ಡಬ್ಲಿನ್, ಐರ್ಲೆಂಡ್: ಸೊಗಸಾದ ಶತಕ (102, 117 ಎಸೆತ) ದಾಖಲಿಸಿದ ನಾಯಕ ಆ್ಯಂಡಿ ಬಲ್ಬಿರ್ನಿ ಐರ್ಲೆಂಡ್ ತಂಡಕ್ಕೆ ಭರ್ಜರಿ ಜಯ ದೊರಕಿಸಿಕೊಟ್ಟರು.
ದಕ್ಷಿಣ ಆಫ್ರಿಕಾ ಎದುರು ಮಂಗಳವಾರ ರಾತ್ರಿ ಇಲ್ಲಿ ನಡೆದ ಎರಡನೇ ಏಕದಿನ ಆ ತಂಡವು 43 ರನ್‌ಗಳಿಂದ ಗೆದ್ದಿತು. ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.
ಹರಿಣಪಡೆಯ ಎದುರು ಐರ್ಲೆಂಡ್‌ಗೆ ಒಲಿದ ಮೊದಲ ಜಯವಿದು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡವು ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 290 ರನ್ ಗಳಿಸಿತು.
ಬಲ್ಬಿರ್ನಿ ಇನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ ಇದ್ದವು. ಹ್ಯಾರಿ ಟೆಕ್ಟರ್ (79, 68 ಎ, 6 ಬೌಂ, 4 ಸಿ.) ಅವರು ಬಲ್ಬಿರ್ನಿಗೆ ಉತ್ತಮ ಬೆಂಬಲ ನೀಡಿದರು.
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದ ಪರ ಜೇನ್‌ಮನ್ ಮಲಾನ್ (84, 96ಎ, 7 ಬೌಂ, 4 ಸಿ.) ಹಾಗೂ ರಸ್ಸಿ ವಾನ್ ಡರ್ ಡಸೆನ್ (49) ಉತ್ತಮ ಮೊತ್ತ ದಾಖಲಿಸಿದರು. ಆದರೆ ಕೊನೆಯ ಹಂತದಲ್ಲಿ ಐರ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಿದ್ದರಿಂದ ಪ್ರವಾಸಿ ತಂಡಕ್ಕೆ ಗೆಲುವು ಕೈತಪ್ಪಿತು.
ದಕ್ಷಿಣ ಆಫ್ರಿಕಾ 247 ರನ್ ಗಳಿಸಿ ಎಲ್ಲ ವಿಕೆಟ್‌ಗಳನ್ನು ಒಪ್ಪಿಸಿತು.
ಮೂರು ಪಂದ್ಯಗಳ ಸರಣಿ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಸರಣಿ ಉಳಿಸಿಕೊಳ್ಳಲು ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲಿ ಜಯಿಸಲೇಬೇಕಿದೆ.
ಸಂಕ್ಷಿಪ್ತ ಸ್ಕೋರ್: ಐರ್ಲೆಂಡ್: 50 ಓವರ್‌ಗಳಲ್ಲಿ 5 ವಿಕೆಟ್‌ಗೆ 290 (ಆ್ಯಂಡಿ ಬಲ್ಬಿರ್ನಿ 102, ಹ್ಯಾರಿ ಹೆಕ್ಟರ್ 79, ಜಾರ್ಜ್ ಡಾಕ್‌ರೆಲ್ 45; ಆ್ಯಂಡಿಲೆ ಪಿಶುವಾಯೊ 73ಕ್ಕೆ 2, ತಬ್ರೇಜ್ ಶಂಸಿ 42ಕ್ಕೆ 1)
ದಕ್ಷಿಣ ಆಫ್ರಿಕಾ: 48.3 ಓವರ್‌ಗಳಲ್ಲಿ 247 (ಜೇನ್‌ಮನ್ ಮಲಾನ್ 84, ರಸ್ಸಿ ವ್ಯಾನ್ ಡರ್ ಡಸೆನ್ 49, ಡೇವಿಡ್ ಮಿಲ್ಲರ್ 24; ಆ್ಯಂಡಿ ಮೆಕ್‌ಬ್ರೈನ್ 34ಕ್ಕೆ 2, ಮಾರ್ಕ್ ಅಡೈರ್ 43ಕ್ಕೆ 2, ಜೋಶ್ ಲಿಟಲ್ 45ಕ್ಕೆ 2).
ಫಲಿತಾಂಶ: ಐರ್ಲೆಂಡ್ ತಂಡಕ್ಕೆ 43 ರನ್‌ಗಳ ಜಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.