ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೂಷಾ ಆಲ್‌ರೌಂಡ್ ಆಟ: ಕಿಣಿಗೆ ಜಯ

ಫಾಲ್ಕನ್ ಕ್ಲಬ್‌ ಸುವರ್ಣಮಹೋತ್ಸವ: ಟಿ20 ಕ್ರಿಕೆಟ್‌ ಟೂರ್ನಿ
Last Updated 6 ಜನವರಿ 2021, 14:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತ್ಯೂಷಾ ಸಿ.(ಔಟಾಗದೆ 33, 26ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಕಿಣಿ ಆರ್‌.ಆರ್‌.ಸ್ಪೋರ್ಟ್ಸ್ ತಂಡವು ಬುಧವಾರ ಅಮೇಯ ತಂಡವನ್ನು ಸೋಲಿಸಿತು. ಫಾಲ್ಕನ್ ಕ್ರಿಕೆಟ್ ಕ್ಲಬ್‌ ಸುವರ್ಣಮಹೋತ್ಸವ ಅಂಗವಾಗಿ ನಡೆಯುತ್ತಿರುವ ಮಹಿಳಾ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಕಿಣಿ ತಂಡಕ್ಕೆ 22 ರನ್‌ಗಳ ಜಯ ಒಲಿಯಿತು.

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಣಿ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 140 ರನ್ ಕಲೆಹಾಕಿತು. ವನಿತಾ. ವಿ.ಆರ್‌. (36) ಹಾಗೂ ಪ್ರತ್ಯೂಷಾ ಹೊರತುಪಡಿಸಿ ಅರುಂಧತಿ ರೆಡ್ಡಿ (24) ತಂಡಕ್ಕೆ ಕಾಣಿಕೆ ನೀಡಿದರು. ಸವಾಲಿನ ಗುರಿ ಬೆನ್ನತ್ತಿದ ಅಮೇಯ 7 ವಿಕೆಟ್‌ಗೆ 118 ರನ್ ಮಾತ್ರ ಗಳಿಸಿತು. ತಿರುಶ್ ಕಾಮಿನಿ (37) ಹೋರಾಟ ವ್ಯರ್ಥವಾಯಿತು. ರಾಧಾ ಯಾದವ್‌ (9ಕ್ಕೆ 3) ಹಾಗೂ ಪ್ರತ್ಯೂಷಾ ಸಿ. ಬೌಲಿಂಗ್‌ನಲ್ಲಿ ಮಿಂಚಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಮಳೆಯಿಂದಾಗಿ ಒಂದು ಇನಿಂಗ್ಸ್ ಆಡಿಸಲು ಸಾಧ್ಯವಾಯಿತು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆರಾನ್ಸ್ 19.2 ಓವರ್‌ಗಳಲ್ಲಿ 102 ರನ್‌ ಗಳಿಸಿ ಆಲೌಟ್‌ ಆಯಿತು. ಎದುರಾಳಿ ಶೀನ್ ಸ್ಪೋರ್ಟ್ಸ್ ತಂಡದ ಬ್ಯಾಟಿಂಗ್ ನಡೆಯಲಿಲ್ಲ.

ಸಂಕ್ಷಿಪ್ತ ಸ್ಕೋರುಗಳು: ಕಿಣಿ ಆರ್‌.ಆರ್‌. ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 (ವನಿತಾ ವಿ.ಆರ್‌ 36, ಪ್ರತ್ಯೂಷಾ ಸಿ. ಔಟಾಗದೆ 33, ಅರುಂಧತಿ ರೆಡ್ಡಿ 24, ಅನುಜಾ ಪಾಟೀಲ್‌ 39ಕ್ಕೆ 3). ಅಮೇಯ ಸ್ಪೋರ್ಟ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 118 (ತಿರುಶ್ ಕಾಮಿನಿ 37, ನಿಕ್ಕಿ ಪ್ರಸಾದ್‌ 22, ಮೋನಾ ಮೆಶ್ರಾಮ್‌ 23; ರಾಧಾ ಯಾದವ್‌ 9ಕ್ಕೆ 3, ಪ್ರತ್ಯೂಷಾ ಸಿ. 26ಕ್ಕೆ 2). ಫಲಿತಾಂಶ: ಕಿಣಿ ಸ್ಪೋರ್ಟ್ಸ್ ತಂಡಕ್ಕೆ 22 ರನ್‌ಗಳ ಗೆಲುವು. ಪಂದ್ಯಶ್ರೇಷ್ಠ ಆಟಗಾರ್ತಿ: ಪ್ರತ್ಯೂಷಾ ಸಿ.

ಹೆರಾನ್ಸ್ ಸ್ಪೋರ್ಟ್ಸ್: 19.2 ಓವರ್‌ಗಳಲ್ಲಿ 102 (ಅಕ್ಷಯಾ ಎ. 25, ಮಿನ್ನು ಮಣಿ 20; ಇ. ಪದ್ಮಜಾ 10ಕ್ಕೆ 3). ಶೀನ್‌ ಸ್ಪೋರ್ಟ್ಸ್ ವಿರುದ್ಧದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT