ಭಾರತದ ಮಾಜಿ ಕ್ರಿಕೆಟಿಗ ಮಾರ್ಟಿನ್ ಆರೋಗ್ಯ ಸ್ಥಿತಿ ಚಿಂತಾಜನಕ

7

ಭಾರತದ ಮಾಜಿ ಕ್ರಿಕೆಟಿಗ ಮಾರ್ಟಿನ್ ಆರೋಗ್ಯ ಸ್ಥಿತಿ ಚಿಂತಾಜನಕ

Published:
Updated:

ವಡೋದರಾ: ವಾಹನ ಅಪಘಾತಕ್ಕೀಡಾಗಿದ್ದ  ಭಾರತದ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.  2018 ಡಿಸೆಂಬರ್ 28ರಂದು ರಸ್ತೆ ಅಪಘಾತಕ್ಕೀಡಾಗಿದ್ದ ಮಾರ್ಟಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸಹಾಯ ಮಾಡುವಂತೆ ಕುಟುಂಬ ಮನವಿ ಮಾಡಿದೆ.

 ಬರೋಡಾ ತಂಡದ ಮಾಜಿ ನಾಯಕನಾಗಿದ್ದ ಮಾರ್ಟಿನ್, ತಮ್ಮ ನಾಯಕತ್ವದಲ್ಲಿ ರಣಜಿ ಟ್ರೋಫಿ ಗೆದ್ದಿದ್ದರು.

ಈಗಾಗಲೇ ಬಿಸಿಸಿಐ ₹5 ಲಕ್ಷ, ಬರೋಡಾ ಕ್ರಿಕೆಟ್ ಅಸೋಸಿಯೇಷನ್ ₹3 ಲಕ್ಷ ಧನ ಸಹಾಯ ನೀಡಿದೆ ಎಂದು ಬಿಸಿಸಿಐ ಮತ್ತು ಬಿಸಿಎ ಮಾಜಿ ಕಾರ್ಯದರ್ಶಿ ಸಂಜಯ್ ಪಟೇಲ್  ಹೇಳಿರುವುದಾಗಿ ಇಎಸ್‍ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. 

ಆಸ್ಪತ್ರೆಯ ಬಿಲ್ ಈಗಾಗಲೇ ₹11 ಲಕ್ಷ ದಾಟಿದ್ದು, ಆಸ್ಪತ್ರೆಯವರು ಒಂದು ಹಂತದಲ್ಲಿ ಚಿಕಿತ್ಸೆ ನೀಡುವುದನ್ನೇ ನಿಲ್ಲಿಸಿದ್ದರು. ತಕ್ಷಣವೇ ಬಿಸಿಸಿಐ ಹಣವನ್ನು ಆಸ್ಪತ್ರೆಗೆ ಜಮೆ ಮಾಡಿದ್ದು, ಚಿಕಿತ್ಸೆಗೆ ತಡೆಯಾಗದಂತೆ ನೋಡಿಕೊಂಡಿದೆ ಎಂದಿದ್ದಾರೆ ಪಟೇಲ್. 

ಮಾರ್ಟಿನ್, ಭಾರತದ ಪರವಾಗಿ ಸೆಪ್ಟೆಂಬರ್ 1999 ಮತ್ತು ಅಕ್ಟೋಬರ್ 2001ರ ಅವಧಿಯಲ್ಲಿ 10 ಏಕದಿನ ಪಂದ್ಯಗಳಲ್ಲಿ ಆಡಿದ್ದರು.   ಬರೋಡಾ ತಂಡ ಪ್ರಥಮ ಬಾರಿ ರಣಜಿ ಟ್ರೋಫಿ ಗೆದದ್ದು ಮಾರ್ಟಿನ್ ನಾಯಕತ್ವದಲ್ಲಾಗಿತ್ತು,

011ರಲ್ಲಿ  ಮಾನವ ಕಳ್ಳಸಾಗಣಿಕೆ ಪ್ರಕರಣದಲ್ಲಿ ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದ ಮಾರ್ಟಿನ್ ಆನಂತರ ಬರೋಡಾ ತಂಡಕ್ಕೆ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಸೌರವ್ ಗಂಗೂಲಿ ಸಹಾಯ ಹಸ್ತ
ವೆಂಟಿಲೇಟರ್‌ನಲ್ಲಿರುವ ಕ್ರಿಕೆಟಿಗ ಮಾರ್ಟಿನ್‍ಗೆ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸಹಾಯ ಹಸ್ತ ಚಾಚಿದ್ದಾರೆ. ನಾನು ಮತ್ತು ಮಾರ್ಟಿನ್  ಒಂದೇ ತಂಡದ ಸದಸ್ಯರಾಗಿದ್ದೆವು. ಮಾರ್ಟಿನ್ ಶೀಘ್ರವೇ ಗುಣ ಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಸಮಯದಲ್ಲಿ ಅವರ ಕುಟುಂಬ ಒಂಟಿಯಲ್ಲ ಎಂದು ಸೌರವ್ ಗಂಗೂಲಿ ಹೇಳಿರುವುದಾಗಿ ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !