ಶುಕ್ರವಾರ, ಜನವರಿ 22, 2021
25 °C
1981ರ ಪಂದ್ಯದ ಪ್ರಸಂಗ ನೆನಪಿಸಿಕೊಂಡ ಸುನಿಲ್ ಗಾವಸ್ಕರ್

’ಎಲ್‌ಬಿಡಬ್ಲ್ಯು ಆಗಿರಲಿಲ್ಲ; ಹೊರ ನಡಿಯೆಂದಿದ್ದ ಆಸ್ಟ್ರೇಲಿಯನ್ನರು‘

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ’ಅವತ್ತು ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ನಾನು ಎಲ್‌ಬಿಡಬ್ಲ್ಯು ಆಗಿರಲಿಲ್ಲ. ಆದರೆ, ಆಸ್ಟ್ರೇಲಿಯಾ ಆಟಗಾರರು ಹೊರ ನಡಿ ಎಂದು ಕೂಗಿದ್ದರು. ಆದ್ದರಿಂದ ಸಿಟ್ಟಿನಿಂದ ಹೊರನಡೆದೆ‘ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಗಾವಸ್ಕರ್ ನೆನಪಿಸಿಕೊಂಡಿದ್ದಾರೆ.

1981ರಲ್ಲಿ ಮೆಲ್ಬರ್ನ್‌ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಡೆನಿಸ್ ಲಿಲ್ಲಿ ಎಸೆತವು ಗಾವಸ್ಕರ್ ಪ್ಯಾಡ್‌ಗೆ ಬಡಿದಿತ್ತು. ಅಂಪೈರ್ ರೆಕ್ಸ್‌ ವೈಟ್‌ಹೆಡ್ ಅವರು ಔಟ್ ನೀಡಿದ್ದರು.  ಆದರೆ, ಚೆಂಡು ಪ್ಯಾಡ್‌ಗೆ ತಗುಲುವ ಮುನ್ನ ತಮ್ಮ ಬ್ಯಾಟ್‌ಗೆ ತಗುಲಿತ್ತು ಎಂದು ಗಾವಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಪ್ಯಾಡ್‌ಗೆ ಬ್ಯಾಟ್‌ನಿಂದ ತಟ್ಟಿ ಕ್ರೀಸ್‌ ಪಕ್ಕ ನಿಂತು ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಆಗ ಗಾವಸ್ಕರ್ ಮತ್ತು ಆಸ್ಟ್ರೇಲಿಯಾ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು.

’ಅಂಪೈರ್ ತೀರ್ಮಾನವು ನನಗೆ ಬಹಳ ಬೇಸರ ಮೂಡಿಸಿತ್ತು. ಬ್ಯಾಟಿನ ಒಳ ಅಂಚನ್ನು ಚೆಂಡು ಸವರಿತ್ತು. ಶಾರ್ಟ್‌ ಲೆಗ್ ಫೀಲ್ಡರ್‌ಗೂ ಅದು ಕಾಣುತ್ತಿತ್ತು. ಆದರೂ ಡೆನಿಸ್ ಬಂದು ನಿನ್ನ ಪ್ಯಾಡ್‌ಗೆ ಚೆಂಡು ಬಡಿದಿದೆ ಅಂದರು. ಅದಕ್ಕೆ, ಇಲ್ಲ ನಾನು ಹೊಡೆದ್ದಿದ್ದೇನೆಂದು ಪ್ರತಿಕ್ರಿಯಿಸಿದ್ದೆ. ಆದರೆ ಆಸ್ಟ್ರೇಲಿಯಾ ಆಟಗಾರರು ಹೊರಗೆ ನಡಿ ಎಂದರು‘ ಎಂದು ಸ್ಮರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು