ಸೋಮವಾರ, ಜನವರಿ 27, 2020
15 °C

‘ಧೋನಿ ಏಕದಿನ ಕ್ರಿಕೆಟ್‌ ಜೀವನ ಅಂತ್ಯ’

ಪಿಟಿಐ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್ ಧೋನಿ ಅವರ ಏಕ ದಿನ ಕ್ರಿಕೆಟ್ ಜೀವನವೂ  ‘ಶೀಘ್ರವೇ ಅಂತ್ಯಗೊಳ್ಳಲಿದೆ’ ಎಂದು ಭಾರತ ತಂಡದ ಮುಖ್ಯ ಕೋಚ್‌ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

ಸಿಎನ್‌ಎನ್‌ ನ್ಯೂಸ್‌ 18 ಜೊತೆ ಮಾತನಾಡಿದ ಶಾಸ್ತ್ರಿ, ‘ನಾನು ಧೋನಿ ಜೊತೆ ಚರ್ಚಿಸಿದ್ದೇನೆ. ಅವರ ಟೆಸ್ಟ್‌ ಬಾಳ್ವೆ ಕೊನೆಗೊಂಡಿದೆ. ಅವರು ಏಕ ದಿನ ಕ್ರಿಕೆಟ್‌ ಜೀವನವನ್ನೂ ಶೀಘ್ರದಲ್ಲೇ ಕೊನೆಗೊಳಿಸಬಹುದು’ ಎಂದು ಶಾಸ್ತ್ರಿ ಹೇಳಿದರು.

‘ಅವರು ದೀರ್ಘ ಸಮಯದಿಂದ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ನಿರಂತರ ವಾಗಿ ಆಡುತ್ತಾ ಬಂದಿದ್ದಾರೆ. ಇದನ್ನು ಜನರು  ಗೌರವಿಸಬೇಕು’ ಎಂದರು.

‘ಈ ವಯಸ್ಸಿನಲ್ಲಿ ಅವರು ಆಡ ಬಯಸುವ ಒಂದೇ ಮಾದರಿಯೆಂದರೆ ಅದು ಟಿ–20 ಮಾತ್ರ. ಇದಕ್ಕಾಗಿ ಅವರು ದೀರ್ಘ ಅವಧಿಯ ಮತ್ತೆ ಆಡಬೇಕಿದೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಆಡುವುದರಿಂದ, ದೇಹ ಹೇಗೆ ಸ್ಪಂದಿಸಬಹುದು ಎಂಬುದನ್ನು ಕಂಡುಕೊಳ್ಳಲು ಅವರು ಬಯಸಬಹುದು’ ಎಂದರು.

‘ಐಪಿಎಲ್‌ನಲ್ಲಿ ಚೆನ್ನಾಗಿ ಆಡಿದರೆ ಟಿ–20 ವಿಶ್ವಕಪ್‌ ತಂಡಕ್ಕೆ ಧೋನಿ ಈಗಲೂ ಆಕಾಂಕ್ಷಿ ಆಗಬಲ್ಲರು’ ಎಂದು ಶಾಸ್ತ್ರಿ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು