ಸೋಮವಾರ, ಜುಲೈ 4, 2022
21 °C
ಇಂಡಿಯನ್‌ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಪಂದ್ಯದ ಏಕೈಕ ಗೋಲು ಗಳಿಸಿದ ಫೆಡೆರಿಕೊ ಗಾಲೆಗೊ

ಐಎಸ್‌ಎಲ್‌: ಅಜೇಯ ಓಟ ಮುಂದುವರಿಸಿದ ಬಿಎಫ್‌ಸಿ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಗುವಾಹಟಿ: ನಿರಂತರ ಆರು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದ್ದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಬಲಿಷ್ಠ ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧವೂ ಪಾರಮ್ಯ ಮೆರೆಯಿತು.

ಇಲ್ಲಿನ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಬಿಎಫ್‌ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ನಡುವಿನ ಪಂದ್ಯ 1–1ರಿಂದ ಡ್ರಾಗೊಂಡಿತು.

64ನೇ ನಿಮಿಷದಲ್ಲಿ ಫೆಡೆರಿಕ್ ಗಾಲೆಗೊ ಆತಿಥೇಯ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. 90ನೇ ನಿಮಿಷದಲ್ಲಿ ಚೆಂಚೊ ಗೆಲ್ಶೆನ್‌ ನಿರ್ಣಾಯಕ ಗೋಲು ಗಳಿಸಿ ಬಿಎಫ್‌ಸಿ ಪಾಳಯದಲ್ಲಿ ಸಂಭ್ರಮದ ಹೊನಲು ಹರಿಸಿದರು.

ಈ ಮೂಲಕ ಒಂಬತ್ತು ಪಂದ್ಯಗಳಲ್ಲಿ ಏಳರಲ್ಲಿ ಗೆಲುವು ಸಾಧಿಸಿದ ತಂಡ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಂತಾಯಿತು.

ಪವಾಡದ ನಿರೀಕ್ಷೆಯಲ್ಲಿ ಚಾಂಪಿಯನ್ನರು: ಮುಂಬೈಯಲ್ಲಿ ಗುರುವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಎಫ್‌ಸಿ ಮುಂಬೈ ಸಿಟಿ ಮತ್ತು ಚಾಂಪಿಯನ್‌ ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ.

10 ಪಂದ್ಯಗಳನ್ನು ಆಡಿರುವ ಚೆನ್ನೈಯಿನ್‌ ಒಂದರಲ್ಲಿ ಮಾತ್ರ ಜಯ ಗಳಿಸಿದ್ದು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ನಾಕ್‌ ಔಟ್‌ ಹಂತ ತಲುಪಬೇಕಾದರೆ ಪವಾಡ ನಡೆಯಬೇಕಾಗಿದೆ.

ಈ ಬಾರಿಯ ಟೂರ್ನಿಯಲ್ಲಿ ಮುಂಬೈ ಸಿಟಿ ಉತ್ತಮ ಸಾಮರ್ಥ್ಯ ತೋರಿದೆ. ಒಂಬತ್ತು ಪಂದ್ಯಗಳಲ್ಲಿ ಐದನ್ನು ಗೆದ್ದಿದ್ದು ಎರಡನ್ನು ಡ್ರಾ ಮಾಡಿಕೊಂಡಿದೆ. ಗೋವಾ ಎದುರಿನ ಪಂದ್ಯದಲ್ಲಿ ಐದು ಗೋಲುಗಳನ್ನು ಬಿಟ್ಟುಕೊಟ್ಟ ನಂತರದ ಪಂದ್ಯಗಳಲ್ಲಿ ಎದುರಾಳಿಗೆ ನೀಡಿದ್ದು ಎರಡು ಗೋಲು ಮಾತ್ರ.

ಗೋವಾ ವಿರುದ್ಧದ ಸೋಲಿನ ನಂತರ ಪಂದ್ಯಗಳಲ್ಲಿ ಸತತವಾಗಿ ಗೆಲುವು ಸಾಧಿಸಿದೆ. ಹೀಗಾಗಿ ತವರಿನ ಅಂಗಣದಲ್ಲಿ ಜಯದ ಓಟವನ್ನು ಮುಂದುವರಿಸುವ ಭರವಸೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು