ಚೆನ್ನೈ: ದಿಗ್ಗಜ ಆಟಗಾರರು ಬೇಗನೇ ಮರಳಿದರೂ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಮೋಹಕ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಕೈ ಹಿಡಿದರು. ಅವರ ಏಕಾಂಗಿ ಹೋರಾಟದ ಫಲವಾಗಿ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಸವಾಲಿನ ಮೊತ್ತ ಗಳಿಸಿತು.

ಬುಧವಾರ ರಾತ್ರಿ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಮ್ಯಾಕ್ಸ್ವೆಲ್ (59; 41 ಎಸೆತ, 5 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ನೆರವಿನಿಂದ ಎಂಟು ವಿಕೆಟ್ಗಳಿಗೆ 149 ರನ್ ಕಲೆ ಹಾಕಿತು. ಆರಂಭಿಕ ಬ್ಯಾಟ್ಸ್ಮನ್, ನಾಯಕ ವಿರಾಟ್ ಕೊಹ್ಲಿ (33; 29 ಎಸೆತ, 4 ಬೌಂಡರಿ) ಹೊರತುಪಡಿಸಿದರೆ ಉಳಿದವರೆಲ್ಲರೂ ನಿರೀಕ್ಷೆ ಹುಸಿಗೊಳಿಸಿದರು.

ಓದಿ:IPL 2021 LIVE | SRH vs RCB: 150 ಟಾರ್ಗೆಟ್; ಮೊದಲ ಆಘಾತ ನೀಡಿದ ಸಿರಾಜ್

ಕೋವಿಡ್ ಸೋಂಕಿನಿಂದ ಗುಣಮುಖರಾಗಿ ತಂಡ ಸೇರಿಕೊಂಡಿರುವ ಕರ್ನಾಟಕದ ದೇವದತ್ತ ಪಡಿಕ್ಕಲ್ ನಾಯಕ ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸಿದರು. ಮೊದಲ ಪಂದ್ಯದಲ್ಲಿ ಕೊಹ್ಲಿ ಜೊತೆ ಕಣಕ್ಕೆ ಇಳಿದಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ಕೆಳಕ್ರಮಾಂಕದಲ್ಲಿ ಕಳುಹಿಸಲು ನಿರ್ಧರಿಸಲಾಗಿತ್ತು. ಪಿಂಚ್ ಹಿಟ್ಟರ್ ರೂಪದಲ್ಲಿ ಶಹಬಾಜ್ ಅಹಮ್ಮದ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳುಹಿಸಲು ನಿರ್ಧರಿಸಲಾಗಿತ್ತು.

ಆದರೆ ಈ ಪ್ರಯೋಗಗಳು ಆರ್ಸಿಬಿಯ ಕೈ ಹಿಡಿಯಲಿಲ್ಲ. ಮೊದಲ ಓವರ್ನ ಎರಡನೇ ಎಸೆತದಲ್ಲೇ ಭುವನೇಶ್ವರ್ ಕುಮಾರ್ ಅವರನ್ನು ಬೌಂಡರಿಗೆ ಅಟ್ಟಿದ ವಿರಾಟ್ ಕೊಹ್ಲಿ ಭರವಸೆ ಮೂಡಿಸಿದರು. ಜೇಸನ್ ಹೋಲ್ಡರ್ ಹಾಕಿದ ಎರಡನೇ ಓವರ್ನ ಮೊದಲ ಮತ್ತು ಐದನೇ ಎಸೆತದಲ್ಲಿ ಪಡಿಕ್ಕಲ್ ಕೂಡ ಬೌಂಡರಿ ಸಿಡಿಸಿದರು. ಆದರೆ ಮೂರನೇ ಓವರ್ನಲ್ಲಿ ಈ ಜೊತೆಯಾಟವನ್ನು ಮುರಿದ ಭುವನೇಶ್ವರ್ ಕುಮಾರ್ ಹೈದರಾಬಾದ್ ತಂಡದಲ್ಲಿ ಸಂಭ್ರಮ ಮೂಡಿಸಿದರು.

ತಂಡದ ಮೊದಲ ಸಿಕ್ಸರ್ ಐದನೇ ಓವರ್ನಲ್ಲಿ ಶಹಬಾಜ್ ಅವರ ಬ್ಯಾಟಿನಿಂದ ಬಂತು. ಆದರೆ ಏಳನೇ ಓವರ್ನಲ್ಲಿ ಡೀಪ್ ಸ್ಕ್ವೇರ್ನಲ್ಲಿದ್ದ ರಶೀದ್ ಖಾನ್ ಪಡೆದ ಮೋಹಕ ಕ್ಯಾಚ್ಗೆ ಶಹಬಾಜ್ ಬಲಿಯಾದರು. ಮ್ಯಾಕ್ಸ್ವೆಲ್ ಕ್ರೀಸ್ಗೆ ಬಂದ ನಂತರ ವೇಗವಾಗಿ ರನ್ಗಳು ಹರಿದು ಬಂದವು. ನದೀಮ್ ಹಾಕಿದ 11ನೇ ಓವರ್ನಲ್ಲಿ ಮ್ಯಾಕ್ಸ್ವೆಲ್ ಮತ್ತು ಕೊಹ್ಲಿ 22 ರನ್ ಕಲೆ ಹಾಕಿದರು.

100ನೇ ಟಿ20 ಪಂದ್ಯ ಆಡಿದ ವಿಜಯಶಂಕರ್ ಪಡೆದ ಮೋಹಕ ಕ್ಯಾಚ್ಗೆ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡರು. ಡಿವಿಲಿಯರ್ಸ್ ಮತ್ತು ವಾಷಿಂಗ್ಟನ್ ಕೂಡ ಬೇಗನೇ ಮರಳಿದರು. ಜೆಮೀಸನ್ ಜೊತೆಗೂಡಿ ಮ್ಯಕ್ಸ್ವೆಲ್ ಇನಿಂಗ್ಸ್ ಕಟ್ಟಿದರು. ಒಂಬತ್ತು ಎಸೆತಗಳಲ್ಲಿ 12 ರನ್ ಗಳಿಸಿದ ಜೆಮೀಸನ್ ಔಟಾದ ಬೆನ್ನಲ್ಲೇ ಮ್ಯಾಕ್ಸ್ವೆಲ್ ಅರ್ಧಶತಕ ಪೂರೈಸಿದರು. ಐದು ವರ್ಷಗಳಲ್ಲಿ ಐಪಿಎಲ್ನಲ್ಲಿ ಅವರ ಗಳಿಸಿದ ಮೊದಲ ಅರ್ಧಶತಕ ಆಗಿತ್ತು ಇದು. ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಕಳೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.