ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ | ಮಿಂಚಿದ ಶ್ರೇಯಸ್‌, ಶರತ್‌; ಶಿವಮೊಗ್ಗ ಲಯನ್ಸ್‌ಗೆ 3ನೇ ಗೆಲುವು

Published 17 ಆಗಸ್ಟ್ 2023, 20:30 IST
Last Updated 17 ಆಗಸ್ಟ್ 2023, 20:30 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೇಯಸ್‌ ಗೋಪಾಲ್ ಅವರ ಅರ್ಧಶತಕ ಮತ್ತು ಎಚ್‌.ಎಸ್‌.ಶರತ್‌ ಕೊನೆಯಲ್ಲಿ ತೋರಿದ ಬಿರುಸಿನ ಆಟದ ಬಲದಿಂದ ಶಿವಮೊಗ್ಗ ಲಯನ್ಸ್‌ ತಂಡ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ದಿನದ ಮೊದಲ ಪಂದ್ಯದಲ್ಲಿ ಲಯನ್ಸ್‌ ತಂಡ ಮೂರು ವಿಕೆಟ್‌ಗಳಿಂದ ಗುಲ್ಬರ್ಗ ಮಿಸ್ಟಿಕ್ಸ್ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ಗುಲ್ಬರ್ಗ, ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 175 ರನ್‌ ಪೇರಿಸಿತು. ಆದರ್ಶ್‌ ಪ್ರಜ್ವಲ್‌ (43) ಮತ್ತು ಆರ್‌.ಸ್ಮರಣ್‌ (40) ಅವರು ಸವಾಲಿನ ಮೊತ್ತಕ್ಕೆ ಕಾರಣರಾದರು. ಲಯನ್ಸ್‌ ತಂಡದ ಕ್ರಾಂತಿಕುಮಾರ್‌ (17ಕ್ಕೆ 3) ಪರಿಣಾಮಕಾರಿ ದಾಳಿ ನಡೆಸಿದರು.

ಶಿವಮೊಗ್ಗ ತಂಡ 19.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179 ರನ್‌ ಗಳಿಸಿ ಗೆದ್ದಿತು. ಅಭಿಲಾಷ್‌ ಶೆಟ್ಟಿ ಮತ್ತು ವೈಶಾಖ್‌ ವಿಜಯಕುಮಾರ್‌ ಅವರ ದಾಳಿಗೆ ಆರಂಭಿಕ ಆಘಾತ ಅನುಭವಿಸಿದ್ದ ಶಿವಮೊಗ್ಗ ತಂಡ 39 ರನ್‌ಗಳಿಗೆ ಐದು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು.

ಆದರೆ ನಾಯಕ ಶ್ರೇಯಸ್‌ (52 ರನ್‌; 37 ಎ., 4X4, 6X2) ಮತ್ತು ಆಭಿನವ್‌ ಮನೋಹರ್‌ (28) ಆರನೇ ವಿಕೆಟ್‌ಗೆ 71 ರನ್‌ ಸೇರಿಸಿ ಗೆಲುವಿನ ಕನಸನ್ನು ಜೀವಂತವಾಗಿರಿಸಿಕೊಂಡರು. ಇವರಿಬ್ಬರು ಔಟಾದರೂ, ಎಸ್‌.ಶಿವರಾಜ್ (ಔಟಾಗದೆ 27, 17 ಎ., 4X3, 6X1) ಮತ್ತು ಶರತ್‌ (ಔಟಾಗದೆ 31, 11 ಎ., 4X2, 6X3) ಮುರಿಯದ ಎಂಟನೇ ವಿಕೆಟ್‌ಗೆ 39 ರನ್‌ ಸೇರಿಸಿ ರೋಚಕ ಗೆಲುವಿಗೆ ಕಾರಣರಾದರು. ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್‌ ಗಳಿಸಿರುವ ಲಯನ್ಸ್‌, ಎರಡನೇ ಸ್ಥಾನದಲ್ಲಿದೆ.

ಸಂಕ್ಷಿಪ್ತ ಸ್ಕೋರ್‌: ಗುಲ್ಬರ್ಗ ಮಿಸ್ಟಿಕ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 175 (ಆದರ್ಶ್‌ ಪ್ರಜ್ವಲ್‌ 43, ಆರ್‌.ಸ್ಮರಣ್‌ 40, ಎಸ್‌.ಶರತ್‌ ಔಟಾಗದೆ 22, ಕ್ರಾಂತಿ ಕುಮಾರ್‌ 17ಕ್ಕೆ 3) ಶಿವಮೊಗ್ಗ ಲಯನ್ಸ್ 19.5 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 179 (ಶ್ರೇಯಸ್‌ ಗೋಪಾಲ್‌ 52, ಅಭಿನವ್‌ ಮನೋಹರ್‌ 28, ಎಸ್‌.ಶಿವರಾಜ್‌ ಔಟಾಗದೆ 27, ಎಚ್‌.ಎಸ್‌.ಶರತ್‌ ಔಟಾಗದೆ 31, ಅಭಿಲಾಷ್‌ ಶೆಟ್ಟಿ 45ಕ್ಕೆ 2, ವೈಶಾಖ್‌ ವಿಜಯಕುಮಾರ್‌ 25ಕ್ಕೆ 2) ಫಲಿತಾಂಶ: ಶಿವಮೊಗ್ಗ ಲಯನ್ಸ್‌ಗೆ 3 ವಿಕೆಟ್‌ ಗೆಲುವು

ಹುಬ್ಬಳ್ಳಿ ಟೈಗರ್ಸ್

20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 215 (ಮೊಹಮ್ಮದ್ ತಾಹಾ 52, ಕೆ.ಶ್ರೀಜಿತ್‌ 52, ಮನೀ‌ಷ್‌ ಪಾಂಡೆ ಔಟಾಗದೆ 69, ಪ್ರವೀಣ್‌ ದುಬೆ ಔಟಾಗದೆ 18, ಕೆ.ಗೌತಮ್‌ 36ಕ್ಕೆ 1, ಪಾರಸ್‌ ಆರ್ಯ 27ಕ್ಕೆ 1)

ಮಂಗಳೂರು ಡ್ರಾಗನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 152 (ಬಿ.ಆರ್‌.ಶರತ್‌ 38, ಕೆ.ಸಿದ್ದಾರ್ಥ್ ಔಟಾಗದೆ 48, ನೇಥನ್‌ ಡಿ‘ಮೆಲೊ 23ಕ್ಕೆ 3, ಪ್ರವೀಣ್‌ ದುಬೆ 13ಕ್ಕೆ 2)

ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 63 ರನ್‌ ಗೆಲುವು

ಇಂದಿನ ಪಂದ್ಯಗಳು

ಶಿವಮೊಗ್ಗ ಲಯನ್ಸ್– ಮೈಸೂರು ವಾರಿಯರ್ಸ್ (ಮಧ್ಯಾಹ್ನ 1 ರಿಂದ)

ಮಂಗಳೂರು ಡ್ರಾಗನ್ಸ್– ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30 ರಿಂದ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ, ಫ್ಯಾನ್‌ಕೋಡ್‌ ಆ್ಯಪ್

ಹುಬ್ಬಳ್ಳಿ ಗೆಲುವಿನ ಓಟ

ದಿನದ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ 63 ರನ್‌ಗಳಿಂದ ಮಂಗಳೂರು ಡ್ರಾಗನ್ಸ್‌ ತಂಡವನ್ನು ಪರಾಭವಗೊಳಿಸಿತು. ಸತತ ನಾಲ್ಕನೇ ಗೆಲುವು ಪಡೆದ ಮನೀಷ್‌ ಪಾಂಡೆ ಬಳಗ ಎಂಟು ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು. ಅರ್ಧಶತಕ ಗಳಿಸಿದ ಮೊಹಮ್ಮದ್‌ ತಾಹಾ (52 ರನ್‌ 28 ಎ. 4X4 6X4) ಕೆ.ಶ್ರೀಜಿತ್‌ (52 ರನ್ 29 ಎ. 4X3 6X3) ಮತ್ತು ಪಾಂಡೆ (ಔಟಾಗದೆ 69 34 ಎ. 4X5 6X4) ಅವರು ಹುಬ್ಬಳ್ಳಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT