ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KKR vs DC: ಒಂದೇ ಪಂದ್ಯದಲ್ಲಿ ಎರಡು ದಾಖಲೆ ಬರೆದ ರಿಷಭ್‌ ಪಂತ್

Last Updated 28 ಸೆಪ್ಟೆಂಬರ್ 2021, 12:53 IST
ಅಕ್ಷರ ಗಾತ್ರ

ಶಾರ್ಜಾ:ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧ ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ38 ರನ್‌ಗಳಿಸಿದ ರಿಷಭ್‌ ಪಂತ್‌, ಟಿ20 ಕ್ರಿಕೆಟ್‌ನಲ್ಲಿ ಎರಡು ಪ್ರಮುಖ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಐಪಿಎಲ್‌ನಲ್ಲಿಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎಂಬ ಶ್ರೇಯ ಹಾಗೂ ಟಿ20ಯಲ್ಲಿ ವೇಗವಾಗಿ ಮೂರು ಸಾವಿರ ರನ್‌ ಗಳಿಸಿದ ಭಾರತದ ವಿಕೆಟ್‌ ಕೀಪರ್ ಎಂಬ ದಾಖಲೆ ಪಂತ್‌ ಪಾಲಾಯಿತು.

ಡೆಲ್ಲಿ ಕ್ಯಾಪಿಟಲ್ಸ್‌ ಪರ ಹೆಚ್ಚು ರನ್‌ ಗಳಿಸಿದ ದಾಖಲೆ ಇದುವರೆಗೆಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಅವರಹೆಸರಿನಲ್ಲಿತ್ತು.

ಕ್ಯಾಪಿಟಲ್ಸ್‌ ಪರ 2016ರಲ್ಲಿ ಪದಾರ್ಪಣೆ ಮಾಡಿದಾಗಿನಿಂದ 79 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಂತ್‌2,390 ರನ್‌ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು14 ಅರ್ಧಶತಕಗಳು ಸೇರಿವೆ.ಸೆಹ್ವಾಗ್‌ ಡೆಲ್ಲಿ ಪರ 2382 ರನ್‌ ಗಳಿಸಿದ್ದಾರೆ.‌

ವಿಕೆಟ್‌ಕೀಪರ್‌ ಆಗಿ ಸಾಧನೆ
ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ವೇಗವಾಗಿ ಮೂರು ಸಾವಿರ ರನ್‌ಗಳಿಸಿದ ಭಾರತದ ವಿಕೆಟ್‌ ಕೀಪರ್‌ ಬ್ಯಾಟರ್‌ ಎಂಬ ದಾಖಲೆ ಈ ಪಂದ್ಯದ ಮೂಲಕ ಪಂತ್‌ ಅವರದ್ದಾಯಿತು.

ಪಂತ್‌ ತಮ್ಮ 108ನೇ ಇನಿಂಗ್ಸ್‌ನಲ್ಲಿ ಮೂರು ಸಾವಿರ ರನ್‌ಗಳ ಗಡಿ ದಾಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT