ಮಂಗಳವಾರ, ಸೆಪ್ಟೆಂಬರ್ 21, 2021
21 °C

ಟೆಸ್ಟ್ ಚಾಂಪಿಯನ್‌ಷಿಪ್: ಪಂದ್ಯ ವೀಕ್ಷಿಸುವ ಬದಲು ಶೌಚಾಲಯದಲ್ಲಿ ಅಡಗಿದ್ದ ಜೆಮಿಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಸೌತಾಂಪ್ಟನ್‌ನಲ್ಲಿ ಈಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವು ಗೆಲುವಿನ ಗುರಿ ಬೆನ್ನಟ್ಟಿದ್ದ ಇನಿಂಗ್ಸ್‌ನ ಸಂದರ್ಭದಲ್ಲಿ ಬೌಲರ್ ಕೈಲ್ ಜೆಮಿಸನ್ ಶೌಚಾಲಯದಲ್ಲಿ ಅಡಗಿಕೊಂಡಿದ್ದರಂತೆ!

ನ್ಯೂಜಿಲೆಂಡ್‌ನ ವೇಗಿ ಜೆಮಿಸನ್ ಅವರು ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದರು. ತಂಡವು 139 ರನ್‌ಗಳ ಗುರಿ ಬೆನ್ನಟ್ಟಿದ್ದಾಗ ಅತೀವ ಭಾವೋದ್ವೇಗಕ್ಕೆ ಒಳಗಾಗಿದ್ದ ಅವರು ಇನಿಂಗ್ಸ್‌ನ್ನು ವೀಕ್ಷಿಸುವ ಬದಲು ಡ್ರೆಸಿಂಗ್ ಕೋಣೆಯ ಶೌಚಾಲಯದಲ್ಲಿ ಹೋಗಿ ಕುಳಿತಿದ್ದರು.

‘ಆ ಇನಿಂಗ್ಸ್‌ನ ಅವಧಿಯು ನನ್ನ ಪಾಲಿಗೆ ಬಹಳ ಕಠಿಣವಾಗಿತ್ತು. ನಮ್ಮ ಸಹ ಆಟಗಾರರು ಪಿಚ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ನಾವು ಡ್ರೆಸಿಂಗ್ ರೂಮ್‌ನಲ್ಲಿದ್ದು ಟಿವಿಯಲ್ಲಿ ಪಂದ್ಯ ನೋಡುತ್ತಿದ್ದೆವು. ಆದರೆ ಎರಡು ವಿಕೆಟ್‌ಗಳು ಪತನವಾದಾಗ, ಭಾರತದ ಅಭಿಮಾನಿಗಳ ಉತ್ಸಾಹ ಕಂಡು ಒತ್ತಡ ಹೆಚ್ಚಿತ್ತು‘ ಎಂದು ಗೋಲ್ಡ್ ಎಎಂ. ಕಾರ್ಯಕ್ರಮದಲ್ಲಿ ಜೆಮಿಸನ್ ಹೇಳಿದ್ದಾರೆ.

ಆ ಪಂದ್ಯದಲ್ಲಿ ಜಯಿಸಿದ್ದ ನ್ಯೂಜಿಲೆಂಡ್ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಆಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು