ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್ ಕ್ರಿಕೆಟ್: ನಿರೀಕ್ಷೆ ಹುಸಿಗೊಳಿಸಿದವರು...

Last Updated 4 ಮೇ 2019, 19:30 IST
ಅಕ್ಷರ ಗಾತ್ರ

ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಆಟಗಾರರ ಹರಾಜಿನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ವೆಸ್ಟ್‌ ಇಂಡೀಸ್‌ನ ಶಿಮ್ರನ್ ಹೆಟ್ಮೆಯರ್‌ ಅವರನ್ನು ₹ 4.2 ಕೋಟಿಗೆ ಖರೀದಿಸಿದಾಗ ಉದ್ಯಾನ ನಗರಿಯ ಅಭಿಮಾನಿಗಳು ಹಿರಿ ಹಿರಿ ಹಿಗ್ಗಿದ್ದರು. ಹೋದ ವರ್ಷದ ಅಕ್ಟೋಬರ್‌ನಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಸ್ಫೋಟಕ ಆಟ ಆಡಿ ಭಾರತದ ಬೌಲರ್‌ಗಳಲ್ಲಿ ನಡುಕ ಹುಟ್ಟಿಸಿದ್ದ ಶಿಮ್ರನ್‌, ಐಪಿಎಲ್‌ನಲ್ಲೂ ಮ್ಯಾಜಿಕ್‌ ಮಾಡುತ್ತಾರೆ ಎಂಬ ನಂಬಿಕೆ ಅವರದ್ದಾಗಿತ್ತು. ಆದರೆ ನಡೆದಿದ್ದೇ ಬೇರೆ.

ನಿರೀಕ್ಷೆಯ ನೊಗ ಹೊತ್ತು ಐಪಿಎಲ್‌ ಅಂಗಳಕ್ಕಿಳಿದಿದ್ದ 22 ವರ್ಷದ ಶಿಮ್ರನ್‌, ಯಾವ ಪವಾಡವನ್ನೂ ಮಾಡಲಿಲ್ಲ. ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ರನ್‌ಔಟ್‌ ಆದ ಅವರು ನಂತರದ ಹಣಾಹಣಿಗಳಲ್ಲಿ ಗಳಿಸಿದ್ದು ಕ್ರಮವಾಗಿ 5, 9, ಮತ್ತು 1 ರನ್‌. ಶಿಮ್ರನ್‌ ಬ್ಯಾಟ್‌ನಿಂದ ರನ್‌ ಸಿಡಿಯುವುದು ಕಷ್ಟ ಎಂಬುದನ್ನು ಅರಿತ ನಾಯಕ ವಿರಾಟ್‌ ಕೊಹ್ಲಿ, ಅನಿವಾರ್ಯವಾಗಿ ಕೆರಿಬಿಯನ್‌ ನಾಡಿನ ಆಟಗಾರನನ್ನು ಆಡುವ ಬಳಗದಿಂದಲೇ ಹೊರಗಿಟ್ಟುಬಿಟ್ಟರು.

ರಾಜಸ್ಥಾನ್‌ ರಾಯಲ್ಸ್‌ ತಂಡದ ಜಯದೇವ್‌ ಉನದ್ಕತ್‌, ಬೆನ್‌ ಸ್ಟೋಕ್ಸ್‌, ಕೋಲ್ಕತ್ತ ನೈಟ್‌ರೈಡರ್ಸ್‌ ತಂಡದಲ್ಲಿರುವ ಕುಲದೀಪ್‌ ಯಾದವ್‌, ಸುನಿಲ್ ನಾರಾಯಣ ಮತ್ತು ರಾಬಿನ್‌ ಉತ್ತಪ್ಪ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಶೇನ್‌ ವಾಟ್ಸನ್‌, ಕೇದಾರ್‌ ಜಾಧವ್‌ ಮತ್ತು ಅಂಬಟಿ ರಾಯುಡು ಅವರೂ ಈ ಸಲ ನಿರೀಕ್ಷೆ ಹುಸಿಗೊಳಿಸಿದವರೇ.

ಸೌರಾಷ್ಟ್ರದ ಬೌಲರ್‌ ಜಯದೇವ್‌ ಅವರನ್ನು ರಾಜಸ್ಥಾನ್‌ ತಂಡ ಈ ಬಾರಿಯ ಹರಾಜಿನಲ್ಲಿ ಬರೋಬ್ಬರಿ ₹ 8.4 ಕೋಟಿ ನೀಡಿ ತನ್ನತ್ತ ಸೆಳೆದುಕೊಂಡಿತ್ತು. ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಅವರಿಗೆ ಹೋದ ಆವೃತ್ತಿಯಲ್ಲಿ ₹12.5 ಕೋಟಿ ನೀಡಿದ್ದ ರಾಜಸ್ಥಾನ್‌ ಫ್ರಾಂಚೈಸ್‌, ಈ ಸಲ ಇಂಗ್ಲೆಂಡ್‌ನ ಆಟಗಾರನನ್ನು ತನ್ನಲ್ಲೇ ಉಳಿಸಿಕೊಂಡಿತ್ತು. ಇವರಿಂದ ತಂಡಕ್ಕೆ ದೊಡ್ಡ ಲಾಭವಾಗುತ್ತದೆ ಎಂದು ಭಾವಿಸಿದ್ದ ಫ್ರಾಂಚೈಸ್‌ ಮತ್ತು ಅಭಿಮಾನಿಗಳಿಗೆ ಭ್ರಮನಿರಸನವಾಗಿದೆ. ಎಡಗೈ ಆಲ್‌ರೌಂಡರ್‌ ಸ್ಟೋಕ್ಸ್‌, ಬ್ಯಾಟಿಂಗ್ ಮಾತ್ರವಲ್ಲ ಬೌಲಿಂಗ್‌ನಲ್ಲೂ ವೈಫಲ್ಯ ಕಂಡಿದ್ದಾರೆ. ಜಯದೇವ್‌ ಕೂಡಾ ಎದುರಾಳಿ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಉರುಳಿಸಲು ಪರದಾಡುತ್ತಿದ್ದಾರೆ.

ವಾಟ್ಸನ್‌ ಮತ್ತು ರಾಯುಡು ಅವರ ಕಥೆಯೂ ಇದಕ್ಕಿಂತ ಭಿನ್ನವಾಗೇನು ಇಲ್ಲ. ಹೋದ ವರ್ಷ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಈ ಜೋಡಿಯ ಪಾತ್ರ ಮಹತ್ವದ್ದೆನಿಸಿತ್ತು. 16 ಪಂದ್ಯಗಳಿಂದ 602ರನ್‌ ಗಳಿಸಿದ್ದ ರಾಯುಡು ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಆದರೆ ಈ ಸಲ ಅವರು ರನ್‌ ಬರ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾದ ವಾಟ್ಸನ್‌ ಕೂಡಾ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಆರಂಭಿಕ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಆಸ್ಟ್ರೇಲಿಯಾದ ಆಟಗಾರ, ಏಪ್ರಿಲ್‌ 23ರಂದು ಚೆಪಾಕ್‌ ಅಂಗಳದಲ್ಲಿ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಪೈಪೋಟಿಯಲ್ಲಿ 96ರನ್‌ ಗಳಿಸಿದ್ದರು. ನಂತರ ಮತ್ತೆ ವೈಫಲ್ಯದ ಹಾದಿ ಹಿಡಿದಿದ್ದಾರೆ.

ಆರ್‌ಸಿಬಿ ತಂಡದಲ್ಲಿರುವ ಉಮೇಶ್‌ ಯಾದವ್‌ ಕೂಡಾ ಹಿಂದಿನ ಆವೃತ್ತಿಯಲ್ಲಿ ಮೋಡಿ ಮಾಡಿದ್ದವರು. 20 ವಿಕೆಟ್‌ಗಳನ್ನು ಕಬಳಿಸಿದ್ದ ಅವರು ಈ ಸಲ ಎದುರಾಳಿ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ದಂಡನೆಗೆ ಒಳಗಾಗಿದ್ದಾರೆ.

ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿರುವ ಸುನಿಲ್‌ ನಾರಾಯಣ್‌ ಅವರ ಆಟವೂ ಈ ಸಲ ನಡೆಯುತ್ತಿಲ್ಲ. 11ನೇ ಆವೃತ್ತಿಯಲ್ಲಿ ಸುನಿಲ್ ಆಲ್‌ರೌಂಡ್‌ ಸಾಮರ್ಥ್ಯ ತೋರಿದ್ದರು. 16 ಪಂದ್ಯಗಳಿಂದ 357ರನ್‌ ಗಳಿಸಿದ್ದ ಅವರು 17 ವಿಕೆಟ್‌ಗಳನ್ನೂ ಉರುಳಿಸಿದ್ದರು. ಕುಲದೀಪ್‌ ಯಾದವ್‌ ಕೂಡಾ ಹಿಂದಿನ ಆವೃತ್ತಿಯಲ್ಲಿ ಜಾದೂ ಮಾಡಿದ್ದವರೇ. ಹೋದ ವರ್ಷ ಅವರು 17 ವಿಕೆಟ್‌ ಪಡೆದಿದ್ದರು. ಈ ಬಾರಿ ಕುಲದೀಪ್‌ ತಂತ್ರಗಳು ಫಲಿಸುತ್ತಿಲ್ಲ. ಉತ್ತಪ್ಪ ಅವರ ಬ್ಯಾಟ್‌ನಿಂದ ರನ್‌ ಮಳೆ ಸುರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೂ ಕಾಡಿದ್ದು ನಿರಾಸೆಯೇ.

*********

ಬ್ಯಾಟ್ಸ್‌ಮನ್‌ಗಳು

ಮಯಂಕ್‌ ಅಗರವಾಲ್‌

ತಂಡ: ಕಿಂಗ್ಸ್‌ ಇಲೆವನ್‌

ಪಂದ್ಯ: 11

ರನ್‌: 289

ಗರಿಷ್ಠ: 58

*********

ಪೃಥ್ವಿ ಶಾ

ತಂಡ: ಡೆಲ್ಲಿ ಕ್ಯಾಪಿಟಲ್ಸ್‌

ಪಂದ್ಯ: 13

ರನ್‌: 284

ಗರಿಷ್ಠ: 99

***

ಶೇನ್‌ ವಾಟ್ಸನ್‌

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 13

ರನ್‌: 251

ಗರಿಷ್ಠ: 96

******

ಕೀರನ್‌ ‍ಪೊಲಾರ್ಡ್‌

ತಂಡ: ಮುಂಬೈ ಇಂಡಿಯನ್ಸ್‌

ಪಂದ್ಯ: 13

ರನ್‌: 240

ಗರಿಷ್ಠ: 83

*******

ದಿನೇಶ್‌ ಕಾರ್ತಿಕ್‌

ತಂಡ: ಕೋಲ್ಕತ್ತ ನೈಟ್‌ ರೈಡರ್ಸ್‌

ಪಂದ್ಯ: 12

ರನ್‌: 229

ಗರಿಷ್ಠ: 97*

******

ರಾಬಿನ್‌ ಉತ್ತಪ್ಪ

ತಂಡ: ಕೋಲ್ಕತ್ತ ನೈಟ್‌ರೈಡರ್ಸ್‌

ಪಂದ್ಯ: 10

ರನ್‌: 220

ಗರಿಷ್ಠ: 67*

****

ಅಂಬಟಿ ರಾಯುಡು

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 13

ರನ್‌: 218

ಗರಿಷ್ಠ: 57

*******

ಕೇದಾರ್‌ ಜಾಧವ್‌

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 13

ರನ್‌: 162

ಗರಿಷ್ಠ: 58

*****

ಕೇನ್‌ ವಿಲಿಯಮ್ಸನ್‌

ತಂಡ: ಸನ್‌ರೈಸರ್ಸ್‌ ಹೈದರಾಬಾದ್‌

ಪಂದ್ಯ: 7

ರನ್‌: 58

ಗರಿಷ್ಠ: 14

********

ಯೂಸುಫ್‌ ಪಠಾಣ್‌

ತಂಡ: ಸನ್‌ರೈಸರ್ಸ್‌ ಹೈದರಾಬಾದ್‌

ಪಂದ್ಯ: 9

ರನ್‌: 37

ಗರಿಷ್ಠ: 16*

*****

ಶಿಮ್ರನ್‌ ಹೆಟ್ಮೆಯರ್‌

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಪಂದ್ಯ: 4

ರನ್‌: 15

ಗರಿಷ್ಠ: 9

*******

ಬೌಲರ್‌ಗಳು

ಜಯದೇವ್‌ ಉನದ್ಕತ್‌

ತಂಡ: ರಾಜಸ್ಥಾನ್‌ ರಾಯಲ್ಸ್‌

ಪಂದ್ಯ: 11

ಓವರ್‌: 37.2‌

ಕೊಟ್ಟ ರನ್‌: 398

ವಿಕೆಟ್‌: 10

*******

ಭುವನೇಶ್ವರ್‌ ಕುಮಾರ್‌

ತಂಡ: ಸನ್‌ರೈಸರ್ಸ್‌ ಹೈದರಾಬಾದ್‌

ಪಂದ್ಯ: 13

ಓವರ್‌: 51

ಕೊಟ್ಟ ರನ್‌: 395

ವಿಕೆಟ್‌: 9

*******

ಉಮೇಶ್‌ ಯಾದವ್‌

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಪಂದ್ಯ: 10

ಓವರ್‌: 33.5

ಕೊಟ್ಟ ರನ್‌: 325

ವಿಕೆಟ್‌: 8

*******

ಶಾರ್ದೂಲ್‌ ಠಾಕೂರ್‌

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 8

ಓವರ್‌: 25

ಕೊಟ್ಟ ರನ್‌: 231

ವಿಕೆಟ್‌: 6

********

ಧವಳ್‌ ಕುಲಕರ್ಣಿ

ತಂಡ: ರಾಜಸ್ಥಾನ್‌ ರಾಯಲ್ಸ್‌

ಪಂದ್ಯ: 10

ಓವರ್‌: 35

ಕೊಟ್ಟ ರನ್‌: 335

ವಿಕೆಟ್‌: 6

***

ಕುಲದೀಪ್ ಯಾದವ್‌

ತಂಡ: ಕೋಲ್ಕತ್ತ ನೈಟ್‌ ರೈಡರ್ಸ್‌

ಪಂದ್ಯ: 9

ಓವರ್‌: 33

ಕೊಟ್ಟ ರನ್‌: 286

ವಿಕೆಟ್‌: 4

***

ಮುಜೀಬ್‌ ಉರ್‌ ರೆಹಮಾನ್‌

ತಂಡ: ಕಿಂಗ್ಸ್‌ ಇಲೆವನ್‌ ಪಂಜಾಬ್‌

ಪಂದ್ಯ: 5

ಓವರ್‌: 19

ಕೊಟ್ಟ ರನ್‌: 191

ವಿಕೆಟ್‌: 3

***

ಟಿಮ್‌ ಸೌಥಿ

ತಂಡ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಪಂದ್ಯ: 3

ಓವರ್‌: 9

ಕೊಟ್ಟ ರನ್‌: 118

ವಿಕೆಟ್‌: 1

********

ಆಲ್‌ರೌಂಡರ್‌ಗಳು

ಬೆನ್‌ ಸ್ಟೋಕ್ಸ್‌

ತಂಡ: ರಾಜಸ್ಥಾನ್‌ ರಾಯಲ್ಸ್‌

ಪಂದ್ಯ: 9

ರನ್‌: 123

ಗರಿಷ್ಠ: 46

ವಿಕೆಟ್‌: 6

*******

ರವೀಂದ್ರ ಜಡೇಜ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 12

ರನ್‌: 101

ಗರಿಷ್ಠ: 31*

ವಿಕೆಟ್‌: 12

*******

ಡ್ವೇನ್‌ ಬ್ರಾವೊ

ತಂಡ: ಚೆನ್ನೈ ಸೂಪರ್‌ ಕಿಂಗ್ಸ್‌

ಪಂದ್ಯ: 8

ರನ್‌: 64

ಗರಿಷ್ಠ: 27

ವಿಕೆಟ್‌: 9

******

ವಿಜಯ್‌ ಶಂಕರ್‌

ತಂಡ: ಸನ್‌ರೈಸರ್ಸ್‌ ಹೈದರಾಬಾದ್‌

ಪಂದ್ಯ: 13

ರನ್‌: 192

ಗರಿಷ್ಠ: 40*

ವಿಕೆಟ್‌: 1

*******

ಕೆ.ಗೌತಮ್‌

ತಂಡ: ರಾಜಸ್ಥಾನ್‌ ರಾಯಲ್ಸ್‌

ಪಂದ್ಯ: 6

ರನ್‌: 12

ಗರಿಷ್ಠ: 9

ವಿಕೆಟ್‌: 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT