ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ: ಕರುಣಾರತ್ನೆ ಶತಕ, ಶ್ರೀಲಂಕಾಕ್ಕೆ ಜಯ

ಆತಿಥೇಯರಿಗೆ 1–0 ಮುನ್ನಡೆ
Last Updated 18 ಆಗಸ್ಟ್ 2019, 11:17 IST
ಅಕ್ಷರ ಗಾತ್ರ

ಗಾಲ್: ನಾಯಕ ದಿಮುತ ಕರುಣಾರತ್ನೆ ಅಮೋಘ ಶತಕದ ಬಲದಿಂದ ಶ್ರೀಲಂಕಾ ತಂಡವು ಭಾನುವಾರ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 6 ವಿಕೆಟ್‌ಗಳಿಂದ ಜಯಿಸಿತು. ಎರಡು ಟೆಸ್ಟ್‌ಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

268 ರನ್‌ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಕರುಣಾರತ್ನೆ ಶತಕ (122; 243ಎಸೆತ, 6ಬೌಂಡರಿ, 1ಸಿಕ್ಸರ್) ಮತ್ತು ಲಾಹಿರು ತಿರಿಮಾನ್ನೆ (64; 163ಎಸೆತ, 4ಬೌಂಡರಿ) ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಸೇರಿಸಿದ 161 ರನ್‌ಗಳ ಬಲದಿಂದ 86.1ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 268 ರನ್ ಗಳಿಸಿತು. ‌ಅನುಭವಿ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್‌, ಟಿಮ್ ಸೌಥಿ ಅವರ ದಾಳಿಯನ್ನು ಎದುರಿಸಿ ನಿಂತ ಆರಂಭಿಕ ಜೋಡಿಯು ಎಚ್ಚರಿಕೆಯಿಂದ ಆಡಿತು. ರನ್‌ ಗಳಿಸಲು ಹೆಚ್ಚು ಧಾವಂತ ತೋರಲಿಲ್ಲ. ಉತ್ತಮ ಎಸೆತಗಳನ್ನು ಗೌರವಿಸಿದರು. ಅವಕಾಶ ಸಿಕ್ಕಾಗ ಆಕರ್ಷಕ ಹೊಡೆತಗಳನ್ನು ಪ್ರಯೋಗಿಸಿ ರನ್‌ ಗಳಿಸಿದರು. 61ನೇ ಓವರ್‌ನಲ್ಲಿ ವಿಲಿಯಂ ಸೋಮರ್‌ವಿಲ್ ಎಸೆತದಲ್ಲಿ ಲಾಹಿರು ತಿರಿಮಾನ್ನೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದಾಗಿ ಜೊತೆಯಾಟ ಮುರಿಯಿತು. ಆದರೆ ದಿಮುತ ಅವರ ಆಟ ಮುಂದುವರಿಯಿತು. ನಾಯಕನಿಗೆ ತಕ್ಕ ಆಟವಾಡಿದರು. 216 ಎಸೆತಗಳಲ್ಲಿ ಅವರು 100 ರನ್‌ ಗಳಿಸಿದರು. ಅದರಲ್ಲಿ ಒಂದು ಸಿಕ್ಸರ್‌ ಮತ್ತು ಐದು ಬೌಂಡರಿಗಳು ಇದ್ದವು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದು ಅವರ ಒಂಬತ್ತನೇ ಶತಕ.

ಲಾಹಿರು ಔಟಾದ ನಂತರ ಕುಶಾಲ ಮೆಂಡಿಸ್ (10 ರನ್) ಬೇಗನೆ ಔಟಾದರು. ಆದರೆ ಏಂಜೆಲೊ ಮ್ಯಾಥ್ಯೂಸ್ ತಾಳ್ಮೆಯ ಆಟವಾಡಿದರು. ಈ ಮಧ್ಯೆ ಟಿಮ್ ಸೌಥಿ ಅವರು ದಿಮುತ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಮ್ಯಾಥ್ಯೂಸ್ ಮತ್ತು ಧನಂಜಯ್ ಡಿಸಿಲ್ವಾ ಅವರು ತಂಡವನ್ನು ಜಯದ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 249 ಮತ್ತು 106 ಓವರ್‌ಗಳಿಗೆ 285; ಶ್ರೀಲಂಕಾ: 267 ಮತ್ತು 86.1 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 268 (ದಿಮುತ ಕರುಣಾರತ್ನೆ 122, ಲಾಹಿರು ತಿರಿಮಾನ್ನೆ 64, ಕುಶಾಲ ಮೆಂಡಿಸ್ 10, ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 28, ಕುಶಾಲ ಪೆರೆರಾ 23, ಧನಂಜಯ ಡಿಸಿಲ್ವಾ ಔಟಾಗದೆ 14, ಟ್ರೆಂಟ್ ಬೌಲ್ಟ್ 34ಕ್ಕೆ1, ಟಿಮ್ ಸೌಥಿ 33ಕ್ಕೆ1, ವಿಲಿಯಂ ಸೊಮರ್‌ವಿಲ್ 73ಕ್ಕೆ1, ಎಜಾಜ್ ಪಟೇಲ್ 74ಕ್ಕೆ1)

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT