ಗಪ್ಟಿಲ್ ಶತಕ; ಬಾಂಗ್ಲಾ ಎದುರು ನ್ಯೂಜಿಲೆಂಡ್‌ಗೆ ಎಂಟು ವಿಕೆಟ್‌ಗಳ ಜಯ

7

ಗಪ್ಟಿಲ್ ಶತಕ; ಬಾಂಗ್ಲಾ ಎದುರು ನ್ಯೂಜಿಲೆಂಡ್‌ಗೆ ಎಂಟು ವಿಕೆಟ್‌ಗಳ ಜಯ

Published:
Updated:
Prajavani

ನೇಪಿಯರ್: ಬಹಳ ದಿನಗಳಿಂದ ರನ್‌ ಗಳಿಕೆ ಬರ ಎದುರಿಸಿದ್ದ ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ ಬುಧವಾರ ಲಯಕ್ಕೆ ಮರಳಿದರು. ಅವರು ಗಳಿಸಿದ ಭರ್ಜರಿ ಶತಕದ ನೆರವಿನಿಂದ ಆತಿಥೇಯ ತಂಡವು ಬಾಂಗ್ಲಾ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಎಂಟು ವಿಕೆಟ್‌ಗಳ ಜಯ ಸಾಧಿಸಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 48.5ಓವರ್‌ಗಳಲ್ಲಿ 232ರನ್‌ಗಳಿಸಿ ಆಲೌಟ್‌ ಆಯಿತು. ಕೇವಲ 94ರನ್‌ ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾ ಇನಿಂಗ್ಸ್‌ಗೆ ಮೊಹಮದ್‌ ಮಿಥುನ್‌ ಗಳಿಸಿದ 62ರನ್‌ ಬಲ ತುಂಬಿತು.

ಈ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್‌ 44.3ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ಕಳೆಕೊಂಡು ಗುರಿ ತಲುಪಿತು. ಆರಂಭಿಕರಾದ ಗಪ್ಟಿಲ್ ಶತಕ (117ರನ್ ಅಜೇಯ) ಹಾಗೂ ಹೆನ್ರಿ ನಿಕೊಲ್ಸ್ ಅರ್ಧಶತಕ(53ರನ್) ಸಿಡಿಸಿ ಸಂಭ್ರಮಿಸಿದರು. ಹೀಗಾಗಿ ಕಿವೀಸ್‌ ಪಡೆ ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಸಂಕ್ಷಿಪ್ತ ಸ್ಕೋರು

ಬಾಂಗ್ಲಾದೇಶ: 48.5 ಓವರ್‌ಗಳಲ್ಲಿ 232ರನ್‌ ಗಳಿಗೆ ಆಲೌಟ್‌

ನ್ಯೂಜಿಲೆಂಡ್: 44.3 ಓವರ್‌ಗಳಲ್ಲಿ2 ವಿಕೆಟ್‌ಗಳಿಗೆ 233ರನ್‌

ಫಲಿತಾಂಶ: ನ್ಯೂಜಿಲೆಂಡ್‌ಗೆ ಎಂಟು ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !