ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತಕ್ಕೆ ಬಂದಿಳಿದ ಶ್ರೇಯಸ್ ಅಯ್ಯರ್

Published 17 ಮಾರ್ಚ್ 2024, 17:37 IST
Last Updated 17 ಮಾರ್ಚ್ 2024, 17:37 IST
ಅಕ್ಷರ ಗಾತ್ರ

ಕೋಲ್ಕತ್ತ: ತಂಡದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಐಪಿಎಲ್‌ನಲ್ಲಿ ಆಡಲಿರುವ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಭಾನುವಾರ ಅವರು ನೆಟ್ಸ್‌ನಲ್ಲಿ ಅಭ್ಯಾಸ ಕೂಡ ಮಾಡಿದರು.

ಈ ಆವೃತ್ತಿಯಲ್ಲಿ ಅವರು ಕೋಲ್ಕತ್ತ ತಂಡವನ್ನು ಮುನ್ನಡೆಸಲಿದ್ದಾರೆ. 

ಈಚೆಗೆ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ಅವರು ಆಡಿದ್ದರು. ಅದರಲ್ಲಿ ಕೊನೆಯ ಎರಡು ದಿನ ಅವರು ಬೆನ್ನುನೋವಿನಿಂದಾಗಿ ಫೀಲ್ಡಿಂಗ್ ಮಾಡಿರಲಿಲ್ಲ. ಆದ್ದರಿಂದ ಅವರು ಐಪಿಎಲ್‌ನಲ್ಲಿ ಆಡುವುದು ಅನುಮಾನವಿತ್ತು. 

ಶನಿವಾರ ರಾತ್ರಿ ಶ್ರೇಯಸ್ ಅವರು ಕೋಲ್ಕತ್ತ ನಗರಕ್ಕೆ ಬಂದಿಳಿದ ಚಿತ್ರಗಳನ್ನು ನೈಟ್‌ ರೈಡರ್ಸ್ ತಂಡವು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಾಕಿದೆ. 

ಶ್ರೇಯಸ್ ಅವರು ಹೋದ ವರ್ಷದ ಏಪ್ರಿಲ್‌ನಲ್ಲಿ ಬೆನ್ನಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಪಡೆದಿದ್ದರು. ಅದರಿಂದಾಗಿ  ಐಪಿಎಲ್‌ನಲ್ಲಿ ಆಡಿರಲಿಲ್ಲ. ಸೆಪ್ಟೆಂಬರ್‌ನಲ್ಲಿ ಕ್ರಿಕೆಟ್‌ಗೆ ಮರಳಿದ್ದರು. ಆದರೂ ಬೆನ್ನು ನೋವು ಮತ್ತೆ ಕಾಡಿತ್ತು. ನಂತರ ಚೇತರಿಸಿಕೊಂಡ ಅವರು ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು.  

ಈಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಯ ಎರಡು ಟೆಸ್ಟ್‌ಗಳಲ್ಲಿ ಆಡಿದ್ದರು. ಮತ್ತೆ ಬೆನ್ನುನೋವಿನ ಸಮಸ್ಯೆಯಿಂದ ಹೊರಗುಳಿದಿದ್ದರು. ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್‌ನಲ್ಲಿ ಕೂಡ ಆಡಿರಲಿಲ್ಲ. 

ಈ ಬಾರಿ ಕೆಕೆಆರ್ ತಂಡವು ಇದೇ 23ರಂದು ತನ್ನ ಮೊದಲ ಪಂದ್ಯ ಆಡಲಿದೆ. ಈಡನ್ ಗಾರ್ಡನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT