ಬುಧವಾರ, ಜನವರಿ 22, 2020
28 °C

ಕಿಂಗ್ಸ್‌ ಇಲೆವನ್‌ಗೆ ರಾಹುಲ್‌ ನಾಯಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದ ಕೆ.ಎಲ್‌.ರಾಹುಲ್‌ ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿಯಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಕಿಂಗ್ಸ್‌ ಇಲೆವನ್‌ ಫ್ರಾಂಚೈಸ್‌, ಗುರುವಾರ ರಾಹುಲ್‌ ಅವರನ್ನು ನಾಯಕನನ್ನಾಗಿ ನೇಮಿಸಿದೆ.

‘ರಾಹುಲ್‌ ಅವರು 2018ರಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದರು. ಈ ಬಾರಿ ಅಮೋಘ ಆಟದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅವರು ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ನಮ್ಮ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ಕಿಂಗ್ಸ್‌ ಇಲೆವನ್‌ ಸಹ ಮಾಲೀಕ ನೆಸ್‌ ವಾಡಿಯಾ ತಿಳಿಸಿದ್ದಾರೆ.

ಹೋದ ಆವೃತ್ತಿಯ ಹರಾಜಿನಲ್ಲಿ ರಾಹುಲ್‌ ಅವರನ್ನು ಪಂಜಾಬ್‌ ತಂಡ ₹11 ಕೋಟಿ ನೀಡಿ ತನ್ನತ್ತ ಸೆಳೆದುಕೊಂಡಿತ್ತು.

27 ವರ್ಷ ವಯಸ್ಸಿನ ರಾಹುಲ್‌, ಬುಧವಾರ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು