ಸೋಮವಾರ, ಜುಲೈ 4, 2022
23 °C
ಪಂಜಾಬ್ ಕಿಂಗ್ಸ್–ಕೋಲ್ಕತ್ತ ನೈಟ್ ರೈಡರ್ಸ್ ಮುಖಾಮುಖಿ ಇಂದು

IPL 2022| ಜಯಿಸುವ ಛಲದಲ್ಲಿ ಮಯಂಕ್–ಶ್ರೇಯಸ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕನ್ನಡಿಗ ಮಯಂಕ್ ಅಗರವಾಲ್ ಈಗ ಭರ್ತಿ ಆತ್ಮವಿಶ್ವಾಸದಲ್ಲಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಅವರ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಗೆಲುವಿನ ಆರಂಭ ಮಾಡಿರುವುದು ಅದಕ್ಕೆ ಕಾರಣವಾಗಿದೆ. 

ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ದ ಎದರೂ ಜಯ ಸಾಧಿಸುವ ಹುಮ್ಮಸ್ಸಿನಲ್ಲಿ ಮಯಂಕ್ ಬಳಗವಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದ ಬಳಗವು  ಮೊದಲ ಪಂದ್ಯದಲ್ಲಿ ‘ಹಾಲಿ ಚಾಂಪಿಯನ್’ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆದ್ದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಫಫ್ ಡುಪ್ಲೆಸಿ ನಾಯಕತ್ವದ ಆರ್‌ಸಿಬಿ ಮುಂದೆ ಸೋತಿತ್ತು. ಅದರಿಂದಾಗಿ ಮತ್ತೆ ಗೆಲುವಿನ ಲಯ ಕಂಡುಕೊಳ್ಳುವ ಛಲದಲ್ಲಿದೆ. 

ಬೆಂಗಳೂರು ಎದುರಿನ ಪಂದ್ಯದಲ್ಲಿ ಕೋಲ್ಕತ್ತ ತಂಡವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು. ಆದರೆ, ಬೌಲಿಂಗ್‌ನಲ್ಲಿ ಯಥಾಪ್ರಕಾರ ಉತ್ತಮ ಸಾಧನೆ ತೋರಿತ್ತು. ಅದರಲ್ಲಿಯೂ ಉಮೇಶ್ ಯಾದವ್ ತಮ್ಮ ಉತ್ತಮ ಲಯವನ್ನು ಮುಂದುವರಿಸಿದ್ದರು. ಅದರಿಂದಾಗಿ ಆರ್‌ಸಿಬಿಯು ಬಹಳ ಕಷ್ಟಪಟ್ಟು ಜಯ ಸಾಧಿಸಿತ್ತು. ರಹಾನೆ, ಶ್ರೇಯಸ್, ವೆಂಕಟೇಶ್ ಅಯ್ಯರ್ ಮತ್ತು ಆ್ಯಂಡ್ರೆ ರಸೆಲ್ ಬ್ಯಾಟಿಂಗ್‌ನಲ್ಲಿ ತಮ್ಮ ಲಯಕ್ಕೆ ಮರಳಿದರೆ, ಮಯಂಕ್ ಬಳಗದ ಬೌಲಿಂಗ್‌ ಪಡೆಗೆ ಕಠಿಣ ಸವಾಲು ಎದುರಾಗಲಿದೆ.

ಪಂಜಾಬ್ ತಂಡವು ಮೊದಲ ಪಂದ್ಯದಲ್ಲಿ ತೋರಿದ ಛಲ, ತಂತ್ರಗಾರಿಕೆ ಮತ್ತು ದಿಟ್ಟತನವನ್ನು ಮುಂದುವರಿಸಿದರೆ ಸಾಕು ಗೆಲುವು ಸುಲಭವಾಗಬಹುದು. ಬೆಂಗಳೂರು ಎದುರಿನ ಪಂದ್ಯದಲ್ಲಿ 205 ರನ್‌ಗಳ ದೊಡ್ಡ ಗುರಿಯನ್ನು ಯಶಸ್ವಿಯಾಗಿ ಸಾಧಿಸಿತ್ತು. ಈ ಹಾದಿಯಲ್ಲಿ ಪಂಜಾಬ್ ತಂಡದ ಯಾವುದೇ ಬ್ಯಾಟರ್ ಕೂಡ ಅರ್ಧಶತಕ ಗಳಿಸಿರಲಿಲ್ಲ. ಆದರೂ ಸಂಘಟಿತ ಪ್ರಯತ್ನದಿಂದ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಬೌಲಿಂಗ್‌ ನಲ್ಲಿ ಅನುಭವದ ಕೊರತೆ ಎದ್ದು ಕಂಡಿತ್ತು. ಸಂದೀಪ್ ಶರ್ಮಾ, ರಾಹುಲ್ ಚಾಹರ್ ಮತ್ತು ಆರ್ಷದೀಪ್ ಸಿಂಗ್ ಅವರ ಮೇಲೆ ಮಯಂಕ್ ಹೆಚ್ಚು ಅವಲಂಬಿತವಾಗುವ ಪರಿಸ್ಥಿತಿ ಇದೆ. ಮುಖ್ಯ ಕೋಚ್ ಅನಿಲ್ ಕುಂಬ್ಳೆ ಮತ್ತು ಮಯಂಕ್ ಸೇರಿ ಬೌಲಿಂಗ್ ವಿಭಾಗದಲ್ಲಿ ಮಾಡುವ ಬದಲಾವಣೆಯೂ ಇಲ್ಲಿ ಪ್ರಮುಖವಾಗಲಿದೆ. ಬೌಲಿಂಗ್ ಆಲ್‌ರೌಂಡರ್ ರಿಷಿ ಧವನ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.

ತಂಡಗಳು

ಪಂಜಾಬ್ ಕಿಂಗ್ಸ್: ಮಯಂಕ್ ಅಗರವಾಲ್ (ನಾಯಕ), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಭನುಕಾ ರಾಜಪಕ್ಸ (ವಿಕೆಟ್‌ಕೀಪರ್), ಶಾರೂಕ್ ಖಾನ್, ಒಡೀನ್ ಸ್ಮಿತ್, ರಾಜ್ ಬಾವಾ, ಆರ್ಷದೀಪ್ ಸಿಂಗ್, ಹರಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್, ಪ್ರಭಸಿಮ್ರನ್ ಸಿಂಗ್, ರಿಷಿ ಧವನ್, ಪ್ರೇರಕ್ ಮಂಕಡ್, ವೈಭವ್ ಅರೋರಾ. 

ಕೋಲ್ಕತ್ತ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲಿಂಗ್ಸ್, ಶೇಲ್ಡನ್ ಜಾಕ್ಸನ್ (ವಿಕೆಟ್‌ಕೀಪರ್), ಆ್ಯಂಡ್ರೆ ರಸೆಲ್, ಸುನೀಲ್ ನಾರಾಯಣ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ ಚಕ್ರವರ್ತಿ, ಶಿವಂ ಮಾವಿ, ಮೊಹಮ್ಮದ್ ನಬಿ, ಬಾಬಾ ಇಂದ್ರಜೀತ್.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್‌ ನೆಟ್‌ವರ್ಕ್, ಹಾಟ್‌ಸ್ಟಾರ್ 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು