ಬೆಂಗಳೂರು: ಧ್ರುವ ಪ್ರಭಾಕರ್ ಶತಕದ ಬಲದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ತಂಡವು ಜೈಪುರದಲ್ಲಿ ನಡೆಯುತ್ತಿರುವ ಬಿಸಿಸಿಐ 23 ವರ್ಷದೊಳಗಿನವರ ‘ಎ’ ಟ್ರೋಫಿ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆಯ ತಂಡದ ಎದುರು ಜಯಿಸಿತು.

ಜೈಪುರದ ಡಾ. ಸೋನಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಕೆಎಸ್ಸಿಎ ತಂಡವು 63 ರನ್ಗಳಿಂದ ಜಯಿಸಿತು. ಧ್ರುವ ಪ್ರಭಾಕರ್ 90 ಎಸೆತಗಳಲ್ಲಿ 104 ರನ್ ಗಳಿಸಿದರು. 6 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಇ.ಜೆ. ಜಾಸ್ಪರ್ (57; 79ಎಸೆತ), ಅನೀಶ್ವರ್ ಗೌತಮ್ (75; 63ಎಸೆತ) ಮತ್ತು ಹರ್ಷಿಲ್ ಧರ್ಮಾನಿ (67; 30ಎಸೆತ) ಅರ್ಧಶತಕ ಗಳಿಸಿದರು. ಇದರಿಂದಾಗಿ ತಂಡವು 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 363 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಹಿಮಾಚಲಪ್ರದೇಶ ತಂಡಕ್ಕೆ 45.3 ಓವರ್ಗಳಲ್ಲಿ 300 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಕರ್ನಾಟಕ ತಂಡದ ಹಾರ್ದಿಕ್ ರಾಜ್ ಮತ್ತು ಎಲ್. ಮನ್ವಂತ್ ಕುಮಾರ್ ತಲಾ 3 ವಿಕೆಟ್ ಗಳಿಸಿದರು. ಬೌಲಿಂಗ್ನಲ್ಲಿಯೂ ಮಿಂಚಿದ ಧ್ರುವ ಪ್ರಭಾಕರ್ 2 ವಿಕಟ್ ಪಡೆದರು.

ಸಂಕ್ಷಿಪ್ತ ಸ್ಕೋರು

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ : 50 ಓವರ್ಗಳಲ್ಲಿ 5 ವಿಕೆಟ್ಗಳಿಗೆ 363 (ಇ.ಜೆ. ಜಾಸ್ಪರ್ 57, ಧ್ರುವ ಪ್ರಭಾಕರ್ 104, ಅನೀಶ್ವರ್ ಗೌತಮ್ 75, ಹರ್ಷಿಲ್ ಧರ್ಮಾನಿ 67, ಯಶೋವರ್ಧನ್ ಪರಂತಾಪ್ ಔಟಾಗದೇ 21, ಮೃದುಲ್ ಪಿ ಸರೋಚ್ 54ಕ್ಕೆ2)

ಹಿಮಾಚಲಪ್ರದೇಶ: 45.3 ಓವರ್ಗಳಲ್ಲಿ 300 (ಅತುಲ್ ಎ ಜೈಸ್ವಾಲ್ 86, ನಮನ್ ವಿ ವರ್ಮಾ 26, ಮೃದುಲ್ ಸರೋಚ್ 50, ಅಮನಪ್ರೀತ್ ಸಿಂಗ್ 70, ವೈಭವ್ ಕಾಲ್ಟಾ 20, ಹಾರ್ದಿಕ್ ರಾಜ್ 35ಕ್ಕೆ3, ಮನ್ವಂತ್ ಕುಮಾರ್ ಎಲ್ 54ಕ್ಕೆ3, ಧ್ರುವ ಪ್ರಭಾಕರ್ 38ಕ್ಕೆ2)

ಫಲಿತಾಂಶ: ಕರ್ನಾಟಕ ತಂಡಕ್ಕೆ 63 ರನ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.