ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಕಿಂಗ್ಸ್‌ ಇಲೆವನ್‌ನಿಂದ ತಂಡ ಖರೀದಿ

Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಮಾಲೀಕರು, ಕೆರೀಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌)ನಲ್ಲಿ ಆಡುವ ಸೇಂಟ್‌ ಲೂಸಿಯಾ ಝೂಕ್ಸ್‌ ತಂಡವನ್ನು ಖರೀದಿಸಿದ್ದಾರೆ.

ಐಪಿಎಲ್‌ ಫ್ರಾಂಚೈಸಿಯೊಂದು ಕೆರೀಬಿಯನ್‌ ಲೀಗ್‌ನಲ್ಲಿ ಆಡುವ ಫ್ರಾಂಚೈಸಿಯನ್ನು ಖರೀದಿ ಮಾಡಿದ್ದು, ಇದು ಎರಡನೇ ಬಾರಿ. ಈ ಹಿಂದೆ, ಕೋಲ್ಕತ್ತ ನೈಟ್‌ ರೈಡರ್ಸ್‌ 2015ರಲ್ಲಿ ಟ್ರಿನಿಡಾಡ್‌ ಮತ್ತು ಟೊಬ್ಯಾಗೊ ತಂಡವನ್ನು ಖರೀದಿಸಿತ್ತು.

ವೆಸ್ಟ್ ಇಂಡೀಸ್‌ ತಂಡದ ಮಾಜಿ ನಾಯಕ ಡ್ಯಾರೆನ್‌ ಸಮಿ, ಸೇಂಟ್‌ ಲೂಸಿಯಾ ಝೂಕ್ಸ್‌ ತಂಡದ ನೇತೃತ್ವ ವಹಿಸಿದ್ದಾರೆ. ಸೋಮವಾರ ಖರೀದಿ ಪ್ರಕ್ರಿಯೆ ನಡೆದಿದೆ.

ಎಂಟನೇ ವರ್ಷದ ಸಿಪಿಎಲ್‌ ಆಗಸ್ಟ್‌ 19 ರೀಂದ ಸೆಪ್ಟೆಂಬರ್‌ 26ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT