ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಕೋಚ್ ಸ್ಥಾನಕ್ಕೆ ಲ್ಯಾಂಗರ್ ರಾಜೀನಾಮೆ

Last Updated 5 ಫೆಬ್ರುವರಿ 2022, 14:28 IST
ಅಕ್ಷರ ಗಾತ್ರ

ಮೆಲ್ಬರ್ನ್:ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ಜಸ್ಟಿನ್ ಲ್ಯಾಂಗರ್ ಶನಿವಾರ ರಾಜೀನಾಮೆ ನೀಡಿದ್ದಾರೆ.

ತಂಡದ ಅನುಭವಿ ಆಟಗಾರರು ಲ್ಯಾಂಗರ್ ಅವರ ತರಬೇತಿಯ ಕುರಿತು ಹಲವು ದೂರುಗಳನ್ನು ನೀಡಿದ್ದರು. ಅವರ ಕೋಚಿಂಗ್ ಶೈಲಿಯು ಹಳೆಯ ಮಾದರಿಯಾಗಿದೆ. ಕ್ರಿಕೆಟ್ ಮಂಡಳಿಯ ನಿರ್ದೇಶಕರ ಸಲಹೆ, ಸೂಚನೆಗಳನ್ನೂ ನಿರ್ಲಕ್ಷಿಸಿದ್ದರೆಂಬ ಆರೋಪ ಅವರ ಮೇಲಿತ್ತು.

‘ಈ ದಿನ ಬೆಳಿಗ್ಗೆ ಜಸ್ಟಿನ್ ಲ್ಯಾಂಗರ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ’ ಎಂದು ಅವರ ಪರವಾಗಿ ಡಿಎಸ್‌ಇಜಿ ಮ್ಯಾನೇಜ್‌ಮೆಂಟ್ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್, ‘ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಇದು ವಿಷಾದದ ದಿನವಾಗಿದೆ’ ಎಂದಿದ್ದಾರೆ.

ಲ್ಯಾಂಗರ್ ಮಾರ್ಗದರ್ಶನದಲ್ಲಿ ತಂಡವು ಟಿ20 ವಿಶ್ವಕಪ್ ಜಯಿಸಿತು. ಅಲ್ಲದೇ ತವರಿನಲ್ಲಿಯೇ ನಡೆದ ಇಂಗ್ಲೆಂಡ್ ಎದುರಿನ ಆ್ಯಷಸ್ ಟೆಸ್‌ ಸರಣಿಯಲ್ಲಿ 4–0ಯಿಂದ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು.

‘ಕೆಲವೇ ಕೆಲವು ಕಿರಿಯ ಆಟಗರರು ಮತ್ತು ನೆರವು ಸಿಬ್ಬಂದಿಯು ಲ್ಯಾಂಗರ್‌ ಬಗ್ಗೆ ಅಸಮಾಧಾನಗೊಂಡಿತ್ತು. ಆದರೆ ತಂಡದ ನಾಯಕ ಪ್ಯಾಟ್ ಕಮಿನ್ಸ್‌ ಅವರು ಲ್ಯಾಂಗರ್‌ಗೆ ಬಹಿರಂಗವಾಗಿ ಬೆಂಬಲ ಸೂಚಿಸದಿರುವುದು ಸರಿಯಲ್ಲ’ ಎಂದು ಪಾಂಟಿಂಗ್ ಹೇಳಿದ್ದಾರೆ.

ಲ್ಯಾಂಗರ್ ಅವರ ಬೆನ್ನಿಗೆ ನಿಲ್ಲದ ಆಟಗಾರರು ಮತ್ತು ತಂಡದ ಸಿಬ್ಬಂದಿ ತಪ್ಪು ಮಾಡಿದ್ದಾರೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ’ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT