ಭಾನುವಾರ, ನವೆಂಬರ್ 27, 2022
27 °C

ಇರಾನಿ ಕಪ್‌: ಸೌರಾಷ್ಟ್ರ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್‌ಕೋಟ್‌ (ಪಿಟಿಐ): ಮಧ್ಯಮ ಮತ್ತು ಕೊನೆಯ ಕ್ರಮಾಂಕದ ಬ್ಯಾಟರ್‌ಗಳ ಛಲದ ಆಟದ ನೆರವಿನಿಂದ ಸೌರಾಷ್ಟ್ರ ತಂಡ, ಇರಾನಿ ಕಪ್‌ ಕ್ರಿಕೆಟ್ ಪಂದ್ಯದಲ್ಲಿ ರೆಸ್ಟ್‌ ಆಫ್‌ ಇಂಡಿಯಾ ವಿರುದ್ಧ ಮರುಹೋರಾಟ ನಡೆಸಿದೆ.

ಮೂರನೇ ದಿನವಾದ ಸೋಮವಾರದ ಆಟದ ಅಂತ್ಯಕ್ಕೆ ಸೌರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 368 ರನ್‌ ಗಳಿಸಿದೆ. ಜಯದೇವ್‌ ಉನದ್ಕತ್‌ ಬಳಗ ಇದೀಗ 92 ರನ್‌ಗಳ ಮುನ್ನಡೆಯಲ್ಲಿದೆ.

2 ವಿಕೆಟ್‌ಗೆ 49 ರನ್‌ಗಳಿಂದ ಆಟ ಮುಂದುವರಿಸಿದ ಸೌರಾಷ್ಟ್ರ, 87 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಸೋಲಿನ ಹಾದಿ ಹಿಡಿದಿತ್ತು. ಆದರೆ ಶೆಲ್ಡನ್‌ ಜಾಕ್ಸನ್‌, ಅರ್ಪಿತ್‌ ವಾಸವದ, ಪ್ರೇರಕ್‌ ಮಂಕಡ್‌ ಮತ್ತು ಜಯದೇವ್‌ ಉನದ್ಕತ್‌ ಅವರು ಅರ್ಧಶತಕ ಗಳಿಸಿ ಎದುರಾಳಿ ತಂಡವನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಸೌರಾಷ್ಟ್ರ 98, ರೆಸ್ಟ್ ಆಫ್ ಇಂಡಿಯಾ 110 ಓವರ್‌ಗಳಲ್ಲಿ 374. ಎರಡನೇ ಇನಿಂಗ್ಸ್; ಸೌರಾಷ್ಟ್ರ 98 ಓವರ್‌ಗಳಲ್ಲಿ 8 ವಿಕೆಟ್‌ಗೆ 368 (ಶೆಲ್ಡನ್‌ ಜಾಕ್ಸನ್‌ 71, ಅರ್ಪಿತ್‌ ವಾಸವದ 55, ಪ್ರೇರಕ್‌ ಮಂಕಡ್‌ 72, ಜಯದೇವ್‌ ಉನದ್ಕತ್‌ ಬ್ಯಾಟಿಂಗ್‌ 78, ಕುಲದೀಪ್‌ ಸೇನ್‌ 85ಕ್ಕೆ 3, ಸೌರಭ್‌ ಕುಮಾರ್‌ 80ಕ್ಕೆ 3)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.