ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಗ್ಲೆಂಡ್ ತಂಡವನ್ನು ನೋಡಿ ಕಲಿಯಿರಿ’– ಜಾಕ್‌ ಕಾಲಿಸ್ ಅಸಮಾಧಾನ

ಪ್ಲೆಸಿ ಪಡೆಯ ನೀರಸ ಪ್ರದರ್ಶನದ ಬಗ್ಗೆ ಹಿರಿಯ ಆಟಗಾರನ ಮಾತು
Last Updated 24 ಜೂನ್ 2019, 14:21 IST
ಅಕ್ಷರ ಗಾತ್ರ

ಲಂಡನ್: ಸತತ ಸೋಲಿನಿಂದ ಕಂಗೆಟ್ಟು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಹಿರಿಯ ಆಟಗಾರ ಜಾಕ್‌ಕಾಲಿಸ್ ಸಲಹೆ ನೀಡಿದ್ದಾರೆ. ಸೋಲಿನ ನಿರಾಸೆ ಮರೆತು ಗೆಲುವಿನ ಸೌಧ ಕಟ್ಟುವುದು ಹೇಗೆ ಎಂದು ಇಂಗ್ಲೆಂಡ್ ತಂಡವನ್ನು ನೋಡಿ ಕಲಿಯಬೇಕು ಎಂದುಕಾಲಿಸ್ ಹೇಳಿದ್ದಾರೆ.

ಆಡಿದ ಏಳು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿರುವ ದಕ್ಷಿಣ ಆಫ್ರಿಕಾ ಐದರಲ್ಲಿ ಸೋತಿದೆ. ಒಂದು ಪ‍ಂದ್ಯ ಮಳೆಯಿಂದ ರದ್ದಾಗಿತ್ತು. ಇನ್ನು ಎರಡು ಪಂದ್ಯಗಳು ಮಾತ್ರ ಬಾಕಿ ಇದ್ದು ತಂಡ ಕೇವಲ ಮೂರು ಪಾಯಿಂಟ್‌ಗಳೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಭಾನುವಾರ ಪಾಕಿಸ್ತಾನ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ರನ್‌ಗಳಿಂದ ಸೋತಿತ್ತು. ಈ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಬಾಬರ್ ಆಜಂ ಮತ್ತು ಹ್ಯಾರಿಸ್ ಸೊಹೇಲ್ ಅವರ ಅರ್ಧಶತಕಗಳ ಬಲದಿಂದ 308 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಗೆ 259 ರನ್ ಗಳಿಸಿ ಸೋಲೊಪ್ಪಿಕೊಂಡಿತ್ತು. ತಲಾ ಮೂರು ವಿಕೆಟ್ ಕಬಳಿಸಿದ್ದ ವಹಾಬ್ ರಿಯಾಜ್ ಮತ್ತು ಶಾದಬ್ ಖಾನ್ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

‘ಇಂಗ್ಲೆಂಡ್ ಕಳೆದ ಬಾರಿ ವಿಶ್ವಕಪ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರ ಬಿದ್ದಿತ್ತು. ಆದರೆ ನಂತರ ಚೇತರಿಸಿಕೊಂಡು ಈಗ ಐಸಿಸಿ ರ‍್ಯಾಂಕಿಂಗ್‌ನ ಅಗ್ರ ಸ್ಥಾನಕ್ಕೇರಿದೆ. ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಿದೆ. ಮೊದಲ ಪಂದ್ಯದಲ್ಲಿ ಸೋತರೂ ಈಗ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸಿದೆ. ಸೋಲಿನ ಸುಳಿಯಿಂದ ಮೇಲೇಳುವುದು ಹೇಗೆ ಎಂಬುದಕ್ಕೆ ಇಂಗ್ಲೆಂಡ್ ಮಾದರಿಯಾಗಿದೆ’ ಎಂದು ಕಾಲಿಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT