ಬುಧವಾರ, ನವೆಂಬರ್ 25, 2020
26 °C
ಇಂಡಿಯನ್ ಸೂಫರ್ ಲೀಗ್ :ಕೆವೆಸಿ ಅಪೈ ಏಕೈಕ ಗೋಲು

ನಾರ್ತ್‌ಈಸ್ಟ್ ಯುನೈಟೆಡ್‌ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸ್ಕೋ: ಕೆವಿಸ್ ಅಪ್ಪೈ ಗಳಿಸಿದ  ಏಕೈಕ ಗೋಲಿನ ಬಲದಿಂದ ನಾರ್ತ್‌ಈಸ್ಟ್‌ ಯುನೈಟೆಡ್ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯಲ್ಲಿ ಶನಿವಾರದ ಪಂದ್ಯದಲ್ಲಿ ಜಯಿಸಿತು.

ತಿಲಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ  ನಾರ್ತ್‌ ಈಸ್ಟ್ ತಂಡವು 1–0ಯಿಂದ ಮುಂಬೈ ಸಿಟಿ ವಿರುದ್ಧ ಜಯಿಸಿತು.  ಹೊಸ ಪ್ರತಿಭಾನ್ವಿತರು ತುಂಬಿರುವ ಮುಂಬೈ ತಂಡಕ್ಕೆ ಕಠಿಣ ಸವಾಲೊಡ್ಡಿದ್ದ ನಾರ್ತ್‌ ಈಸ್ಟ್‌, ಆಲ್‌ರೌಂಡ್ ಆಟವಾಡಿತು.

49ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಅಪೈ ಗೋಲು ಬಾರಿಸಿದರು. ನಂತರದ ಆಟದಲ್ಲಿ ತಂಡವು ರಕ್ಷಣಾತ್ಮಕವಾಗಿ ಆಡಿ ಮುಂಬೈ ಮೇಲಿನ ಒತ್ತಡ ಹೆಚ್ಚಿಸಿತು.

ಆರಂಭಿಕ ಹಂತದಲ್ಲಿ ಮುಂಬೈ ತಂಡವು ತುಸು ಆಕ್ರಮಣಕಾರಿ ಆಟವಾಡಿತು. ಹೆಚ್ಚು ಹೊತ್ತು ಚೆಂಡನ್ನು ತನ್ನ ನಿಯಂತ್ರಣದಲ್ಲಿರುವಂತೆ ನೋಡಿಕೊಂಡಿತ್ತು. ಆದರೆ ನಾರ್ತ್‌ಈಸ್ಟ್ ರಕ್ಷಣಾ ಪಡೆಯು ಚಾಣಾಕ್ಷತನ ಮೆರೆಯಿತು.  43ನೇ ನಿಮಿಷದಲ್ಲಿ ಮುಂಬೈ ತಂಡದ ಅಹಮದ್ ಜಹುವಾ ಒರಟು ಆಟಕ್ಕೆ ದಂಡ ತೆತ್ತರು.  ಮೊರಾಕ್ಕೊದ ಜಹುವಾ, ಎದುರಾಳಿ ಆಟಗಾರರು ಮತ್ತು ರೆಫರಿ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರಿಂದ ಕೆಂಪು ಕಾರ್ಡ್ ಪಡೆದು ನಡೆದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು