ಸೋಮವಾರ, ಆಗಸ್ಟ್ 3, 2020
24 °C

ಟಾಸ್‌ ಗೆದ್ದ ಡೆಲ್ಲಿ ಬೌಲಿಂಗ್ ಆಯ್ಕೆ: ಕೆಕೆಆರ್‌ಗೆ ಆರಂಭಿಕ ಆಘಾತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಆತಿಥೇಯ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದೆದುರು ಇಲ್ಲಿನ ಈಡನ್ ಗಾರ್ಡನ್ಸ್‌ ಅಂಗಳದಲ್ಲಿ ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್‌ ಆಯ್ದುಕೊಂಡಿದೆ.

ಶುಭಮನ್‌ ಗಿಲ್‌ ಜತೆ ಇನಿಂಗ್ಸ್‌ ಆರಂಭಿಸಿದ ಜೋ ಡೆನ್ಲಿ ಮೊದಲ ಎಸೆತದಲ್ಲೆ ಇಶಾಂತ್‌ ಶರ್ಮಾಗೆ ವಿಕೆಟ್‌ ಒಪ್ಪಿಸಿ ನಿರ್ಗಮಿಸಿದರು.  ದಿನೇಶ್‌ ಕಾರ್ತಿಕ್‌ ಪಡೆ ಸದ್ಯ ಮೂರು ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು 17ರನ್‌ ಗಳಿಸಿದೆ.

ರೈಡರ್ಸ್‌ ಹಾಗೂ ಕ್ಯಾಪಿಟಲ್ಸ್‌ ತಂಡಗಳು ತಲಾ ಆರು ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 4 ಮತ್ತು 3 ಪಂದ್ಯಗಳಲ್ಲಿ ಜಯ ಕಂಡಿವೆ. 

ಉಭಯ ತಂಡಗಳು
ಕೋಲ್ಕತ್ತ ನೈಟ್ ರೈಡರ್ಸ್‌:
 ದಿನೇಶ್ ಕಾರ್ತಿಕ್‌ (ನಾಯಕ), ರಾಬಿನ್ ಉತ್ತಪ್ಪ, ಶುಭಮನ್ ಗಿಲ್‌, ಆ್ಯಂಡ್ರೆ ರಸೆಲ್‌, ಕಾರ್ಲೋಸ್‌ ಬ್ರಾಥ್‌ವೇಟ್‌, ಜೋ ಡೆನ್ಲಿ, ನಿತೀಶ್ ರಾಣಾ, ಪೀಯೂಷ್ ಚಾವ್ಲಾ, ಕುಲದೀಪ್ ಯಾದವ್‌, ಲೋಕಿ ಫರ್ಗುಸನ್‌, ಪ್ರಸಿದ್ಧ ಕೃಷ್ಣ, 

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೇಯಸ್ ಅಯ್ಯರ್‌ (ನಾಯಕ), ಪೃಥ್ವಿ ಶಾ, ಶಿಖರ್‌ ಧವನ್‌, ರಿಷಭ್ ಪಂತ್‌, ಕಾಲಿನ್ ಇಂಗ್ರಾಮ್‌, ಕ್ರಿಸ್ ಮಾರಿಸ್‌, ಅಕ್ಷರ್ ಪಟೇಲ್‌, ರಾಹುಲ್ ತೇವತಿಯಾ, ಕಗಿಸೊ ರಬಾಡ, ಇಶಾಂತ್ ಶರ್ಮಾ, ಕೀಮೋ ಪೌಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು