ಬುಧವಾರ, ಜನವರಿ 29, 2020
25 °C

ರಣಜಿ ಕ್ರಿಕೆಟ್‌: ಹಿಮಾಚಲ ವಿರುದ್ಧದ ಪಂದ್ಯಕ್ಕೆ ರೋನಿತ್‌ ಅಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇದೇ ತಿಂಗಳ 25ರಿಂದ 28ರವರೆಗೆ ಮೈಸೂರಿನಲ್ಲಿ ನಡೆಯುವ ಹಿಮಾಚಲ ಪ್ರದೇಶ ಎದುರಿನ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯಕ್ಕೆ ರೋನಿತ್‌ ಮೋರೆ ಅಲಭ್ಯರಾಗಿದ್ದಾರೆ.

ಗಾಯದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಅವರ ಬದಲು ಪ್ರತೀಕ್‌ ಜೈನ್‌ಗೆ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸೋಮವಾರ ಪರಿಷ್ಕೃತ ತಂಡವನ್ನು ಪ್ರಕಟಿಸಿದೆ.

ಕರುಣ್‌ ನಾಯರ್‌ ತಂಡವನ್ನು ಮುನ್ನಡೆಸಲಿದ್ದು, ಶ್ರೇಯಸ್‌ ಗೋಪಾಲ್‌ ಉಪ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಯಂಕ್‌ ಅಗರವಾಲ್‌ ಈ ಪಂದ್ಯದಲ್ಲಿ ಆಡಲಿದ್ದಾರೆ.

ತಂಡ ಇಂತಿದೆ: ಕರುಣ್‌ ನಾಯರ್‌ (ನಾಯಕ), ರೋಹನ್‌ ಕದಂ, ದೇವದತ್ತ ಪಡಿಕ್ಕಲ್‌, ಡೇಗಾ ನಿಶ್ಚಲ್‌, ಆರ್‌.ಸಮರ್ಥ್‌, ಮಯಂಕ್‌ ಅಗರವಾಲ್‌, ಪ್ರವೀಣ್‌ ದುಬೆ, ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಜೆ.ಸುಚಿತ್‌, ಬಿ.ಆರ್‌.ಶರತ್‌ ಮತ್ತು ಶರತ್‌ ಶ್ರೀನಿವಾಸ್‌ (ಇಬ್ಬರೂ ವಿಕೆಟ್‌ ಕೀಪರ್‌), ಪ್ರತೀಕ್ ಜೈನ್‌, ಕೆ.ಎಸ್‌.ದೇವಯ್ಯ, ವಿ.ಕೌಶಿಕ್‌ ಮತ್ತು ಅಭಿಮನ್ಯು ಮಿಥುನ್‌. ಕೋಚ್‌: ಯರೇ ಕೆ.ಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌
ಫೀಲ್ಡಿಂಗ್‌ ಕೋಚ್‌: ಶಬರೀಶ್‌ ಪಿ.ಮೋಹನ್‌.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು