ಮುಂಬೈ: ಮಹೇಂದ್ರ ಸಿಂಗ್ ಧೋನಿ ಅವರು ನನ್ನ ಅಂಗಿ ಮೇಲೆ ಸಹಿ ಹಾಕಿದ್ದು ಭಾವನಾತ್ಮಕ ಕ್ಷಣ ಎಂದು ಭಾರತ ತಂಡ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಭಾನುವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ನಡುವಣ ಪಂದ್ಯದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ಗವಾಸ್ಕರ್ ಅವರ ಅಂಗಿಯ ಮೇಲೆ ಸಹಿ ಹಾಕಿದ್ದರು.

ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

‘ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು ಗೌರವ ಸ್ವೀಕಾರಕ್ಕೆ ಹೋಗುವಾಗ, ಆ ಕ್ಷಣವನ್ನು ವಿಶೇಷವನ್ನಾಗಿ ಮಾಡಲು ನಾನು ನಿರ್ಧರಿಸಿದೆ. ಹೀಗಾಗಿ ನಾನು ಧೋನಿ ಅವರ ಬಳಿಗೆ ಓಡಿ ಹೋಗಿ ಅವರ ಆಟೋಗ್ರಾಫ್ ತೆಗೆದುಕೊಂಡೆ. ಅದು ಚೆಪಾಕ್‌ನಲ್ಲಿ ಅವರ ಕೊನೆಯ ಪಂದ್ಯವಾಗಿತ್ತು‘ ಎಂದು ಅವರು ಹೇಳಿದ್ದಾರೆ.

‘ಆ ಕ್ಷಣ ನನಗೆ ಅತ್ಯಂತ ಭಾವನಾತ್ಮಕವಾಗಿತ್ತು. ಯಾಕೆಂದರೆ ಅವರು ಭಾರತೀಯ ಕ್ರಿಕೆಟ್‌ಗೆ ಅಗಾಧ ಕೊಡುಗೆ ನೀಡಿದ್ದಾರೆ‘ ಎಂದು ಅವರು ನುಡಿದಿದ್ದಾರೆ.

‘ಒಂದು ವೇಳೆ ಚೆನ್ನೈ ಪ್ಲೇ–ಆಫ್‌ಗೆ ಪ್ರವೇಶ ಪಡೆದರೆ, ಖಂಡಿತವಾಗಿಯೂ ಚೆಪಾಕ್‌ನಲ್ಲಿ ಆಟವಾಡಲು ಧೋನಿಯವರಿಗೆ ಮತ್ತೊಂದು ಅವಕಾಶ ಸಿಗಲಿದೆ. ಆದರೆ ಆ ಕ್ಷಣವನ್ನು ನಾನು ವಿಶೇಷವಾಗಿಸಬೇಕಿತ್ತು. ಕ್ಯಾಮೆರಾ ಹಿಡಿದುಕೊಂಡಿದ್ದ ವ್ಯಕ್ತಿ ಜತೆ ಫೌಂಟೆನ್ ಪೆನ್ ಇದ್ದಿದ್ದು ನನ್ನ ಅದೃಷ್ಟ. ಆ ವ್ಯಕ್ತಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ‘ ಎಂದು ಗವಾಸ್ಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.