ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಗುರುವಾರ ಚೆನ್ನೈಗೆ ಬಂದಿಳಿದರು. ಅವರು ಏಳು ದಿನಗಳ ಕ್ವಾರಂಟೈನ್ನಲ್ಲಿ ಇರಲಿದ್ದಾರೆ.

ಈ ವಿಷಯವನ್ನು ತಂಡದ ಟ್ವೀಟ್ನಲ್ಲಿ ಪ್ರಕಟಿಸಲಾಗಿದೆ. ಮಾಸ್ಕ್ ಧರಿಸಿರುವ ವಿರಾಟ್ ಚಿತ್ರವನ್ನೂ ಲಗತ್ತಿಸಲಾಗಿದೆ.

ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯು ಭಾನುವಾರ ಮುಗಿದಿತ್ತು. ಸೋಮವಾರ ಅವರು ತಮ್ಮ ಮನೆಗೆ ತೆರಳಿದ್ದರು. ಜನವರಿ ಕೊನೆಯ ವಾರದಿಂದ ಅವರು ಬಯೋಬಬಲ್ ವಾತಾವರಣದಲ್ಲಿದ್ದರು. ನಾಲ್ಕು ಟೆಸ್ಟ್, ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಸುದೀರ್ಘ ಅವಧಿಯ ಬಯೋಬಬಲ್ನಿಂದ ಬಿಡುವು ಪಡೆದಿದ್ದರು. ಆದ್ದರಿಂದ ಅವರು ಚೆನ್ನೈನಲ್ಲಿ ತಂಡ ಸೇರುವ ಮುನ್ನ ಪ್ರತ್ಯೇಕವಾಸಕ್ಕೆ ತೆರಳಿದ್ದಾರೆ.

ಎಬಿಡಿ ಆಗಮನ: ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಚೆನ್ನೈಗೆ ಬಂದು ತಂಡ ಸೇರಿಕೊಂಡಿದ್ದಾರೆ.

37 ವರ್ಷದ ಎಬಿಡಿ ಆರ್ಸಿಬಿ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದಾರೆ. ಎಬಿಡಿ 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ.

ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಮತ್ತು ಮಧ್ಯಮವೇಗಿ ನವದೀಪ್ ಸೈನಿ ಅವರು ಕ್ವಾರಂಟೈನ್ನಿಂದ ಹೊರಬಂದು ಅಭ್ಯಾಸ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.