ಶನಿವಾರ, ಜೂಲೈ 11, 2020
21 °C

ಅಭ್ಯಾಸ ಆರಂಭಿಸಿದ ಕೃಣಾಲ್‌ ಪಾಂಡ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಡೋದರಾ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಕೃಣಾಲ್‌ ಪಾಂಡ್ಯ ಅವರು ಮೂರು ತಿಂಗಳ ಬಳಿಕ ಮಂಗಳವಾರ ಹೊರಾಂಗಣ ಅಭ್ಯಾಸ ಆರಂಭಿಸಿದರು.

ಬರೋಡಾದ ಕ್ರಿಕೆಟಿಗ, ಹಾರ್ದಿಕ್‌ ಪಾಂಡ್ಯ ಅವರ ಹಿರಿಯ ಸಹೋದರ ಆಗಿರುವ ಕೃಣಾಲ್‌, ಇದುವರೆಗೆ 18 ಟ್ವೆಂಟಿ–20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

‘ಕ್ರೀಡಾಂಗಣದಲ್ಲಿ ರನೌಟ್‌ ಆಗುವುದರೊಂದಿಗೆ ನನ್ನ ದಿನ ಆರಂಭವಾಯಿತು. ಹೊರಾಂಗಣ ಅಭ್ಯಾಸಕ್ಕೆ ಮರಳಿದ್ದು ಖುಷಿ ನೀಡಿದೆ.’ ಎಂದು ಕೃಣಾಲ್‌ ಟ್ವೀಟ್‌ ಮಾಡಿದ್ದಾರೆ. ಇದರೊಂದಿಗೆ ತಾವು ‘ವರ್ಕ್‌ಔಟ್’‌ ಮಾಡುತ್ತಿರುವ ಚಿತ್ರವನ್ನೂ ಪೋಸ್ಟ್‌ ಮಾಡಿದ್ದಾರೆ.

ಎಲ್ಲ ಆಟಗಾರರಂತೆ ಕೃಣಾಲ್‌ ಕೂಡ ಕೋವಿಡ್‌ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್‌ಡೌನ್‌ ಕಾರಣ ಮಾರ್ಚ್‌ 25ರಿಂದ ಮನೆಯಲ್ಲೇ ಬಂದಿಯಾಗಿದ್ದರು.

ಭಾರತ ತಂಡದ ವೇಗಿ ಶಾರ್ದೂಲ್‌ ಅವರು ಹೋದ ತಿಂಗಳು ಮಹಾರಾಷ್ಟ್ರದ ಪಾಲ್ಗರ್‌ ಜಿಲ್ಲೆಯ ಬೊಯಿಸಾರ್‌ನಲ್ಲಿ ಅಭ್ಯಾಸ ಆರಂಭಿಸಿದರು. ‌ಟೆಸ್ಟ್‌ ಬ್ಯಾಟ್ಸ್‌ಮನ್‌ ಚೇತೇಶ್ವರ ಪೂಜಾರ ಕೂಡ ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಬ್ಯಾಟಿಂಗ್‌ ತಾಲೀಮು ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು