ಬೆಂಗಳೂರು: ಮುರ್ತಾಜಾ ಟ್ರಂಕ್ವಾಲ (114;171ಎ, 413, 6x3)) ಮತ್ತು ಸಿದ್ಧೇಶ್ ವೀರ್ (146;221ಎ, 4x12, 6x1)) ಅವರ ಅಮೋಘ ಶತಕಗಳ ಬಲದಿಂದ ಮಹಾರಾಷ್ಟ್ರ ತಂಡವು ಇಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ಕೆ. ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್ ಎದುರು ಎರಡನೇ ಇನಿಂಗ್ಸ್‌ನಲ್ಲೂ ಬೃಹತ್ ಮೊತ್ತದತ್ತ ಸಾಗಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.