ಜೈಪುರ: ಕಿಶನ್ ಎಸ್ ಬೆದರೆ ಅಮೋಘ ಶತಕದ (135; 272ಎ, 4X12) ನೆರವಿನಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ತಂಡವು ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಕೆ. ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.

ಡೆಲ್ಲಿಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆಯು ಮೊದಲ ಇನಿಂಗ್ಸ್ನಲ್ಲಿ 99.4 ಓವರ್ಗಳಲ್ಲಿ 313 ರನ್ ಗಳಿಸಿತು. ಕರ್ನಾಟಕ ತಂಡವು 136.4 ಓವರ್ಗಳಲ್ಲಿ 544 ರನ್ ಗಳಿಸಿತು. ಬುಧವಾರ ನಿಕಿನ್ ಜೋಸ್ ಶತಕ ಗಳಿಸಿದ್ದರು. ಕಿಶನ್ ಕೂಡ ಶತಕ ಬಾರಿಸಿದರು. ಶುಭಾಂಗ್ ಹೆಗ್ಡೆ 96 ರನ್ ಗಳಿಸಿದರು.

ಗುರುವಾರ ಮೂರನೇ ದಿನದಾಟದ ಮುಕ್ತಾಯಕ್ಕೆ ಡೆಲ್ಲಿ ತಂಡವು ಎರಡನೇ ಇನಿಂಗ್ಸ್ನಲ್ಲಿ 21 ಓವರ್ಗಳಲ್ಲಿ 4 ವಿಕೆಟ್ಗಳಿಗೆ 44 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಡೆಲ್ಲಿ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ: 99.4 ಓವರ್ಗಳಲ್ಲಿ 313, ಕರ್ನಾಟಕ: 136.3 ಓವರ್ಗಳಲ್ಲಿ 544 (ಕಿಶನ್ ಎಸ್ ಬೆದರೆ 135, ಶುಭಾಂಗ್ ಹೆಗ್ಡೆ 96, ವೈಶಾಖ ವಿಜಯಕುಮಾರ್ 30, ಯೋಗೇಶ್ ಶರ್ಮಾ 152ಕ್ಕೆ7) ಎರಡನೇ ಇನಿಂಗ್ಸ್: ಡೆಲ್ಲಿ ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ: 21 ಓವರ್ಗಳಲ್ಲಿ 4ಕ್ಕೆ44 (ಸುಮಿತ್ ಮಾಥೂರ್ ಔಟಾಗದೆ 17, ವಿದ್ವತ್ ಕಾವೇರಪ್ಪ 15ಕ್ಕೆ1, ರಿಷಿ ಬೋಪಣ್ಣ 5ಕ್ಕೆ1, ಶುಭಾಂಗ್ ಹೆಗ್ಡೆ 3ಕ್ಕೆ1, ವೈಶಾಖ 9ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.