ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಂಟಿ ಕ್ರಿಕೆಟ್‌: ಕರುಣ್‌ ನಾಯರ್‌ ಶತಕ

Published 20 ಸೆಪ್ಟೆಂಬರ್ 2023, 16:30 IST
Last Updated 20 ಸೆಪ್ಟೆಂಬರ್ 2023, 16:30 IST
ಅಕ್ಷರ ಗಾತ್ರ

ಲಂಡನ್‌: ಕರ್ನಾಟಕದ ಬ್ಯಾಟರ್‌ ಕರುಣ್‌ ನಾಯರ್‌, ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಷಿಪ್‌ನ ಮೊದಲ ಡಿವಿಷನ್‌ ಪಂದ್ಯದಲ್ಲಿ ಶತಕ ಗಳಿಸಿ ಗಮನ ಸೆಳೆದರು.

ನಾರ್ಥಾಂಪ್ಟನ್ ಶೈರ್ ತಂಡದ ಪರ ಆಡುತ್ತಿರುವ ಅವರು ಸರೆ ಎದುರಿನ ಪಂದ್ಯದಲ್ಲಿ 144 ರನ್‌ ಗಳಿಸಿದರು. 51 ರನ್‌ಗಳಿಂದ ಬುಧವಾರ ಆಟ ಮುಂದುವರಿಸಿದ ಅವರು ಮೂರಂಕಿಯ ಗಡಿ ದಾಟಿದರು. ಮಳೆಯಿಂದಾಗಿ ದಿನದಾಟ ಬೇಗನೇ ನಿಂತಾಗ ನಾರ್ಥಾಂಪ್ಟನ್ ಶೈರ್ 9 ವಿಕೆಟ್‌ಗಳಿಗೆ 351 ರನ್‌ ಗಳಿಸಿತ್ತು.

238 ಎಸೆತಗಳನ್ನು ಎದುರಿಸಿದ ಕರುಣ್, 22 ಬೌಂಡರಿ ಹಾಗೂ 2 ಸಿಕ್ಸರ್‌ ಹೊಡೆದರು. ನಾರ್ಥಾಂಪ್ಟನ್ ಶೈರ್ ತಂಡ 193 ರನ್‌ ಗಳಿಸುವಷ್ಟರಲ್ಲಿ ಏಳು ವಿಕೆಟ್‌ ಕಳೆದುಕೊಂಡು ಕುಸಿತದ ಹಾದಿ ಹಿಡಿದಿತ್ತು. ಕರುಣ್‌ ಮತ್ತು ಟಾಮ್‌ ಟೇಲರ್‌ 8ನೇ ವಿಕೆಟ್‌ಗೆ 114 ರನ್‌ ಸೇರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

31 ವರ್ಷದ ಕರುಣ್‌ ಅವರು ಕಳೆದ ವಾರ ನಡೆದಿದ್ದ ವಾರ್ವಿಕ್‌ಶೈರ್‌ ವಿರುದ್ಧದ ಪಂದ್ಯದಲ್ಲಿ 78 ರನ್‌ ಗಳಿಸಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT