ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಗುತ್ತಿಗೆ ಒಪ್ಪಂದ: ಜಡೇಜಗೆ ಬಡ್ತಿ, ರಾಹುಲ್‌ಗೆ ಹಿಂಬಡ್ತಿ

Last Updated 27 ಮಾರ್ಚ್ 2023, 5:32 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕೇಂದ್ರಿಯ ಗುತ್ತಿಗೆಯ 'ಎ ಪ್ಲಸ್' ಗ್ರೇಡ್ ಪಡೆದಿದ್ದಾರೆ.

ಈ ನಾಲ್ವರು ಆಟಗಾರರೂ ವಾರ್ಷಿಕ ತಲಾ ₹7 ಕೋಟಿ ಮೌಲ್ಯ ಪಡೆಯಲಿದ್ದಾರೆ. ಈ ಪೈಕಿ ರವೀಂದ್ರ ಜಡೇಜ ಬಡ್ತಿ ಪಡೆದಿದ್ದಾರೆ.

2022-23ನೇ ಸಾಲಿನ ಕೇಂದ್ರಿಯ ಗುತ್ತಿಗೆ ಒಪ್ಪಂದ ಆಟಗಾರರ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. 'ಎ ಪ್ಲಸ್' ಗ್ರೇಡ್ ಪಡೆದವರು ವಾರ್ಷಿಕ ತಲಾ ₹7 ಕೋಟಿ, 'ಎ' ಗ್ರೇಡ್ ಪಡೆದವರು ತಲಾ ₹5 ಕೋಟಿ, 'ಬಿ' ಗ್ರೇಡ್ ಪಡೆದವರು ತಲಾ ₹3 ಕೋಟಿ ಮತ್ತು 'ಸಿ' ಗ್ರೇಡ್ ಪಡೆದವರು ತಲಾ ₹1 ಕೋಟಿ ಪಡೆಯಲಿದ್ದಾರೆ.

ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 26 ಆಟಗಾರರು ಸ್ಥಾನ ಪಡೆದಿದ್ದಾರೆ. ಭುವನೇಶ್ವರ್ ಕುಮಾರ್, ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮಾ ಗುತ್ತಿಗೆ ಒಪ್ಪಂದ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಕನ್ನಡಿಗ ಕೆ.ಎಲ್. ರಾಹುಲ್, 'ಬಿ' ಗ್ರೇಡ್‌ಗೆ ಹಿಂಬಡ್ತಿ ಪಡೆದಿದ್ದಾರೆ. ಆಲ್‌ರೌಂಡರ್ ಅಕ್ಷರ್ ಪಟೇಲ್ 'ಎ' ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ. ವಿಕೆಟ್ ಕೀಪರ್ ಕೆ.ಎಸ್. ಭರತ್ ಇದೇ ಮೊದಲ ಬಾರಿಗೆ 'ಸಿ' ಗ್ರೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಸಿಸಿಐ ಕೇಂದ್ರಿಯ ಗುತ್ತಿಗೆ ಒಪ್ಪಂದ; ಆಟಗಾರರ ಗ್ರೇಡ್ ವಿವರ ಇಂತಿದೆ:

ಎ ಪ್ಲಸ್ ಗ್ರೇಡ್ (₹7 ಕೋಟಿ): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ
ಎ ಗ್ರೇಡ್ (₹5 ಕೋಟಿ): ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಮೊಹಮ್ಮದ್ ಶಮಿ, ರಿಷಭ್ ಪಂತ್, ಅಕ್ಷರ್ ಪಟೇಲ್
ಬಿ ಗ್ರೇಡ್ (₹3 ಕೋಟಿ): ಚೇತೇಶ್ವರ ಪೂಜಾರ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಸಿರಾಜ್, ಸೂರ್ಯಕುಮಾರ್ ಯಾದವ್, ಶುಭಮನ್ ಗಿಲ್.
ಸಿ ಗ್ರೇಡ್ (₹1 ಕೋಟಿ): ಉಮೇಶ್ ಯಾದವ್, ಶಿಖರ್ ಧವನ್, ಶಾರ್ದೂಲ್ ಠಾಕೂರ್, ಇಶಾನ್ ಕಿಶಾನ್, ದೀಪಕ್ ಹೂಡಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್. ಭರತ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT