ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌: ವನಿತಾ ದ್ವಿಶತಕದ ಸೊಬಗು

7
ಜವಾನ್ಸ್‌ ಕ್ಲಬ್‌ಗೆ ಪ್ರಶಸ್ತಿ

ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌: ವನಿತಾ ದ್ವಿಶತಕದ ಸೊಬಗು

Published:
Updated:
Prajavani

ಬೆಂಗಳೂರು: ಅನುಭವಿ ಆಟಗಾರ್ತಿ ವಿ.ಆರ್‌.ವನಿತಾ, ಶುಕ್ರವಾರ ಕೆಎಸ್‌ಸಿಎ ಮೈದಾನದಲ್ಲಿ ಹರಿಸಿದ ರನ್‌ ಹೊಳೆಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್‌ ತಂಡದ ಪ್ರಶಸ್ತಿಯ ಕನಸು ಕೊಚ್ಚಿ ಹೋಯಿತು.

ವನಿತಾ ಸಿಡಿಸಿದ ದ್ವಿಶತಕದ ಬಲದಿಂದ ಜವಾನ್ಸ್‌ ಕ್ಲಬ್‌ ತಂಡ ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌ನಲ್ಲಿ ಪ್ರಶಸ್ತಿ ಗೆದ್ದಿತು. ಫೈನಲ್‌ನಲ್ಲಿ 209ರನ್‌ಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್‌ ಮಾಡಿದ ಜವಾನ್ಸ್‌ ಕ್ಲಬ್‌, 28 ಓವರ್‌ಗಳಲ್ಲಿ 6 ವಿಕೆಟ್‌ಗೆ 272ರನ್‌ ದಾಖಲಿಸಿತು.

ಭಾರತ ತಂಡದ ಪರ ಆಡಿದ ಅನುಭವ ಹೊಂದಿರುವ ಬಲಗೈ ಆಟಗಾರ್ತಿ ವನಿತಾ, ರಾಜಾಜಿನಗರ ತಂಡದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು. 93 ಎಸೆತಗಳನ್ನು ಎದುರಿಸಿದ ಅವರು 206ರನ್‌ ಸಿಡಿಸಿ ಅಜೇಯವಾಗುಳಿದರು. ಬೌಂಡರಿ (19X4) ಮತ್ತು ಸಿಕ್ಸರ್‌ಗಳ (12X6) ಮೂಲಕವೇ 148ರನ್‌ ಗಳಿಸಿದ್ದು ಅವರ ಅಬ್ಬರಕ್ಕೆ ಸಾಕ್ಷಿ.

ಗುರಿ ಬೆನ್ನಟ್ಟಿದ ರಾಜಾಜಿನಗರ ತಂಡ ವಿ.ಚಾಂದು (9ಕ್ಕೆ2) ಮತ್ತು ಸಹನಾ ಪವಾರ್‌ (11ಕ್ಕೆ3) ಅವರ ದಾಳಿಗೆ ಬೆದರಿತು. ಈ ತಂಡ 26.3 ಓವರ್‌ಗಳಲ್ಲಿ 63ರನ್‌ಗಳಿಗೆ ಹೋರಾಟ ಮುಗಿಸಿತು. ಕೃಷಿಕಾ (30 ರನ್‌) ಈ ತಂಡದ ಗರಿಷ್ಠ ಸ್ಕೋರರ್‌ ಎನಿಸಿದರು.

ಸಂಕ್ಷಿಪ್ತ ಸ್ಕೋರ್‌: ಜವಾನ್ಸ್‌ ಕ್ಲಬ್‌: 28 ಓವರ್‌ಗಳಲ್ಲಿ 6 ವಿಕೆಟ್‌ಗೆ 272 (ಸಿಮ್ರನ್‌ ಹೆನ್ರಿ 23, ವಿ.ಆರ್‌.ವನಿತಾ ಔಟಾಗದೆ 206; ಶ್ರೇಯಾಂಕ ಪಾಟೀಲ 46ಕ್ಕೆ2, ಎಂ.ಸೌಮ್ಯಾ 79ಕ್ಕೆ2).

ರಾಜಾಜಿನಗರ ಕ್ರಿಕೆಟರ್ಸ್‌: 26.3 ಓವರ್‌ಗಳಲ್ಲಿ 63 (ಕೃಷಿಕಾ 30; ಎಂ.ವಂದನಾ 20ಕ್ಕೆ2, ವಿ.ಚಾಂದು 9ಕ್ಕೆ2, ಸಹನಾ ಪವಾರ್‌ 11ಕ್ಕೆ3). ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 209ರನ್‌ ಗೆಲುವು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !