ್ ಸೀಸನ್‌ನಲ್ಲಿ ನಾಲ್ಕನೇ ಬಾರಿಗೆ 20ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಮೂಲಕ ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಲ್ಲದೆ ಮಾಲಿಂಗ ಬಳಿಕ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿದ್ದಾರೆ. 2015, 2016, 2020 ಹಾಗೂ 2022ನೇ ಸಾಲಿನಲ್ಲಿ ಚಾಹಲ್ 20ಕ್ಕೂ ವಿಕೆಟ್ ಗಳಿಸಿದ್ದಾರೆ.

2011, 2012, 2013 ಹಾಗೂ 2015ನೇ ಐಪಿಎಲ್ ಆವೃತ್ತಿಗಳಲ್ಲಿ ಮಾಲಿಂಗ 20ಕ್ಕೂ ಹೆಚ್ಚು ವಿಕೆಟ್ ಗಳಿಸಿದ್ದರು.

ಪ್ರಸ್ತುತ ರಾಜಸ್ಥಾನ್ ತಂಡದ ವೇಗದ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ಮಾಲಿಂಗ ವಹಿಸುತ್ತಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿ ಬೌಲರ್‌ಗಳ ಸಾಲಿನಲ್ಲಿ ಚಾಹಲ್ ಮುನ್ನಡೆಯಲ್ಲಿದ್ದು, 'ಪರ್ಪಲ್ ಕ್ಯಾಪ್' ತಮ್ಮ ಬಳಿಯೇ ಕಾಯ್ದಿರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT