ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಪ್ಟನ್ ತಿಮ್ಮಪ್ಪಯ್ಯ ಕ್ರಿಕೆಟ್ ಟೂರ್ನಿ: ಘೋಷ್ ಉತ್ತಮ ಬೌಲಿಂಗ್‌

ಕರ್ನಾಟಕ ಕಾರ್ಯದರ್ಶಿಗಳಿಗೆ ಹಿನ್ನಡೆ
Published : 20 ಸೆಪ್ಟೆಂಬರ್ 2024, 15:58 IST
Last Updated : 20 ಸೆಪ್ಟೆಂಬರ್ 2024, 15:58 IST
ಫಾಲೋ ಮಾಡಿ
Comments

ಬೆಂಗಳೂರು: ರಾಮಕೃಷ್ಣ ಘೋಷ್ (19ಕ್ಕೆ5) ಮತ್ತು ಹಿತೇಶ್ ವಳುಂಜಾ (51ಕ್ಕೆ4) ಅವರ ಉತ್ತಮ ಬೌಲಿಂಗ್‌ನಿಂದಾಗಿ ಮಹಾರಾಷ್ಟ್ರ ತಂಡವು ಇಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ಎದುರು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿತು. 

ಆಲೂರಿನಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಮಹಾರಾಷ್ಟ್ರ ತಂಡವು 114.5 ಓವರ್‌ಗಳಲ್ಲಿ 421 ರನ್ ಗಳಿಸಿತು. ನಿಖಿಲ್ ನಾಯಕ (107; 151ಎ, 4X10, 6X1) ಶತಕ ದಾಖಲಿಸಿದರು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ  ಕಾರ್ಯದರ್ಶಿ ತಂಡವು 54.2 ಓವರ್‌ಗಳಲ್ಲಿ 161 ರನ್ ಗಳಿಸಿತು. ಮಹಾರಾಷ್ಟ್ರ ತಂಡವು 260 ರನ್‌ಗಳ ಮುನ್ನಡೆ ಸಾಧಿಸಿತು.  ಘೋಷ್ ಮತ್ತು ಹಿತೇಶ್ ಅವರ ಬೌಲಿಂಗ್‌ ಮುಂದೆ ಕರ್ನಾಟಕದ ತಂಡವು ಕುಸಿಯಿತು. ತಂಡದ ಶ್ರೇಯಸ್ ಗೋಪಾಲ್  (110ಕ್ಕೆ3 ಹಾಗೂ 44 ರನ್) ಆಲ್‌ರೌಂಡ್ ಆಟವಾಡಿದರು. 

ಸಂಕ್ಷಿಪ್ತ ಸ್ಕೋರು:  ಆಲೂರು (1): ಮಹಾರಾಷ್ಟ್ರ: 114.5 ಓವರ್‌ಗಳಲ್ಲಿ 421 (ನಿಖಿಲ್ ನಾಯಕ 107, ಸತ್ಯಜೀತ್ ಬಚಾವ್ 37, ರಾಮಕೃಷ್ಣ ಘೋಷ್ 39, ಅಭಿಲಾಷ್ 41ಕ್ಕೆ2, ಶಿಖರ್ ಶೆಟ್ಟಿ 91ಕ್ಕೆ3, ಶ್ರೇಯಸ್ ಗೋಪಾಲ್ 110ಕ್ಕೆ3) ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್: 54.2 ಓವರ್‌ಗಳಲ್ಲಿ 161 (ವಿಶಾಲ್ ಓನತ್ 26, ಯಶೋವರ್ಧನ್ ಪರಂತಾಪ್ 26, ಕೆ.ಎಲ್. ಶ್ರೀಜಿತ್ 36, ಶ್ರೇಯಸ್ ಗೋಪಾಲ್ 44, ರಾಮಕೃಷ್ಣ ಘೋಷ್ 19ಕ್ಕೆ5, ಹಿತೇಶ್ ವಳುಂಜಾ 51ಕ್ಕೆ4). ಎರಡನೇ ಇನಿಂಗ್ಸ್: ಮಹಾರಾಷ್ಟ್ರ: 1 ಓವರ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 4. 

ಚಿನ್ನಸ್ವಾಮಿ ಕ್ರೀಡಾಂಗಣ: ಮಧ್ಯಪ್ರದೇಶ: 118.1 ಓವರ್‌ಗಳಲ್ಲಿ 325. ಬರೋಡಾ:55 ಓವರ್‌ಗಳಲ್ಲಿ 6ಕ್ಕೆ159 (ಜ್ಯೋತ್ಸನಿಲ್ ಸಿಂಗ್ 51, ಕೇದಾರ್ ದೇವಧರ್ 26, ವಿಷ್ಣು ಸೋಳಂಕಿ 31, ಮಿಥೇಶ್ ಪಟೇಲ್ 25, ಕುಲವಂತ್ ಖೆಜ್ರೊಲಿಯಾ 36ಕ್ಕೆ5) 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT