ಕೊಲಂಬೊ: ಕಾರು ಹರಿಸಿ ವ್ಯಕ್ತಿಯೊಬ್ಬನ ಮೃತ್ಯುವಿಗೆ ಕಾರಣವಾದ ಆರೋಪದ ಮೇಲೆ ಶ್ರೀಲಂಕಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್–ಬ್ಯಾಟ್ಸ್‌ಮನ್ ಕುಶಲ್ ಮೆಂಡಿಸ್ ಅವರನ್ನು ಬಂಧಿಸಲಾಗಿದೆ.

ಕೊಲಂಬೊದ ಹೊರವಲಯ ಪನಡುರಾ ಎಂಬಲ್ಲಿ ಭಾನುವಾರ ನಸುಕಿನ ಜಾವ ಈ ಘಟನೆ ಸಂಭವಿಸಿದ್ದು, ಸೈಕಲ್ ಮೇಲೆ ತೆರಳುತ್ತಿದ್ದ 64 ವರ್ಷದ ವ್ಯಕ್ತಿ ಮೃತಪಟ್ಟವರು.

‘ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮೆಂಡಿಸ್ ಅವರ ಎಸ್‌ಯುವಿ ವಶಕ್ಕೆ ಪಡೆದಿರುವ ಪೊಲೀಸರು, ವಾಹನವನ್ನು ಮೆಂಡಿಸ್ ಅವರೇ ಚಲಾಯಿಸುತ್ತಿದ್ದರೇ ಎಂಬುದನ್ನು ತನಿಖೆ ಮಾಡಲಿದ್ದಾರೆ.

‘ಮೆಂಡಿಸ್ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

25 ವರ್ಷದ ಮೆಂಡಿಸ್ ಅವರು ಲಂಕಾ ಪರ 44 ಟೆಸ್ಟ್ ಹಾಗೂ 76 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಸದ್ಯ ಶ್ರೀಲಂಕಾದಲ್ಲಿ ತೆರವಾಗಿದ್ದು, ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಈ ಆಟಗಾರರಲ್ಲಿ ಮೆಂಡಿಸ್ ಕೂಡ ಇದ್ದರು.

ಶ್ರೀಲಂಕಾ ತಂಡ ಕೈಗೊಳ್ಳಬೇಕಿದ್ದ ಭಾರತ ಪ್ರವಾಸ ಸೇರಿದಂತೆ ಕೆಲವು ಸರಣಿಗಳು ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾರಣ ರದ್ದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.