ನವದೆಹಲಿ: ವಿರಾಟ್ ಕೊಹ್ಲಿ ಅವರು ಪ್ರಸ್ತುತ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಅವರು ವಿಶ್ವಶ್ರೇಷ್ಠ ಆಟಗಾರರಾಗಿಯೇ ಮುಂದುವರಿದಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ ಎಂದು ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

ಕಟಕ್ನಲ್ಲಿ ಈಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಕಳೆದ ಕೆಲವು ತಿಂಗಳುಗಳಿಂದ ಅವರು ಎಲ್ಲ ಮಾದರಿಗಳಲ್ಲಿಯೂ ವಿಫಲರಾಗುತ್ತಿದ್ದಾರೆ.

‘ಕೊಹ್ಲಿ ಅವರು ಫಾರ್ಮ್ನಲ್ಲಿ ಇರಲಿ, ಬಿಡಲಿ ಜಗತ್ತಿನ ಶ್ರೇಷ್ಠ ಕ್ರಿಕೆಟಿಗ ಅವರೇ. ಅವರು ಇದುವರೆಗೆ ಎಲ್ಲ ಮಾದರಿಗಳಲ್ಲಿ ಗಳಿಸಿದ ಶತಕಗಳು, ರನ್ಗಳು ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನಾಗಿ ರೂಪಿಸಿವೆ’ ಎಂದು ಗೇಲ್ ಅವರು ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

‘ನಾವು ಕ್ರಿಕೆಟಿಗರೆಲ್ಲರೂ ಇಂತಹ ಕೆಟ್ಟ ಸಮಯವನ್ನು ಎದುರಿಸಿರುತ್ತೇವೆ. ಕೊಹ್ಲಿ ಕೂಡ ಅದೇ ರೀತಿಯ ಸವಾಲನ್ನು ಎದುರಿಸುತ್ತಿದ್ದಾರೆ. ಅವರ ವೃತ್ತಿಜೀವನದ ಅಂತಿಮ ಹಂತದ ವರ್ಷಗಳಿವು. ಇಂತಹ ಸಂದರ್ಭದಲ್ಲಿ ಅವರು ಈ ಸವಾಲು ಎದುರಿಸುತ್ತಿದ್ದಾರೆ. ಅವರು ಎದೆಗುಂದದೇ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ಧರಾಗಬೇಕು ಅಷ್ಟೇ’ ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ.

‘ರೋಹಿತ್ ಶರ್ಮಾ ಅವರು ಊರಿನ ಹೊಸ ರಾಜ. ನನ್ನ ಸಿಕ್ಸರ್ ದಾಖಲೆಯನ್ನು ಮುರಿದಿರುವ ಅವರಿಗೆ ಅಭಿನಂದನೆಗಳು. ಅವರು ಇನ್ನಷ್ಟು, ಮಗದಷ್ಟು ಸಿಕ್ಸರ್ಗಳನ್ನು ಹೊಡೆಯುವುದು ಖಚಿತ’ ಎಂದು ಗೇಲ್ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.